ಕೊಯಿಲಾಂಡಿ (ಕೇರಳ) ಎಟಿಎಂ ದರೋಡೆ ಪ್ರಕರಣ
ಕೊಯಿಲಾಂಡಿ (ಕೇರಳ) – ಇಲ್ಲಿನ ಎಟಿಎಂ ದರೋಡೆ ಪ್ರಕರಣದಲ್ಲಿ ಇತ್ತೀಚೆಗೆ ಕೊಯಿಲಾಂಡಿ ಪೊಲೀಸರು 3 ಮುಸಲ್ಮಾನ ಯುವಕರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಸುಹೇಲ್ ಸುಲೇಮಾನ್ (24 ವರ್ಷ), ಮೊಹಮ್ಮದ್ ತಾಹಾ (27 ವರ್ಷ) ಮತ್ತು ಮೊಹಮ್ಮದ್ ಯಾಸರ್ (20 ವರ್ಷ) ಇವರುಗಳ ಸಮಾವೇಶ ಇದೆ. ಅಕ್ಟೋಬರ್ 19, 2024 ರಂದು ಈ ಆರೋಪಿಗಳು ಸಂಚು ರೂಪಿಸಿ ದರೋಡೆ ಮಾಡಿದರು ಮತ್ತು ಎಟಿಎಂ ನಲ್ಲಿ ತುಂಬುವುದಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದ 62 ಲಕ್ಷ ರೂಪಾಯಿಗಳನ್ನು ದೋಚಿದರು ಕಳ್ಳತನವಾದ ಹಣದಲ್ಲಿ ವಿಲ್ಲಿಯಾಪಲ್ಲಿ ಮಸೀದಿಯಿಂದ 37 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ.
‘ಇಂಡಿಯಾ ಒನ್ ಎಟಿಎಂ’ ನ ಉದ್ಯೋಗಿ ಸುಹೇಲ್ ಸುಲೇಮಾನ್ ಅವನು ಕೊಯಿಲಾಂಡಿ ಸಮೀಪದ ಕುರುಡಿಮುಕ್ಕು ಎಂಬಲ್ಲಿ ಎಟಿಎಂಗೆ ತುಂಬಲು ನಗದು ಹಣವನ್ನು ಒಯ್ಯುತ್ತಿದ್ದಾಗ ಮುಸುಕುಧರಿಸಿದ 2 ಯುವಕರು ಅವನ ಮೇಲೆ ದಾಳಿಮಾಡಿದರು; ಆದರೆ ಸುಹೇಲನ ಮೂಲ ಹೇಳಿಕೆ ಪ್ರಕಾರ, ನಗದು ಹಸ್ತಾಂತರಿಸುವ ವೇಳೆ ದರೋಡೆಕೋರರು ಅವರ ಮೇಲೆ ದಾಳಿ ಮಾಡಿದರು ಮತ್ತು ವಾಹನದಲ್ಲಿದ್ದ 25 ಲಕ್ಷ ರೂಪಾಯಿ ದೋಚಿದರು. ಇದರಿಂದ ಪೊಲೀಸರಿಗೆ ಅನುಮಾನ ಬಂದಿತು. ಪೊಲೀಸರ ಬಿಗಿಯಾಗಿ ವಿಚಾರಣೆ ಮಾಡಿದ ನಂತರ, ಸುಹೇಲನು ತನ್ನ 2 ಸಹಚರರಾದ ಮೊಹಮ್ಮದ್ ತಾಹಾ ಮತ್ತು ಮೊಹಮ್ಮದ್ ಯಾಸರ್ ಸಹಾಯದಿಂದ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ತನಿಖೆಯಲ್ಲಿ ಆರೋಪಿಗಳ ಪೈಕಿ ಮಹಮ್ಮದ್ ತಾಹಾ ಮಸೀದಿಯಲ್ಲಿ ಕೆಲಸಮಾಡುತ್ತಿರುವುದು ಬೆಳಕಿಗೆ ಬಂದಿದೆ. ತಾಹಾ ಕೆಲಸಮಾಡುತ್ತಿರುವ ವಿಲ್ಲಿಯಾಪಲ್ಲಿಯ ಮಸೀದಿಯಿಂದ ಸುಮಾರು 37 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ಮಾಡುತ್ತಿದ್ದಾರೆ.
ಸಂಪಾದಕೀಯ ನಿಲುವುಕದ್ದ ಹಣ ದೇವಸ್ಥಾನದಲ್ಲಿ ಸಿಕ್ಕಿದ್ದರೆ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿತ್ತು; ಆದರೆ ಮಸೀದಿಯಿಂದ ಹಣ ವಶಪಡಿಸಿಕೊಂಡ ನಂತರ ಪ್ರಸಾರ ಮಾಧ್ಯಮಗಳು ಸುದ್ದಿಯನ್ನು ಮುಚ್ಚಿಹಾಕುತ್ತಾರೆ, ಇದನ್ನು ಗಮನದಲ್ಲಿಡಿ ! |