ಪಾಕಿಸ್ತಾನದಲ್ಲಿಅಫ್ಘಾನಿಸ್ತಾನದ ರಾಯಭಾರಿಯವರ ಮಗಳ ಅಪಹರಣ !
ಅಫ್ಘಾನಿಸ್ತಾನದ ರಾಯಭಾರಿ ನಜೀಬುಲ್ಲಾ ಅಲಿಖಿಲ ಅವರ ಪುತ್ರಿ ಸಿಲಸಿಲಾ ಅಲಿಖಿಲ ಇವಳು ಜುಲೈ ೧೬ ರಂದು ಮನೆಗೆ ತೆರಳುತ್ತಿದ್ದಾಗ ಕೆಲವರು ಆಕೆಯನ್ನು ಅಪಹರಿಸಿದರು. ಅಪಹರಣಕಾರರು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.
ಅಫ್ಘಾನಿಸ್ತಾನದ ರಾಯಭಾರಿ ನಜೀಬುಲ್ಲಾ ಅಲಿಖಿಲ ಅವರ ಪುತ್ರಿ ಸಿಲಸಿಲಾ ಅಲಿಖಿಲ ಇವಳು ಜುಲೈ ೧೬ ರಂದು ಮನೆಗೆ ತೆರಳುತ್ತಿದ್ದಾಗ ಕೆಲವರು ಆಕೆಯನ್ನು ಅಪಹರಿಸಿದರು. ಅಪಹರಣಕಾರರು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.
ಇದರಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಅನ್ಯಾಯದ ವಿರುದ್ಧ ನಡೆಸುವ ಕಾರ್ಯಾಚರಣೆಗಳು ಕೇವಲ ತೋರಿಕೆಗಾಗಿ ಇರುತ್ತದೆ, ಎಂಬುದು ಸಾಬೀತಾಗುತ್ತದೆ ! ಭಾರತವು ಇದನ್ನು ಖಂಡಿಸಿ ಪಾಕಿಸ್ತಾನವು ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕು, ಆಗಲೇ ಅಲ್ಲಿಯ ಹಿಂದೂಗಳಿಗೆ ಭಾರತದ ಆಧಾರವೆನಿಸಬಹುದು !
ಚೀನಿ ಅಭಿಯಂತರನ್ನು ಕರೆದೊಯ್ಯುತ್ತಿದ್ದ ಬಸ್ಸನ್ನು ರಸ್ತೆಯ ಪಕ್ಕದಲ್ಲಿ ಮುಚ್ಚಿಡಲಾಗಿದ್ದ ಸ್ಫೋಟಕದಿಂದ ಉಡಾಯಿಸಿದ ಘಟನೆ ಪಾಕಿಸ್ತಾನದ ಕೊಹಿಸ್ತಾನದಲ್ಲಿ ಘಟಿಸಿದೆ. ಇದರಲ್ಲಿ ಕಡಿಮೆಪಕ್ಷ ೧೦ ಜನರು ಮರಣ ಹೊಂದಿರುವರೆಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಖೈಬರ್ ಪಖ್ತುನಖ್ವಾ ಪ್ರಾಂತ್ಯದ ಕುರ್ರಮ್ ಜಿಲ್ಲೆಯಲ್ಲಿ ಜುಲೈ ೧೩ ರಂದಾದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ೧೧ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಮಾತ್ರ ಇದರಲ್ಲಿ ಕೇವಲ ಕ್ಯಾಪ್ಟನ್ ಅಬ್ದುಲ್ ಬಾಸಿತ್ ಮತ್ತು ಸಿಪಾಯಿ ಹಜರತ್ ಬಿಲಾಲ್ ಇವರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ.
ಕಳೆದ ೭೪ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಈ ರೀತಿಯಲ್ಲಿ ಸಾವಿರಾರು ಹಿಂದೂಗಳು ಮತಾಂತರಗೊಂಡಿದ್ದಾರೆ. ಆದ್ದರಿಂದಲೇ ಅಲ್ಲಿಯ ಹಿಂದೂಗಳ ಜನಸಂಖ್ಯೆ ಈಗ ಶೇ. ೨ ರಷ್ಟು ಉಳಿದಿದೆ ಹಾಗೂ ಭಾರತದಲ್ಲಿ ಕಳೆದ ೭೪ ವರ್ಷಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೩ ರಷ್ಟರಿಂದ ೧೪ ರಷ್ಟು ಆಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಇದನ್ನೆ ‘ಕಳ್ಳನಿಗೊಂದು ಪಿಳ್ಳೆನೆವ’ ಎನ್ನುತ್ತಾರೆ ! ತಲೆನೋವಾಗಿ ಪರಿಣಮಿಸಿದ ಭಯೋತ್ಪಾದಕರನ್ನು ನಿಯಂತ್ರಿಸಲು ಪಾಕಿಸ್ತಾನವೇ ಸ್ಪೋಟವನ್ನು ನಡೆಸಿ ಅದನ್ನು ಭಾರತ ಮಾಡಿದೆ ಎಂದು ಆರೋಪ ಹೊರಿಸುವ ಪ್ರಯತ್ನ ಹಾಸ್ಯಾಸ್ಪದವಾಗಿದೆ, ಇದು ಎಲ್ಲರಿಗೆ ತಿಳಿದ ವಿಷಯವಾಗಿದೆ !
‘ಭಯೋತ್ಪಾದಕರಿಂದ ಡ್ರೋನ ಬಳಕೆಯಾಗುತ್ತಿರುವುದು ಅತ್ಯಂತ ಚಿಂತೆಯ ವಿಷಯವಾಗಿದೆ. ಒಂದು ವೇಳೆ ಈ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಕ್ರಮಗಳನ್ನು ಕೈಕೊಳ್ಳದಿದ್ದರೆ ಭಯೋತ್ಪಾದಕ ವಿರುದ್ಧದ ಹೋರಾಟದಲ್ಲಿ ಗೆಲ್ಲುವುದು ಅತ್ಯಂತ ಕಠಿಣವಾಗಲಿದೆ’ ಎಂದು ಭಾರತವು ತಿಳಿಸಿದೆ.
ಅಶ್ಲೀಲತೆಯ ಪ್ರಸಾರವನ್ನು ಮಾಡುವ ಭಾರತೀಯ ಚಿತ್ರರಂಗದ ಅನುಕರಣೆಯನ್ನು ಪಾಕಿಸ್ತಾನಿ ಚಿತ್ರರಂಗವು ನಿಲ್ಲಿಸಬೇಕು, ಎಂದು ಪಾಕ್‍ನ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ. ಅವರು ಇಲ್ಲಿ ‘ಶಾರ್ಟ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮಾತಾಡುತ್ತಿದ್ದರು.
ಅಂತರರಾಷ್ಟ್ರೀಯ ನ್ಯಾಯಾಲಯದ ಒತ್ತಡಕ್ಕೆ ಮಣಿದ ಪಾಕಿಸ್ತಾನದ ‘ನ್ಯಾಶನಲ್ ಅಸೆಂಬ್ಲಿ’ಯು ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ ಜಾಧವ ಅವರಿಗೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಅನುಮೋದನೆ ನೀಡಿದೆ. ಇದರಿಂದ ಕುಲಭೂಷಣ್ ಜಾಧವ ಅವರಿಗೆ ದೊಡ್ಡ ಸಾಂತ್ವನ (ಸಮಾಧಾನ) ಸಿಕ್ಕಿದೆ.
ಗಾಜಾ ಪ್ರದೇಶದಲ್ಲಿ ಪ್ಯಾಲೇಸ್ಟಿನಿಯನ್ `ಹಮಾಸ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯ ಉಗ್ರರಿಗೆ ಪಾಕಿಸ್ತಾನಿ ಸೈನ್ಯವೇ ತರಬೇತಿಯನ್ನು ನೀಡುತ್ತಿದೆ ಎಂದು ಪಾಕಿಸ್ತಾನದ ಹಿರಿಯ ಮುಖಂಡ ರಾಜಾ ಜಫರ್ ಉಲ್ ಹಕ್ ಹೇಳಿದ್ದಾರೆ. ಪಾಕಿಸ್ತಾನಿ ಸೈನ್ಯವು ದೀರ್ಘಕಾಲದಿಂದ ಹಮಾಸ್ ಉಗ್ರರಿಗೆ ತರಬೇತಿಯನ್ನು ನೀಡುತ್ತಿದೆ ಮತ್ತು ಅದಕ್ಕಾಗಿ `ಸ್ಪೆಶಲ್ ಕಮಾಂಡೋ ಯುನಿಟ್’ನ ಒಂದು ಪಡೆಯು ಕೆಲವು ವರ್ಷಗಳಿಂದ ಅಲ್ಲಿ ನಿಯುಕ್ತಿಗೊಂಡಿದೆ ಎಂದು ಅವರು ಹೇಳಿದರು.