ಕಟಿಹಾರ್ (ಬಿಹಾರ) ಆಸ್ಪತ್ರೆಯ ಸಿಬ್ಬಂದಿಯಿಂದಲೇ ಕೊರೋನಾ ಸಂತ್ರಸ್ತರ ಶವಗಳನ್ನು ನದಿಗೆ ಎಸೆಯುವ ಖೇದಕರ ಕೃತ್ಯ ಬಹಿರಂಗ

ಸರಕಾರವು ಇಂತಹ ಕನಿಕರವಿಲ್ಲದ ಮತ್ತು ಸಮಾಜದ್ರೋಹಿ ನೌಕರರಿಗೆ ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು !

ಕಳೆದ ಕೆಲವು ದಿನಗಳಿಂದ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಸತತವಾಗಿ ಇಂತಹ ಘಟನೆಗಳು ಬಹಿರಂಗವಾಗುತ್ತಿದ್ದರೂ ಅದನ್ನು ತಡೆಯುವಲ್ಲಿ ಆಡಳಿತವು ಏಕೆ ನಿಷ್ಕ್ರಿಯವಾಗಿದೆ ? ಅಥವಾ ನ್ಯಾಯಾಲಯ ಆದೇಶ ನೀಡಬೇಕು ಎಂದು ಅವರಿಗೆ ಅನಿಸುತ್ತದೆಯೇ ?

ಕಟಿಹಾರ (ಬಿಹಾರ) – ಇಲ್ಲಿಯ ಒಂದು ಆಸ್ಪತ್ರೆಯ ಸಿಬ್ಬಂದಿಗಳು ಕೊರೋನಾ ಸಂತ್ರಸ್ತರ ಶವಗಳನ್ನು ನದಿಗೆ ಎಸೆದಿರುವ ಘಟನೆಯು ಬೆಳಕಿಗೆ ಬಂದಿದೆ. ಬಿಹಾರದ ಬಕ್ಸರ್ ನಲ್ಲಿಯೇ ಗಂಗಾ ನದಿಯಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಶವಗಳು ಪತ್ತೆಯಾಗಿರುವುದು ಅಚ್ಚ ಹಸಿರಿರುವಾಗಲೇ ಈ ಘಟನೆಯು ಬೆಳಕಿಗೆ ಬಂದಿದೆ.

( ಸೌಜನ್ಯ: MIRROR NOW)

ಕಟಿಹಾರ್ ನಲ್ಲಿ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಆಸ್ಪತ್ರೆಯ ಸಿಬ್ಬಂದಿ ಶವಗಳನ್ನು ಆಂಬುಲೆನ್ಸ್ ನಿಂದ ತೆಗೆದು ನಂತರ ಅವುಗಳನ್ನು ನದಿಗೆ ಎಸೆಯುತ್ತಿರುವುದು ಕಂಡುಬರುತ್ತದೆ. ಈ ಘಟನೆಯ ನಂತರ ಜಿಲ್ಲಾಡಳಿವು ತನಿಖೆಗೆ ಆದೇಶಿಸಿದೆ. ಜೊತೆಗೆ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ನೋಟಿಸ್ ನೀಡಲಾಗಿದ್ದು, ೨೪ ಗಂಟೆಯೊಳಗೆ ವರದಿಯನ್ನು ಕಳುಹಿಸುವಂತೆ ಆದೇಶ ನೀಡಿದೆ.