ನಮ್ಮ ವಿದೇಶಾಂಗ ನೀತಿಯನ್ನು ನಾವೇ ನಿರ್ಧರಿಸುತ್ತೇವೆ !
|
ಢಾಕಾ (ಬಾಂಗ್ಲಾದೇಶ) – ಅಮೇರಿಕಾ, ಜಪಾನ, ಆಸ್ಟ್ರೇಲಿಯಾ ಮತ್ತು ಭಾರತ ಈ ದೇಶಗಳ ‘ಕ್ವಾಡ್’ ಗುಂಪಿನಲ್ಲಿ ಸಹಭಾಗಿ ಆಗಿದ್ದಕ್ಕಾಗಿ ಬೆದರಿಕೆ ನೀಡುವ ಚೀನಾಗೆ ಬಾಂಗ್ಲಾದೇಶವು ಕಪಾಳಮೋಕ್ಷ ನೀಡಿದೆ. ‘ಬಾಂಗ್ಲಾದೇಶವು ‘ಕ್ವಾಡ್’ ನಲ್ಲಿ (ಕ್ವಾಡಿಲೆಟ್ರಲ ಸಿಕ್ಯುರಿಟಿ ಡಾಯಲಾಗ’ನಲ್ಲಿ) ಸಹಭಾಗಿಯಾದರೆ ದ್ವಿಪಕ್ಷೀಯ ಸಂಬಂಧಗಳು ಹದಗೆಡುತ್ತವೆ’, ಎಂದು ಚೀನಾದ ರಾಯಭಾರಿ ಲಿ ಜಿಮಿಂಗ್ ಎಚ್ಚರಿಕೆ ನೀಡಿದ್ದರು. ಅದಕ್ಕೆ, ‘ಬಾಂಗ್ಲಾದೇಶವು ಒಂದು ತಟಸ್ಥ ಮತ್ತು ಸಮತೋಲಿತ ವಿದೇಶಾಂಗ ನೀತಿ ನಿರೂಪಿಸುವ ದೇಶವಾಗಿದೆ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮ ದೇಶವಾಗಿದ್ದು ನಮ್ಮದೇ ವಿದೇಶಾಂಗ ನೀತಿಯನ್ನು ನಾವು ನಿರ್ಧರಿಸುತ್ತೇವೆ’, ಎಂಬ ಶಬ್ದಗಳಲ್ಲಿ ಬಾಂಗ್ಲಾದೇಶ ವಿದೇಶಾಂಗ ಸಚಿವ ಡಾ. ಎ.ಕೆ. ಅಬ್ದುಲ ಮೊಮನ ಇವರು ಚೀನಾಗೆ ತಕ್ಕ ಉತ್ತರ ನೀಡಿದ್ದಾರೆ. ಹಿಂದೂ ಮಹಾಸಾಗರ ಮತ್ತು ಪ್ರಶಾಂತ ಮಹಾಸಾಗರ ಕ್ಷೇತ್ರದಲ್ಲಿ ಪರಸ್ಪರ ಸಹಕಾರ್ಯ ವೃದ್ಧಿಸಲು ‘ಕ್ವಾಡ’ ಗುಂಪನ್ನು ಸ್ಥಾಪಿಸಲಾಗಿದೆ.
“We decide our own foreign policy”, Bangladesh hits back at China for warning against joining the Quadhttps://t.co/xsLTdoE5Mp
— OpIndia.com (@OpIndia_com) May 12, 2021
ಅಮೇರಿಕಾ ಮತ್ತು ಬಾಂಗ್ಲಾದೇಶಗಳು ಪರಸ್ಪರ ನಿಕಟ ಸಂಬಂಧವನ್ನು ಹೊಂದಿವೆ. ನಾವು ಚೀನಾದ ರಾಯಭಾರಿಯ ಹೇಳಿಕೆಯನ್ನು ನಾವು ಗಮನಿಸಿದ್ದೇವೆ. ನಾವು ಬಾಂಗ್ಲಾದೇಶದ ವಿದೇಶಾಂಗ ನೀತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಗೌರವಿಸುತ್ತೇವೆ ಎಂದು ಅಮೇರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ನೆಡ್ ಫ್ರೈಸ್ ಹೇಳಿದ್ದಾರೆ.