ಯಾವ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ರಾಷ್ಟ್ರಗಳ ರಾಯಭಾರಿಗಳ ಮಕ್ಕಳು ಸಹ ಸುರಕ್ಷಿತರಿಲ್ಲವೋ ಅಲ್ಲಿ ಅಲ್ಪಸಂಖ್ಯಾತರಾಗಿರುವ ಸಾಮಾನ್ಯ ಹಿಂದೂಗಳ ದುಃಸ್ಥಿತಿಯ ಬಗ್ಗೆ ಯೋಚಿಸದಿರುವುದು ಉತ್ತಮ !
ಇಸ್ಲಾಮಾಬಾದ್ : ಅಫ್ಘಾನಿಸ್ತಾನದ ರಾಯಭಾರಿ ನಜೀಬುಲ್ಲಾ ಅಲಿಖಿಲ ಅವರ ಪುತ್ರಿ ಸಿಲಸಿಲಾ ಅಲಿಖಿಲ ಇವಳು ಜುಲೈ ೧೬ ರಂದು ಮನೆಗೆ ತೆರಳುತ್ತಿದ್ದಾಗ ಕೆಲವರು ಆಕೆಯನ್ನು ಅಪಹರಿಸಿದರು. ಅಪಹರಣಕಾರರು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಅಪಹರಣವಾದ ಕೆಲವು ಗಂಟೆಗಳ ನಂತರ ಅವಳನ್ನು ಬಿಡುಗಡೆ ಮಾಡಲಾಯಿತು. ಅಫ್ಘಾನಿಸ್ತಾನದ ‘ಟೋಲೋ ನ್ಯೂಸ್’ ಇದನ್ನು ವರದಿ ಮಾಡಿದೆ. ಅಪಹರಣದ ಹಿಂದೆ ಯಾರು ಅಥವಾ ಯಾವ ಗುಂಪು ಇದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಸಂದರ್ಭದಲ್ಲಿ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯವು ಪಾಕಿಸ್ತಾನ ಸರಕಾರವನ್ನು ಒತ್ತಾಯಿಸಿದೆ. ಜುಲೈ ೧೬ ರಂದು ಅಫ್ಘಾನಿಸ್ತಾನದ ರಾಷ್ಟ್ರಪತಿಯವರು ಪಾಕಿಸ್ತಾನವು ತಾಲಿಬಾನ್ ಅನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದರು. ಆಗಿನಿಂದ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದಲ್ಲಿ ಆಫ್ಘನ್ ರಾಯಭಾರಿಯ ಮಗಳ ಅಪಹರಣ, ಚಿತ್ರಹಿಂಸೆ
#Pakistan https://t.co/Ehf734jOgA— vijaykarnataka (@Vijaykarnataka) July 18, 2021