ದೆಹಲಿಯ ಸ್ಮಶಾನಭೂಮಿಯಲ್ಲಿ ಸ್ಥಳ ಇಲ್ಲದ್ದರಿಂದ ವಾಹನಗಳ ನಿಲುಗಡೆಯ ಸ್ಥಳದಲ್ಲಿ ೧೫ ಜನರ ಅಂತ್ಯಕ್ರಿಯೆ

ಹೆಚ್ಚುತ್ತಿರುವ ಕೊರೋನಾದ ಪ್ರಭಾವ !

ನವ ದೆಹಲಿ : ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೨,೬೧,೫೦೦ ಹೊಸ ಕೊರೋನಾ ರೋಗಿಗಳು ಪತ್ತೆಯಾಗಿದ್ದ್ದಾರೆ, ಹಾಗೂ ಕೊರೋನಾದಿಂದ ೧,೫೦೧ ಜನರು ಸಾವನ್ನಪ್ಪಿದ್ದಾರೆ. ಹೆಚ್ಚುತ್ತಿರುವ ಸಾವುಗಳಿಂದಾಗಿ, ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಸ್ಥಳವಿಲ್ಲ ಎಂಬುದು ಬೆಳಕಿಗೆ ಬಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಕೊರೋನಾ ರೋಗಿಗಳ ಶವಗಳ ಅಂತ್ಯಕ್ರಿಯೆಯನ್ನು ವಾಹನಗಳ ನಿಲುಗಡೆಯ ಸ್ಥಳದಲ್ಲಿಯೇ ಮಾಡಬೇಕಾದ ಪ್ರಮೇಯ ಬಂದೊದಗಿದೆ. ದೆಹಲಿಯ ಸೀಮಾಪುರಿ ಸ್ಮಶಾನದಲ್ಲಿ ಈ ಚಿತ್ರಣವು ನೋಡಲು ಸಿಗುತ್ತಿದೆ. ಇಲ್ಲಿಯವರೆಗೆ ೧೫ ಜನರ ಅಂತ್ಯಕ್ರಿಯೆ ಮಾಡಲಾಗಿದೆ.