ಹಾಸನದಲ್ಲಿ ರೇವ್ ಪಾರ್ಟಿ ಮೇಲೆ ನಡೆಸಿದ ದಾಳಿಯಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಬಂಧನ !

ಹಾಸನ ಜಿಲ್ಲೆಯ ರೇವ್ ಪಾರ್ಟಿ ಮೇಲೆ ನಡೆಸಿದ ದಾಳಿಯಲ್ಲಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ನಾರ್ಕೋಟಿಕ್ಸ್ ಮತ್ತು ಇಕಾನಮಿಕ್ ಕ್ರೈಮ್ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ಶ್ರೀಲತಾ ಅವರನ್ನು ಬಂಧಿಸಲಾಗಿದ್ದು, ಅವರ ಪುತ್ರನು ಪರಾರಿಯಾಗಿದ್ದಾನೆ. ಶ್ರೀಲತಾ ಮೂಲತಃ ಕೇರಳದವರಾಗಿದ್ದು ಅವರು ಕಳೆದ ೪ ವರ್ಷಗಳಿಂದ ನಾರ್ಕೊಟೆಕ್ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕ್ಯಾನ್ಸರ್‌ಅನ್ನು ಗುಣಪಡಿಸುವ ಹೆಸರಿನಲ್ಲಿ ಹಿಂದೂ ಕುಟುಂಬದವರಿಂದ ೮೦,೦೦೦ ರೂಪಾಯಿಗಳನ್ನು ತೆಗೆದುಕೊಂಡ ಪಾದ್ರಿಯ ವಿರುದ್ಧ ಅಪರಾಧ ದಾಖಲು

ಇಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಹೆಸರಿನಲ್ಲಿ ಪಾದ್ರಿ ಬಲ್ವಿಂದರ್‌ನು ಮುಂಬಯಿಯಲ್ಲಿ ವಾಸಿಸುತ್ತಿರುವ ಹಿಂದೂ ಕುಟುಂಬವರಿಂದ ೮೦,೦೦೦ ರೂಪಾಯಿ ಮೋಸ ಮಾಡಿರುವ ಘಟನೆಯು ಬೆಳಕಿಗೆ ಬಂದಿದೆ. ಅದೇರೀತಿ ಪಾದ್ರಿ ಕುಟುಂಬವನ್ನು ಮತಾಂತರಗೊಳಿಸಲೂ ಪ್ರಯತ್ನಿಸಿದ್ದರು.

ಅಸ್ಸಾಂನಲ್ಲಿ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ೫ ಮತಾಂಧರ ಬಂಧನ

ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರಂಗ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಗ್ರಾಮಗಳಿಂದ ಅಬ್ದುಲ್ ಬರೇಕ, ಅಬುಲ್ ಹೊಸೆನ್, ಅಬ್ದುಲ್ ಜಬ್ಬಾರ, ಅಬೆದಾ ಖಾತೂನ್ ಮತ್ತು ಬಾದ್‌ಶಾಹ ಅಲಿಯನ್ನು ಬಂಧಿಸಲಾಗಿದೆ.

ಭಾರತವನ್ನು ‘ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು, ಇದೇ ನಮ್ಮ ಬೇಡಿಕೆಯಾಗಿದೆ ! – ಮಹಾಮಂಡಲೇಶ್ವರ ಮಹಂತ ಶ್ರೀ ಶ್ರೀ ೧೦೦೮ ಶ್ರೀ ರಘುವೀರ ದಾಸ ಮಹಾತ್ಯಾಗೀಜಿ, ಅಖನೂರ, ಜಮ್ಮು-ಕಾಶ್ಮೀರ

ಪ್ರತಿಯೊಂದು ದೇಶವು ಅಲ್ಲಿನ ಧರ್ಮಕ್ಕನುಸಾರ ನಡೆಯುತ್ತದೆ; ಆದರೆ ಭಾರತದಲ್ಲಿ ಹೀಗಾಗುವುದಿಲ್ಲ. ಜಗತ್ತಿನಲ್ಲಿ ಒಂದೂ ‘ಹಿಂದೂ ರಾಷ್ಟ್ರವಿಲ್ಲ. ಭಾರತವನ್ನೂ ಇಂದಿಗೂ ‘ಹಿಂದೂ ರಾಷ್ಟ್ರವೆಂದು ಘೋಷಿಸಲಾಗಿಲ್ಲ. ಮೋದಿ ಸರಕಾರವು ಈ ಕಾರ್ಯವನ್ನು ಆದಷ್ಟು ಬೇಗನೆ ಮಾಡಬೇಕು.

ಹಾಟ್ ಸ್ಪ್ರಿಂಗ್ಸ್, ಗೊಗ್ರಾ ಮತ್ತು ದೆಪ್ಸಾಂಗ್‌ನಿಂದ ಹಿಂದೆ ಸರಿಯಲು ಚೀನಾದಿಂದ ನಕಾರ

ಚೀನಾವು ಪೂರ್ವ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್, ಗೊಗ್ರಾ ಮತ್ತು ದೆಪ್ಸಾಂಗ್‌ನಲ್ಲಿ ಗಡಿಯಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದೆ ಎಂದು ತಿಳಿದುಬಂದಿದೆ. ಕಳೆದ ವಾರ ನಡೆದ ೧೧ ನೇ ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆಯಲ್ಲಿ ಭಾರತ ಮತ್ತು ಚೀನಾ ೧೩ ಗಂಟೆಗಳ ಕಾಲ ಚರ್ಚೆ ನಡೆಸಿವೆ.

ದೆಹಲಿಯ ಸ್ಮಶಾನಭೂಮಿಯಲ್ಲಿ ಸ್ಥಳ ಇಲ್ಲದ್ದರಿಂದ ವಾಹನಗಳ ನಿಲುಗಡೆಯ ಸ್ಥಳದಲ್ಲಿ ೧೫ ಜನರ ಅಂತ್ಯಕ್ರಿಯೆ

ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೨,೬೧,೫೦೦ ಹೊಸ ಕೊರೋನಾ ರೋಗಿಗಳು ಪತ್ತೆಯಾಗಿದ್ದ್ದಾರೆ, ಹಾಗೂ ಕೊರೋನಾದಿಂದ ೧,೫೦೧ ಜನರು ಸಾವನ್ನಪ್ಪಿದ್ದಾರೆ. ಹೆಚ್ಚುತ್ತಿರುವ ಸಾವುಗಳಿಂದಾಗಿ, ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಸ್ಥಳವಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಚುನಾವಣೆಯ ಸಮಯದಲ್ಲಿ ಕೊರೋನಾ ಎಲ್ಲಿಗೆ ಹೋಗುತ್ತದೆ ? ಅದು ಕುಂಭಮೇಳಕ್ಕೆ ಮಾತ್ರ ಬರುತ್ತದೆಯೇ ? – ಶ್ರೀ ಪರಮೇಶ್ವರವದಾಸ ಮಹಾರಾಜರು, ಸಿದ್ಧಪೀಠ ಶಿವ ಸಾಯಿ ಶನಿಧಾಮ ಆಶ್ರಮ, ನೋಯ್ಡಾ

ಕೊರೋನಾ ಸಾಂಕ್ರಾಮಿಕ ರೋಗದ ಕಾರಣವನ್ನು ಮುಂದಿಟ್ಟು ಸರಕಾರವು ಕುಂಭಮೇಳದಲ್ಲಿ ಅನೇಕ ಸಮಸ್ಯೆಗಳನ್ನು ತಂದಿತು. ಆರಂಭದಲ್ಲಿ ಕುಂಭಮೇಳವೇ ಆಗದಂತೆ ತಡೆಯುವ ಪ್ರಯತ್ನಗಳಾದವು. ಸಾಧು-ಮಹಂತರು ಸಂಘಟಿತವಾಗಿ ವಿರೋಧಿಸಿದ ನಂತರ ಕುಂಭಮೇಳಕ್ಕೆ ಅವಕಾಶ ನೀಡಲಾಯಿತು.

ಭಯೋತ್ಪಾದನೆಯನ್ನು ತಡೆಗಟ್ಟಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ ! – ಕೇರಳ ಶಾಸಕ ಪಿ.ಸಿ. ಜಾರ್ಜ್

೨೦೩೦ ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಕೇರಳದ ಆಡಳಿತಾರೂಢ ಡೆಮೊಕ್ರೆಟಿಕ ಫ್ರಂಟ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ವಿರೋಧಿ ಪಕ್ಷಗಳ ಸಂಯುಕ್ತ ಗುಂಪು) ಭಯೋತ್ಪಾದಕರೊಂದಿಗೆ ಕೆಲಸ ಮಾಡುತ್ತಿವೆ.

ನನ್ನ ಮತಕ್ಷೇತ್ರದ ೪೭ ಯುವತಿಯರು ‘ಲವ್ ಜಿಹಾದ್’ಗೆ ಬಲಿಯಾಗಿದ್ದಾರೆ ! – ಶಾಸಕ ಪಿ.ಸಿ. ಜಾರ್ಜ್

ನನ್ನ ಮತಕ್ಷೇತ್ರದ ೪೭ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ೧೨ ಹಿಂದೂಗಳು ಮತ್ತು ೩೫ ಕ್ರೈಸ್ತರಿದ್ದಾರೆ. ಅವರನ್ನು ಇಸ್ಲಾಂನಲ್ಲಿ ಮತಾಂತರಿಸಲಾಗಿದೆಯೇ ಅಥವಾ ಎಲ್ಲಿ ಕರೆದುಕೊಂಡು ಹೋಗಲಾಗಿದೆ ಎಂಬುದು ಮಾತ್ರ ನನಗೆ ಗೊತ್ತಿಲ್ಲ.

ಶ್ರೀರಾಮನವಮಿ ದಿನದಂದು ಮನೆಯಲ್ಲಿಯೇ ಇದ್ದು ಪೂಜೆ-ಅರ್ಚನೆ ಮಾಡಿ ! – ಕೊರೋನಾದ ಹಿನ್ನೆಲೆಯಲ್ಲಿ ಅಯೋಧ್ಯೆಯ ಸಾಧು-ಸಂತರಿಂದ ಮನವಿ

ಹೆಚ್ಚುತ್ತಿರುವ ಕೊರೋನಾದ ಸೋಂಕಿನ ಹಿನ್ನೆಲೆಯಲ್ಲಿ, ಇಲ್ಲಿಯ ಸಾಧು ಹಾಗೂ ಸಂತರು ಶ್ರೀರಾಮನವಮಿ ದಿನದಂದು ಅಯೋಧ್ಯೆಗೆ ಬರುವ ಬದಲು ಮನೆಯಲ್ಲಿಯೇ ಇದ್ದು ಪೂಜೆ ಮತ್ತು ಅರ್ಚನೆ ಮಾಡುವಂತೆ ಜನತೆಗೆ ಮನವಿ ಮಾಡಿದ್ದಾರೆ.