ತನ್ನ ಸಹೋದರನಿಗೆ ಆಮ್ಲಜನಕದ ಸಿಲಿಂಡರ್ ಸಿಗಲಿಲ್ಲವೆಂದು ಮಂತ್ರಿಗಳಿಗೆ ಬೆದರಿಕೆ ಹಾಕಿದ ಸೈನಿಕನ ವಿರುದ್ಧ ಅಪರಾಧ ದಾಖಲು

ನಾಳೆ ಇಂತಹ ಪರಿಸ್ಥಿತಿಯಿಂದ ದೇಶದಲ್ಲಿ ಅರಾಜಕತೆ ಹರಡಿದರೆ ಆಶ್ಚರ್ಯವೇನಿಲ್ಲ !

ರೇವಾಡಿ (ಹರಿಯಾಣ) – ಕೊರೊನಾ ಪೀಡಿತ ತನ್ನ ತಮ್ಮನಿಗೆ ಆಮ್ಲಜನಕದ ಸಿಲಿಂಡರ್ ಸಿಗಲಿಲ್ಲ ಎಂದು ಓರ್ವ ಸೈನಿಕನು ಗುರುಗ್ರಾಮದ ಸಂಸದ ಮತ್ತು ಕೇಂದ್ರ ಸಚಿವ ಇಂದ್ರಜಿತ್ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದನು, ಆದ್ದರಿಂದ ಆ ಸೈನಿಕನ ವಿರುದ್ಧ ರಾಮಪುರಾ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸೈನಿಕನು ವಿಡಿಯೋದಲ್ಲಿ ‘ನನ್ನ ತಮ್ಮನಿಗೆ ಕೊರೋನಾ ಸೋಂಕು ತಗುಲಿ ಗಂಭೀರ ಸ್ಥಿತಿಯಲ್ಲಿದ್ದಾನೆ. ನನಗೆ ರೇವಾಡಿಯಲ್ಲಿ ಎಷ್ಟು ಹುಡುಕಿದರೂ ಆಮ್ಲಜನಕ ಸಿಲಿಂಡರ್ ಸಿಗಲಿಲ್ಲ. ನಾನು ಗುರುಗ್ರಾಮದಿಂದ ೭೦೦೦೦ ರೂಪಾಯಿಗೆ ಆಮ್ಲಜನಕ ಸಿಲಿಂಡರ್ ಖರೀದಿಸಬೇಕಾಯಿತು. ಇದರ ನಂತರ ಅವರು ಕೇಂದ್ರ ಸಚಿವ ಇಂದರ್ಜಿತ್ ಸಿಂಗ್ ಅವರನ್ನು ಅವಾಚ್ಯ ಭಾಷೆಯಲ್ಲಿ ನಿಂದಿಸುತ್ತಾ ಬೆದರಿಕೆ ಹಾಕಿದರು.