ಹಾಗಾದರೆ ನಮಗೆ ನಾವೇ ನೇಣು ಹಾಕಿಕೊಳ್ಳಬೇಕೇ ?

ಆಡಳಿತಗಾರರು ಜನರ ಸಮಸ್ಯೆಗಳನ್ನು ಅರಿತು ಸಂದೇಹ ವಿವಾರಣೆ ಮಾಡಬೇಕು; ಆದರೆ ಹಾಗೆ ಮಾಡುವಾಗ ಅವನು ಸಿಟ್ಟಾಗಿದ್ದರೆ, ಅವರ ಬಗ್ಗೆ ಜನರ ಮನಸ್ಸಿನಲ್ಲಿ ಅಭಿಮಾನವನ್ನು ಮೂಡಲು ಸಾಧ್ಯವಿದೆಯೇನು ?

ಕೊರೋನಾ ಪೀಡಿತ ತನ್ನ ತಂದೆಗಾಗಿ ಆಮ್ಲಜನಕ ಸಿಲಿಂಡರ್ ಹುಡುಕುತಿದ್ದ ಹುಡುಗಿಗೆ ಮೊತ್ತದ ಬದಲು ಲೈಂಗಿಕ ಸಂಬಂಧದ ಬೇಡಿಕೆ

ಇಂತಹ ಕಾಮುಕರಿಗೆ ಸರಕಾರವು ಜೀವಾವಧಿ ಜೈಲು ಶಿಕ್ಷೆ ವಿಧಿಸಬೇಕು ! ಇಂತಹ ಸಮಯದಲ್ಲಿ ಪೊಲೀಸರು ಸ್ವಃತ ಅಪರಾಧವನ್ನು ನೋಂದಾಯಿಸಿ ಆರೋಪಿಗಳನ್ನು ಏಕೆ ಬಂಧಿಸುವುದಿಲ್ಲ? ಅಥವಾ ಅವರಿಗೆ ಈ ಬಗ್ಗೆ ಏನೂ ಅನಿಸುವುದಿಲ್ಲವೇ ?

ಚಿತ್ರಕೂಟ್ (ಉತ್ತರ ಪ್ರದೇಶ) ದ ಜೈಲಿನಲ್ಲಿ ಬಂಧಿತ ಗೂಂಡಾನಿಂದಾದ ಗುಂಡು ಹಾರಾಟದಲ್ಲಿ ಇಬ್ಬರು ಗೂಂಡಾಗಳ ಸಾವು

ಬಂದೂಕುಗಳು ಕಾರಾಗೃಹಗಳಿಗೆ ಹೇಗೆ ತಲುಪುತ್ತವೆ ? ಜೈಲಿನಲ್ಲಿರುವ ಪೊಲೀಸರು ನಿದ್ದೆ ಮಾಡುತ್ತಿದ್ದಾರೆಯೇ ಅಥವಾ ಅವರ ರಹಸ್ಯ ಬೆಂಬಲದಿಂದಲೇ ಶಸ್ತ್ರಾಸ್ತ್ರಗಳು ತಲುಪುತ್ತದೆಯೇ, ಎಂಬ ಬಗ್ಗೆ ತನಿಖೆ ನಡೆಸಬೇಕು !

ವಿಧವೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ ಪೊಲೀಸ್ ಅಧಿಕಾರಿಯ ರೆಡ್ ಹ್ಯಾಂಡ್ ಆಗಿ ಬಂಧನ

ಗುರವಿಂದರ್ ನು ಅಫೀಮು ಕಳ್ಳಸಾಗಣೆಯ ಸುಳ್ಳು ಆರೋಪದ ಮೇಲೆ ವಿಧವೆಯ ೨೦ ವರ್ಷದ ಮಗನನ್ನು ಬಂಧಿಸಿದ್ದರು. ಮಗನನ್ನು ಬಿಡುಗಡೆಗೊಳಿಸಲು ಗುರವಿಂದರ್ ವಿಧವೆಯಿಂದ ೨ ಲಕ್ಷ ರೂಪಾಯಿ ಬೇಡಿಕೆ ಇಟ್ಟನು. ಒಂದುಸಲ ಗುರವಿಂದರ್ ನೇರವಾಗಿ ಮಹಿಳೆಯ ಮನೆಗೆ ಹೋಗಿ ಮಗನ ಚಿಕಿತ್ಸೆಗಾಗಿ ಠೇವಣಿ ಇಟ್ಟಿದ್ದ ೬೦೦೦೦ ರೂಪಾಯಿಗಳನ್ನು ಕಸಿದುಕೊಂಡನು.

ತನ್ನ ಸಹೋದರನಿಗೆ ಆಮ್ಲಜನಕದ ಸಿಲಿಂಡರ್ ಸಿಗಲಿಲ್ಲವೆಂದು ಮಂತ್ರಿಗಳಿಗೆ ಬೆದರಿಕೆ ಹಾಕಿದ ಸೈನಿಕನ ವಿರುದ್ಧ ಅಪರಾಧ ದಾಖಲು

ಕೊರೊನಾ ಪೀಡಿತ ತನ್ನ ತಮ್ಮನಿಗೆ ಆಮ್ಲಜನಕದ ಸಿಲಿಂಡರ್ ಸಿಗಲಿಲ್ಲ ಎಂದು ಓರ್ವ ಸೈನಿಕನು ಗುರುಗ್ರಾಮದ ಸಂಸದ ಮತ್ತು ಕೇಂದ್ರ ಸಚಿವ ಇಂದ್ರಜಿತ್ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದನು, ಆದ್ದರಿಂದ ಆ ಸೈನಿಕನ ವಿರುದ್ಧ ರಾಮಪುರಾ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲರೂ ಯಜ್ಞ ಮಾಡಿ ಆಹುತಿ ನೀಡಿದರೆ ಕೊರೊನಾದ ಮೂರನೇ ಅಲೆಯು ದೇಶವನ್ನು ಮುಟ್ಟಲು ಸಾಧ್ಯವಾಗುವುದಿಲ್ಲ ! – ಮಧ್ಯಪ್ರದೇಶದ ಸಚಿವೆ ಉಷಾ ಠಾಕೂರ್

ಯಜ್ಞ-ಯಾಗದಲ್ಲಿ ಶಕ್ತಿ ಇದೆ ಮತ್ತು ಅದನ್ನು ಮಾಡುವುದು ಯಾವಾಗಲೂ ಒಳ್ಳೆಯದೇ; ಆದರೆ ಅದರೊಂದಿಗೆ, ಪ್ರತಿಯೊಬ್ಬ ಭಾರತೀಯನು ಕಠಿಣ ಸಾಧನೆ ಮಾಡುವ ಮೂಲಕ ಈಶ್ವರನಲ್ಲಿ ಮೊರೆಯಿಟ್ಟರೆ, ಕೊರೊನಾ ಮಾತ್ರವಲ್ಲ, ದೇಶವನ್ನು ಎಲ್ಲ ರೀತಿಯ ಸಂಕಟಗಳಿಂದ ರಕ್ಷಿಸುತ್ತಾನೆ, ಎಂಬುದು ಖಂಡಿತ !

ಕಟಿಹಾರ್ (ಬಿಹಾರ) ಆಸ್ಪತ್ರೆಯ ಸಿಬ್ಬಂದಿಯಿಂದಲೇ ಕೊರೋನಾ ಸಂತ್ರಸ್ತರ ಶವಗಳನ್ನು ನದಿಗೆ ಎಸೆಯುವ ಖೇದಕರ ಕೃತ್ಯ ಬಹಿರಂಗ

ಕಳೆದ ಕೆಲವು ದಿನಗಳಿಂದ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಸತತವಾಗಿ ಇಂತಹ ಘಟನೆಗಳು ಬಹಿರಂಗವಾಗುತ್ತಿದ್ದರೂ ಅದನ್ನು ತಡೆಯುವಲ್ಲಿ ಆಡಳಿತವು ಏಕೆ ನಿಷ್ಕ್ರಿಯವಾಗಿದೆ ? ಅಥವಾ ನ್ಯಾಯಾಲಯ ಆದೇಶ ನೀಡಬೇಕು ಎಂದು ಅವರಿಗೆ ಅನಿಸುತ್ತದೆಯೇ ?

ಸಂಚಾರ ನಿಷೇಧವನ್ನು ಉಲ್ಲಂಘಿಸಿದ್ದಕ್ಕಾಗಿ ಗೋರಖ್‌ಪುರದ (ಉತ್ತರ ಪ್ರದೇಶ) ಮಸೀದಿಯ ಇಮಾಮ್‌ನನ್ನು ಥಳಿಸಿದ ಪೊಲೀಸ್ ಅಧಿಕಾರಿ !

ಇಲ್ಲಿಯ ತುರ್ಕಮಾನಪುರದಲ್ಲಿ ಮಸೀದಿಯ ಹೊರಗೆ ಓರ್ವ ಈಮಾಮನನ್ನು ಪೊಲೀಸ ಅಧಿಕಾರಿಯು ಸಂಚಾರ ನಿಷೇಧವನ್ನು ಉಲ್ಲಂಘಿಸಿದಕ್ಕಾಗಿ ಥಳಿಸಿದ್ದರಿಂದ ಬಿಗುವಿನ ವಾತಾವರಣ ಮೂಡಿತು. ಮತಾಂಧರ ಗುಂಪು ಇಲ್ಲಿನ ಪೊಲೀಸ್ ಠಾಣೆಯ ಪೊಲೀಸರನ್ನು ಮುತ್ತಿಗೆ ಹಾಕಿದರು.

‘ಕ್ವಾಡ್’ನಲ್ಲಿ ಸಹಭಾಗಿ ಆಗುವ ಬಗ್ಗೆ ಬೆದರಿಕೆ ನೀಡುವ ಚೀನಾಕ್ಕೆ ಬಾಂಗ್ಲಾದೇಶದಿಂದ ಕಪಾಳಮೋಕ್ಷ !

ಅಮೇರಿಕಾ, ಜಪಾನ, ಆಸ್ಟ್ರೇಲಿಯಾ ಮತ್ತು ಭಾರತ ಈ ದೇಶಗಳ ‘ಕ್ವಾಡ್’ ಗುಂಪಿನಲ್ಲಿ ಸಹಭಾಗಿ ಆಗಿದ್ದಕ್ಕಾಗಿ ಬೆದರಿಕೆ ನೀಡುವ ಚೀನಾಗೆ ಬಾಂಗ್ಲಾದೇಶವು ಕಪಾಳಮೋಕ್ಷ ನೀಡಿದೆ. ‘ಬಾಂಗ್ಲಾದೇಶವು ‘ಕ್ವಾಡ್’ ನಲ್ಲಿ (ಕ್ವಾಡಿಲೆಟ್ರಲ ಸಿಕ್ಯುರಿಟಿ ಡಾಯಲಾಗ’ನಲ್ಲಿ) ಸಹಭಾಗಿಯಾದರೆ ದ್ವಿಪಕ್ಷೀಯ ಸಂಬಂಧಗಳು ಹದಗೆಡುತ್ತವೆ’, ಎಂದು ಚೀನಾದ ರಾಯಭಾರಿ ಲಿ ಜಿಮಿಂಗ್ ಎಚ್ಚರಿಕೆ ನೀಡಿದ್ದರು.

ನಟಿ ಪ್ರಿಯಾಂಕಾ ಚೋಪ್ರಾ ಧರಿಸಿರುವ ಜಾಕೆಟ್‌ನ ಹಿಂಭಾಗದಲ್ಲಿ ಶ್ರೀ ಮಹಾಕಾಳಿ ದೇವಿಯ ಚಿತ್ರ

ನಟಿ ಪ್ರಿಯಾಂಕಾ ಚೋಪ್ರಾ ಅವರ ಒಂದು ಛಾಯಾಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಅವರು ಧರಿಸಿರುವ ಜಾಕೆಟ್‌ನ ಹಿಂಭಾಗದಲ್ಲಿ ಶ್ರೀ ಮಹಾಕಾಳಿ ದೇವಿಯ ಚಿತ್ರವಿದೆ. ಆದ್ದರಿಂದ ಅವರನ್ನು ಸಾಮಾಜಿಕ ಮಾಧ್ಯಮದಿಂದ ಟೀಕಿಸಲಾಗುತ್ತಿದೆ.