ಯಜ್ಞ-ಯಾಗದಲ್ಲಿ ಶಕ್ತಿ ಇದೆ ಮತ್ತು ಅದನ್ನು ಮಾಡುವುದು ಯಾವಾಗಲೂ ಒಳ್ಳೆಯದೇ; ಆದರೆ ಅದರೊಂದಿಗೆ, ಪ್ರತಿಯೊಬ್ಬ ಭಾರತೀಯನು ಕಠಿಣ ಸಾಧನೆ ಮಾಡುವ ಮೂಲಕ ಈಶ್ವರನಲ್ಲಿ ಮೊರೆಯಿಟ್ಟರೆ, ಕೊರೊನಾ ಮಾತ್ರವಲ್ಲ, ದೇಶವನ್ನು ಎಲ್ಲ ರೀತಿಯ ಸಂಕಟಗಳಿಂದ ರಕ್ಷಿಸುತ್ತಾನೆ, ಎಂಬುದು ಖಂಡಿತ !
ಇಂದೂರ (ಮಧ್ಯಪ್ರದೇಶ) – ಎಲ್ಲರೂ ಯಜ್ಞ ಮಾಡಿ ಅದರಲ್ಲಿ ಆಹುತಿಯನ್ನು ಅರ್ಪಿಸಬೇಕು ಮತ್ತು ಪರಿಸರವನ್ನು ಶುದ್ಧೀಕರಿಸುವಂತೆ ನಾವು ಎಲ್ಲರಿಗೂ ಮನವಿ ಮಾಡುತ್ತೇವೆ. ‘ಯಜ್ಞ’ ಇದು ಪರಿಸರವನ್ನು ಶುದ್ಧೀಕರಿಸುವ ಒಂದು ವಿಧಾನವಾಗಿದ್ದು ಮತ್ತು ಇದು ಕೇವಲ ಧರ್ಮಾಂಧತೆ ಅಥವಾ ಸಂಪ್ರದಾಯವಲ್ಲ. ಆದ್ದರಿಂದ ಪ್ರತಿಯೊಬ್ಬರು ಯಜ್ಞಕ್ಕೆ ೨ ಆಹುತಿಯನ್ನು ಅರ್ಪಿಸುವ ಮೂಲಕ ಪರಿಸರವನ್ನು ಶುದ್ಧೀಕರಿಸಬೇಕು. ಆಗ ಕೊರೋನಾದ ಮೂರನೇ ಅಲೆ ನಮ್ಮ ದೇಶವನ್ನು ಮುಟ್ಟಲು ಸಾಧ್ಯವಾಗುವುದಿಲ್ಲ ಎಂದು ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಯಜ್ಞ ಮಾಡಿ, ಕೋವಿಡ್ ಮೂರನೇ ಅಲೆ ಭಾರತವನ್ನು ಮುಟ್ಟಲೂ ಸಾಧ್ಯವಿಲ್ಲ: ಸಂಸ್ಕೃತಿ ಸಚಿವೆ ಹೇಳಿಕೆ!
#UshaThakur https://t.co/DMGBCGBqz5— vijaykarnataka (@Vijaykarnataka) May 12, 2021