ಹಿಂದಿನ ಸೈನ್ಯ ಮಟ್ಟದ ಸಭೆಯಲ್ಲಿ, ಹಿಂದೆ ಸರಿಯಲು ಸಮ್ಮತಿಸಲಾಗಿತ್ತು !
ಚೀನಾವು ನಂಬಿಕೆದ್ರೋಹಿಯಾಗಿದೆ, ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಚೀನಾದ ಸೈನ್ಯವು ಹಿಂದೆ ಸರಿಯುತ್ತಿದ್ದರೂ, ಅದು ಮತ್ತೊಮ್ಮೆ ಭಾರತದಲ್ಲಿ ವೇಗವಾಗಿ ನುಸುಳುತ್ತಿತ್ತು ! ಇದಕ್ಕಾಗಿಯೇ ಭಾರತವು ಚೀನಾದ ಬಗ್ಗೆ ಕಟ್ಟೆಚ್ಚರದಿಂದಿರಬೇಕು !
ನವ ದೆಹಲಿ : ಚೀನಾವು ಪೂರ್ವ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್, ಗೊಗ್ರಾ ಮತ್ತು ದೆಪ್ಸಾಂಗ್‌ನಲ್ಲಿ ಗಡಿಯಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದೆ ಎಂದು ತಿಳಿದುಬಂದಿದೆ. ಕಳೆದ ವಾರ ನಡೆದ ೧೧ ನೇ ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆಯಲ್ಲಿ ಭಾರತ ಮತ್ತು ಚೀನಾ ೧೩ ಗಂಟೆಗಳ ಕಾಲ ಚರ್ಚೆ ನಡೆಸಿವೆ. ಈ ಮಾತುಕತೆಯ ಸಮಯದಲ್ಲಿ, ಗೋಗ್ರಾ, ಹಾಟ್ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್ ಪೆಟ್ರೋಲಿಂಗ್ ಪಾಯಿಂಟ ೧೫ ಮತ್ತು ಪೆಟ್ರೋಲಿಂಗ್ ಪಾಯಿಂಟ್ ೧೭ ಎ ಈ ಭಾಗಗಳಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಚೀನಾ ಒಪ್ಪಿಕೊಂಡಿತ್ತು; ಆದರೆ ಈಗ ಚೀನಾವು ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದೆ ಎಂದು ವರದಿಯಾಗಿದೆ. ಪೆಟ್ರೋಲಿಂಗ್ ಪಾಯಿಂಟ್ ೧೫ ಮತ್ತು ಪೆಟ್ರೋಲಿಂಗ್ ಪಾಯಿಂಟ್ -೧೭ ಎ ವರೆಗೆ ಚೀನಾದ ಸೈನ್ಯದ ಗಸ್ತು ತಿರುಗುವುದನ್ನು ಭಾರತೀಯ ಸೈನ್ಯವು ಒಪ್ಪಿಕೊಳ್ಳಬೇಕೆಂದು ಚೀನಾ ಬಯಸಿದೆ ಎಂಬುದು ಸ್ಪಷ್ಟವಾಗಿದೆ. ‘ಭಾರತಕ್ಕೆ ಎಷ್ಟು ಸಿಕ್ಕಿದೆ ಅಷ್ಟರಲ್ಲಿ ಅದು ಸಮಾಧಾನಿಯಾಗಿರಬೇಕು’ ಎಂದು ಚೀನಾವು ಹೇಳಿದೆ.