|
(ಹಿಂದೂ ಮಕ್ಕಲ ಕಚ್ಚಿ ಎಂದರೆ ಹಿಂದೂ ಜನತಾ ಪಕ್ಷ)
ಚೆನ್ನೈ (ತಮಿಳುನಾಡು) – ಬ್ರಾಹ್ಮಣರ ರಕ್ಷಣೆಗಾಗಿ ಮತ್ತು ಬ್ರಾಹ್ಮಣ ಸಮುದಾಯದ ಮೇಲಿನ ದಾಳಿಗಳನ್ನು ತಡೆಯಲು ‘ಹಿಂದೂ ಮಕ್ಕಲ ಕಚ್ಚಿ’ಯು ನವೆಂಬರ್ 3, 2024 ರಂದು ಚೆನ್ನೈನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿತು. ಈ ಕಾರ್ಯಕ್ರಮದಲ್ಲಿ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಭಾಗವಹಿಸಿದರು ಮತ್ತು ದೇಶದ ವಿವಿಧ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ಬ್ರಾಹ್ಮಣರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಭಾಷಣ ಮಾಡಿದರು. ‘ಹಿಂದೂ ಮಕ್ಕಲ ಕಚ್ಚಿ’ಯ ನಾಯಕ ಶ್ರೀ. ಅರ್ಜುನ ಸಂಪತ ಮತ್ತು ಭಾಜಪ ನಾಯಕ ‘ಪಾಟಲಿ ಮಕ್ಕಲ ಕಚ್ಚಿ’ಯ ನಾಯಕರು ತಮ್ಮ ಅಭಿಪ್ರಾಯ ಮಂಡಿಸಿದರು. ಈ ಕಾರ್ಯಕ್ರಮದಲ್ಲಿ ಭಾಜಪ ನಾಯಕ ಶ್ರೀ. ಕಾರೂ ನಾಗರಾಜನ್, ಭಾಜಪ ನಗರಾಧ್ಯಕ್ಷೆ ಉಮಾ ಆನಂದನ್, ಶಿವಾಚಾರ್ಯ, ಭಟ್ಟಾಚಾರ್ಯ, ಅರ್ಚಕರು ಮೊದಲಾದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ತಮಿಳುನಾಡು ಬ್ರಾಹ್ಮಣ ಸಂಘಟನೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ಮೇಲಿನ ದಾಳಿಯ ಘಟನೆಗಳನ್ನು ಖಂಡಿಸುವ ಠರಾವನ್ನು ಅಂಗೀಕರಿಸಲಾಯಿತು ಹಾಗೆಯೇ ಬ್ರಾಹ್ಮಣ ಸಮುದಾಯಕ್ಕೆ ಮಾನಹಾನಿ ಮಾಡುವವರ ವಿರುದ್ಧ ನಾಗರಿಕ ಹಕ್ಕುಗಳ ಸಂರಕ್ಷಣಾ (ಪಿ.ಸಿ.ಆರ್.) ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಯಿತು.
Protest march led by the ‘Hindu Makkal Katchi’ against the attack on Brahmins in Chennai (Tamil Nadu)
Thanks to @Indumakalktchi @imkarjunsampath
More than 5000 people attended the march !
A resolution was passed condemning the attack on Brahmins
A Demand was made to register… pic.twitter.com/EaDta3NRO5
— Sanatan Prabhat (@SanatanPrabhat) November 4, 2024
ಈ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಸಮುದಾಯದವರು ಪಾಲ್ಗೊಂಡಿದ್ದರು. ಸನಾತನ ಸಂಸ್ಥೆಯ ವತಿಯಿಂದ ಪೂಜ್ಯ (ಸೌ.) ಉಮಾ ರವಿಚಂದ್ರನ್, ಶ್ರೀ. ನಂದಕುಮಾರ ಮತ್ತು ಶ್ರೀ. ಜಯಕುಮಾರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.