ಕೊರೋನಾ ಪೀಡಿತ ತನ್ನ ತಂದೆಗಾಗಿ ಆಮ್ಲಜನಕ ಸಿಲಿಂಡರ್ ಹುಡುಕುತಿದ್ದ ಹುಡುಗಿಗೆ ಮೊತ್ತದ ಬದಲು ಲೈಂಗಿಕ ಸಂಬಂಧದ ಬೇಡಿಕೆ

* ಇಂತಹ ಕಾಮುಕರಿಗೆ ಸರಕಾರವು ಜೀವಾವಧಿ ಜೈಲು ಶಿಕ್ಷೆ ವಿಧಿಸಬೇಕು ! ಇಂತಹ ಸಮಯದಲ್ಲಿ ಪೊಲೀಸರು ಸ್ವಃತ ಅಪರಾಧವನ್ನು ನೋಂದಾಯಿಸಿ ಆರೋಪಿಗಳನ್ನು ಏಕೆ ಬಂಧಿಸುವುದಿಲ್ಲ? ಅಥವಾ ಅವರಿಗೆ ಈ ಬಗ್ಗೆ ಏನೂ ಅನಿಸುವುದಿಲ್ಲವೇ ?

* ಈ ಘಟನೆಯ ಬಗ್ಗೆ ಮಹಿಳಾ ಆಯೋಗವು ಏಕೆ ಮೌನವಾಗಿದೆ ? ಆರೋಪಿಯನ್ನು ಬಂಧಿಸುವಂತೆ ಅವರು ಏಕೆ ಒತ್ತಾಯಿಸುವುದಿಲ್ಲ ?

ನವ ದೆಹಲಿ – ಕೊರೋನಾ ಪೀಡಿತ ತಂದೆಗಾಗಿ ಆಕ್ಸಿಜನ್ ಸಿಲಿಂಡರ್ ಹುಡುಕುವ ಹುಡುಗಿಯ ಬಳಿ ಮೊತ್ತದ ಬದಲಾಗಿ ಲೈಂಗಿಕ ಸಂಬಂಧದ ಬೇಡಿಕೆಯಿಟ್ಟ ನೆರೆಮನೆಯವರ ಅಸಹ್ಯಕರ ಘಟನೆ ಬೆಳಕಿಗೆ ಬಂದಿದೆ.

ಸಂತ್ರಸ್ತೆ ತನ್ನ ಕೊರೋನಾ ಪೀಡಿತ ತಂದೆಗೆ ಆಮ್ಲಜನಕ ಸಿಲಿಂಡರ್ ಹುಡುಕುತ್ತಿದ್ದಳು. ಅದೇ ಸಮಯದಲ್ಲಿ ಆಕೆಯ ನೆರೆಯಲ್ಲಿರುವ ವ್ಯಕ್ತಿಯು ಆಕ್ಸಿಜನ್ ಸಿಲಿಂಡರ್  ಗೆ ಬದಲಾಗಿ ಹುಡುಗಿಯಿಂದ ಲೈಂಗಿಕತೆಯನ್ನು ಕೇಳಿದರು. ಆ ವ್ಯಕ್ತಿಯ ಅತ್ಯಂತ ಅಸಹ್ಯಕರ ಭಾಷೆಯಲ್ಲಿ ಬೇಡಿಕೆಯನ್ನು ಆ ಹುಡುಗಿಯ ಬಳಿ ಇಟ್ಟನು. ಅದರ ನಂತರ, ಹುಡುಗಿಯು ಟ್ವಿಟ್ಟರ್ ನಲ್ಲಿ ಇದನ್ನು ಬಹಿರಂಗ ಪಡಿಸಿದರು. ಇದಕ್ಕೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಆರೋಪಿಗಳ ಕೈಗೆ ಬೇಡಿ ಹಾಕುವಂತೆ ಒತ್ತಾಯಿಸಿದ್ದಾರೆ.