ವಿಧವೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ ಪೊಲೀಸ್ ಅಧಿಕಾರಿಯ ರೆಡ್ ಹ್ಯಾಂಡ್ ಆಗಿ ಬಂಧನ

ರಕ್ಷಕ ಅಲ್ಲ ಭಕ್ಷಕರಾಗಿರುವ ಇಂತಹ ಪೊಲೀಸರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು !

ಭಟಿಂಡಾ (ಪಂಜಾಬ) – ಇಲ್ಲಿ ವಿಧವೆಯೊಬ್ಬಳ ಮೇಲೆ ಲೈಂಗಿಕ ಶೋಷಣೆಗೆ ಯತ್ನಿಸುತ್ತಿದ್ದ ಸಹಾಯಕ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಗುರವಿಂದರ್ ಸಿಂಗ್ ಅವರನ್ನು ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಗುರವಿಂದರ್ ನನ್ನು ಪೊಲೀಸ್ ಸೇವೆಯಿಂದ ತೆಗೆದುಹಾಕಲಾಗಿದೆ. ಆತನನ್ನು ಬಂಧಿಸಿ ಜೈಲಿನಲ್ಲಿ ಹಾಕಿದನಂತರ ಆತ ಆತ್ಮಹತ್ಯೆಗೆ ಯತ್ನಿಸಿದ ಎಂದು ಹೇಳಲಾಗುತ್ತಿದೆ.

ಗುರವಿಂದರ್ ನು ಅಫೀಮು ಕಳ್ಳಸಾಗಣೆಯ ಸುಳ್ಳು ಆರೋಪದ ಮೇಲೆ ವಿಧವೆಯ ೨೦ ವರ್ಷದ ಮಗನನ್ನು ಬಂಧಿಸಿದ್ದರು. ಮಗನನ್ನು ಬಿಡುಗಡೆಗೊಳಿಸಲು ಗುರವಿಂದರ್ ವಿಧವೆಯಿಂದ ೨ ಲಕ್ಷ ರೂಪಾಯಿ ಬೇಡಿಕೆ ಇಟ್ಟನು. ಒಂದುಸಲ ಗುರವಿಂದರ್ ನೇರವಾಗಿ ಮಹಿಳೆಯ ಮನೆಗೆ ಹೋಗಿ ಮಗನ ಚಿಕಿತ್ಸೆಗಾಗಿ ಠೇವಣಿ ಇಟ್ಟಿದ್ದ ೬೦೦೦೦ ರೂಪಾಯಿಗಳನ್ನು ಕಸಿದುಕೊಂಡನು. ಈ ಮಹಿಳೆಯು ೧ ಲಕ್ಷ ರೂಪಾಯಿ ಒಟ್ಟು ಮಾಡಿ ಅದನ್ನು ಗುರವಿಂದರ್ ಗೆ ಕೊಟ್ಟಳು; ಆದರೂ, ಆತ ಮಗನನ್ನು ಬಿಡುಗಡೆ ಮಾಡಲಿಲ್ಲ, ಬದಲಿಗೆ ಮಹಿಳೆಯನ್ನು ತನ್ನೊಂದಿಗೆ ಶಾರೀರಿಕ ಸಂಬಂಧವಿಡುವಂತೆ ಕೇಳಿಕೊಂಡನು. ಈ ಮಹಿಳೆಯು ಈ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಗ್ರಾಮಸ್ಥರು ಬಲೆ ಬೀಸಿದರು ಮತ್ತು ಗುರವಿಂದರ್ ಸಂಬಂಧಪಟ್ಟ ಮಹಿಳೆಯ ಮನೆಗೆ ಬಂದಾಗ, ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು.