ನಟಿ ಪ್ರಿಯಾಂಕಾ ಚೋಪ್ರಾ ಧರಿಸಿರುವ ಜಾಕೆಟ್‌ನ ಹಿಂಭಾಗದಲ್ಲಿ ಶ್ರೀ ಮಹಾಕಾಳಿ ದೇವಿಯ ಚಿತ್ರ

ಸಾಮಾಜಿಕ ಮಾಧ್ಯಮದಿಂದ ಪ್ರಿಯಾಂಕಾ ಚೋಪ್ರಾ ಟೀಕೆಗೆ ಗುರಿ

ಹಿಂದೂಗಳಿಂದಲೇ ಹಿಂದೂ ದೇವತೆಗಳ ಅವಮಾನವಾಗುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ಕೇಂದ್ರ ಸರಕಾರವು ಈ ರೀತಿಯಲ್ಲಿ ಅವಮಾನಿಸುವವರ ವಿರುದ್ಧ ಧರ್ಮನಿಂದನೆಯ ಕಾನೂನನ್ನು ನಿರ್ಮಿಸುವುದು ಅಗತ್ಯವಿದೆ !

ಸೂಚನೆ : ಈ ಚಿತ್ರ ಹಾಕುವುದರ ಹಿಂದಿನ ಉದ್ದೇಶ ಯಾರ ಭಾವನೆಗೆ ನೋವನ್ನುಂಟು ಮಾಡುವುದಾಗಿರದೆ ನಿಜ ಸಂಗತಿಯನ್ನು ತಿಳಿಸುವ ಉದ್ದೇಶವಾಗಿದೆ

ನವದೆಹಲಿ – ನಟಿ ಪ್ರಿಯಾಂಕಾ ಚೋಪ್ರಾ ಅವರ ಒಂದು ಛಾಯಾಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಅವರು ಧರಿಸಿರುವ ಜಾಕೆಟ್‌ನ ಹಿಂಭಾಗದಲ್ಲಿ ಶ್ರೀ ಮಹಾಕಾಳಿ ದೇವಿಯ ಚಿತ್ರವಿದೆ. ಆದ್ದರಿಂದ ಅವರನ್ನು ಸಾಮಾಜಿಕ ಮಾಧ್ಯಮದಿಂದ ಟೀಕಿಸಲಾಗುತ್ತಿದೆ. ಟೀಕೆ ಮಾಡುವಾಗ ಅನೇಕರು ‘ಹೀಗೆ ಮಾಡುವಾಗ ನಿನಗೆ ನಾಚಿಕೆಯಾಗಬೇಕು’, ಕನಿಷ್ಠ ಪಕ್ಷ ಧರ್ಮವನ್ನು ಅವಮಾನಿಸಬೇಡ’, ‘ದೇವರನ್ನು ಫ್ಯಾಷನ್‌ನಿಂದ ದೂರವಿಡು’ ಎಂಬ ಶಬ್ದಗಳಲ್ಲಿ ಬುದ್ಧಿ ಹೇಳಿದ್ದಾರೆ.