ಭಾರತವನ್ನು ‘ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು, ಇದೇ ನಮ್ಮ ಬೇಡಿಕೆಯಾಗಿದೆ ! – ಮಹಾಮಂಡಲೇಶ್ವರ ಮಹಂತ ಶ್ರೀ ಶ್ರೀ ೧೦೦೮ ಶ್ರೀ ರಘುವೀರ ದಾಸ ಮಹಾತ್ಯಾಗೀಜಿ, ಅಖನೂರ, ಜಮ್ಮು-ಕಾಶ್ಮೀರ

ಮಹಾಮಂಡಲೇಶ್ವರ ಮಹಂತ ಶ್ರೀ ಶ್ರೀ ೧೦೦೮ ಶ್ರೀ ರಘುವೀರ ದಾಸ ಮಹಾತ್ಯಾಗೀಜಿ ಇವರಿಗೆ ಮಾಹಿತಿಯನ್ನು ನೀಡುವಾಗ ಬಲಬದಿಗೆ ಶ್ರೀ. ಅಭಯ ವರ್ತಕ

ಹರಿದ್ವಾರ – ಪ್ರತಿಯೊಂದು ದೇಶವು ಅಲ್ಲಿನ ಧರ್ಮಕ್ಕನುಸಾರ ನಡೆಯುತ್ತದೆ; ಆದರೆ ಭಾರತದಲ್ಲಿ ಹೀಗಾಗುವುದಿಲ್ಲ. ಜಗತ್ತಿನಲ್ಲಿ ಒಂದೂ ‘ಹಿಂದೂ ರಾಷ್ಟ್ರವಿಲ್ಲ. ಭಾರತವನ್ನೂ ಇಂದಿಗೂ ‘ಹಿಂದೂ ರಾಷ್ಟ್ರವೆಂದು ಘೋಷಿಸಲಾಗಿಲ್ಲ. ಮೋದಿ ಸರಕಾರವು ಈ ಕಾರ್ಯವನ್ನು ಆದಷ್ಟು ಬೇಗನೆ ಮಾಡಬೇಕು. ಯಾವ ರೀತಿ ಜಮ್ಮ-ಕಾಶ್ಮೀರದಲ್ಲಿ ಕಲಮ್ ೩೭೦ ನ್ನು ರದ್ದುಗೊಳಿಸಲಾಯಿತೋ, ಅದೇ ರೀತಿ ಭಾರತವನ್ನು ‘ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಮತ್ತು ಹೀಗೆ ಮಾಡುವುದು ಅತ್ಯಂತ ಆವಶ್ಯಕವಾಗಿದೆ. ಇದುವೇ ನಮ್ಮ ಬೇಡಿಕೆಯೂ ಆಗಿದೆ, ಎಂದು ಅಖನೂರ (ಜಮ್ಮು-ಕಾಶ್ಮೀರ)ನ ಮಹಾಮಂಡಲೇಶ್ವರ ಮಹಂತ ಶ್ರೀ ಶ್ರೀ ೧೦೦೮ ಶ್ರೀ ರಘುವೀರ ದಾಸ ಮಹಾತ್ಯಾಗೀಜಿಯವರು ಪ್ರತಿಪಾದಿಸಿದರು. ಕುಂಭಮೇಳದ ನಿಮಿತ್ತ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹರಿದ್ವಾರದಲ್ಲಿ ಏರ್ಪಡಿಸಲಾದ ‘ಸನಾತನ ಧರ್ಮಶಿಕ್ಷಣ ಮತ್ತು ಹಿಂದೂ ರಾಷ್ಟ್ರ-ಜಾಗೃತಿ ಕೇಂದ್ರಕ್ಕೆ ಅವರು ಭೇಟಿ ನೀಡಿದಾಗ, ಮೇಲಿನಂತೆ ಹೇಳಿದರು. ಸನಾತನ ಸಂಸ್ಥೆಯ ಶ್ರೀ. ಅಭಯ ವರ್ತಕರು ತ್ಯಾಗಿಯವರಿಗೆ ಪ್ರದರ್ಶನದ ಮಾಹಿತಿಯನ್ನು ನೀಡಿದರು. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಮಹಾಮಂಡಲೇಶ್ವರ ಮಹಂತ ಶ್ರೀ ಶ್ರೀ ೧೦೦೮ ಶ್ರೀ ರಘುವೀರ ದಾಸ ಮಹಾತ್ಯಾಗೀಜಿಯವರಿಗೆ ಪುಷ್ಪಹಾರವನ್ನು ಅರ್ಪಿಸಿ ಸನ್ಮಾನ ಮಾಡಿದರು.

ಮಹಾಮಂಡಲೇಶ್ವರ ಮಹಂತ ಶ್ರೀ ಶ್ರೀ ೧೦೦೮ ಶ್ರೀ ರಘುವೀರ ದಾಸ ಮಹಾತ್ಯಾಗೀಜಿಯವರು ಪ್ರದರ್ಶನ ಕೇಂದ್ರದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು !

ಸಂಸ್ಥೆಯ ಈ ಪ್ರದರ್ಶನವು ಉತ್ತಮ ಮಾಹಿತಿಯನ್ನು ನೀಡುವುದಾಗಿದ್ದು, ಅದನ್ನು ನೋಡಿ ನನಗೆ ತುಂಬಾ ಆನಂದವಾಗುತ್ತಿದೆ. ಈ ಪ್ರದರ್ಶನವನ್ನು ನೋಡಿ ನಾನು ಪ್ರಭಾವಿತನಾಗಿದ್ದೇನೆ. ಪ್ರದರ್ಶನದ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿರುವಿರಿ. ಪ್ರದರ್ಶನದಲ್ಲಿ ಚಿಕ್ಕ ಮಕ್ಕಳಿಗಾಗಿ ಉತ್ತಮ ಮಾಹಿತಿಯನ್ನು ನೀಡಲಾಗಿದೆ. ಇದರಿಂದ ಅವರಿಗೆ ಹಿಂದೂ ಧರ್ಮದ ಬಗ್ಗೆ ಅಭಿಮಾನವೆನಿಸುವುದು. ಭವಿಷ್ಯದಲ್ಲಿ ಅವರ ಆತ್ಮಬಲ ಹೆಚ್ಚಾಗುವುದು, ಎಂಬ ಮೆಚ್ಚುಗೆಯನ್ನು ಮಹಾಮಂಡಲೇಶ್ವರ ಮಹಂತ ಶ್ರೀ ಶ್ರೀ ೧೦೦೮ ಶ್ರೀ ರಘುವೀರ ದಾಸ ಮಹಾತ್ಯಾಗೀಜಿಯವರು ವ್ಯಕ್ತಪಡಿಸಿದರು.