ಕಾನೂನನ್ನು ರಕ್ಷಿಸಬೇಕಾದವರೇ ಕಾನೂನನ್ನು ಉಲ್ಲಂಘಿಸುತ್ತಿದ್ದರೆ, ಕಾನೂನು ಮತ್ತು ಸುವ್ಯವಸ್ಥೆ ಇರಲು ಸಾಧ್ಯವಿದೆಯೇನು ? ಇಂತಹವರನ್ನು ಅಮಾನತುಗೊಳಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಸರಕಾರವು ಪ್ರಯತ್ನಿಸಬೇಕು
ಮಂಗಳೂರು – ಹಾಸನ ಜಿಲ್ಲೆಯ ರೇವ್ ಪಾರ್ಟಿ ಮೇಲೆ ನಡೆಸಿದ ದಾಳಿಯಲ್ಲಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ನಾರ್ಕೋಟಿಕ್ಸ್ ಮತ್ತು ಇಕಾನಮಿಕ್ ಕ್ರೈಮ್ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ಶ್ರೀಲತಾ ಅವರನ್ನು ಬಂಧಿಸಲಾಗಿದ್ದು, ಅವರ ಪುತ್ರನು ಪರಾರಿಯಾಗಿದ್ದಾನೆ. ಶ್ರೀಲತಾ ಮೂಲತಃ ಕೇರಳದವರಾಗಿದ್ದು ಅವರು ಕಳೆದ ೪ ವರ್ಷಗಳಿಂದ ನಾರ್ಕೊಟೆಕ್ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸರು ಒಟ್ಟು ೧೩೧ ಜನರನ್ನು ಬಂಧಿಸಿದ್ದಾರೆ.
A cop has been suspended for attending a rave party in Hassan, #Karnataka.
(@nolanentreeo )https://t.co/9BvFFJRm5D— IndiaToday (@IndiaToday) April 18, 2021
೧. ಪಾರ್ಟಿಯನ್ನು ಆಯೋಜಿಸಿದ ಸ್ಥಳದಲ್ಲಿ ಎಂಡಿಎಂಎ, ಎಲ್‌ಎಸ್‌ಡಿ, ಗಾಂಜಾ ಮತ್ತು ಇತರ ಮಾದಕ ವಸ್ತುಗಳು ಪತ್ತೆಯಾಗಿವೆ. ಎಸ್ಟೇಟ್ ಮಾಲೀಕರಾದ ಗಗನ್ ಮತ್ತು ಪಾರ್ಟಿಯನ್ನು ಆಯೋಜಿಸಿದ್ದ ಬೆಂಗಳೂರಿನ ಸೋನಿ, ಪಂಕಜ್ ಮತ್ತು ನಾಸಿರ್ ಅವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಮಂಗಳೂರಿನ ಮಹಿಳಾ ಪೊಲೀಸ್ ಮತ್ತು ಆಕೆಯ ಮಗನ ಹೆಸರು ಬಹಿರಂಗವಾಗಿದೆ.
೨. ಬೆಂಗಳೂರಿನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುವ ಶ್ರೀಲತಾನ ಮಗ ಅತುಲನು ‘ಡ್ರಗ್ ಪೆಡಲರ’ರೊಂದಿಗೆ(ಮಾದಕ ದ್ರವ್ಯಗಳನ್ನು ಪೂರೈಸುವವ) ನಿಕಟ ಸಂಬಂಧ ಹೊಂದಿದ್ದಾನೆ ಮತ್ತು ಸ್ವತಃ ‘ಡ್ರಗ್ ಪೆಡಲರ್’ ಆಗಿದ್ದಾನೆಂದು ಸಹ ಹೇಳಲಾಗುತ್ತದೆ. ಅತುಲ್ ಬೆಂಗಳೂರು ಮತ್ತು ಮಂಗಳೂರಿನಿಂದ ಮಾದಕ ಪದಾರ್ಥಗಳ ಸೇವನೆ ಮಾಡುವುದವರೊಂದಿಗೆ ಸ್ನೇಹ ಬೆಳೆಸಿದ್ದರು. ಅದೇ ಕಾರಣಕ್ಕಾಗಿ, ಅವರು ಬೆಂಗಳೂರಿನ ಹುಡುಗರೊಂದಿಗೆ ಸಕಲೇಶಪುರದ ರಹಸ್ಯ ಸ್ಥಳದಲ್ಲಿ ರೆವ್ ಪಾರ್ಟಿಯ ಆಯೋಜನೆಯ ತಯಾರಿ ಮಾಡಿದ್ದರು. ಪೊಲೀಸರು ಆ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆಂದು ತಿಳಿದ ತಕ್ಷಣ ಅತುಲ್ ಪರಾರಿಯಾಗಿದ್ದಾನೆ. ರೆವ್ ಪಾರ್ಟಿಯಲ್ಲಿ ಭಾಗವಹಿಸಲು ಪ್ರವೇಶ ಶುಲ್ಕದ ಜೊತೆಗೆ ಸದಸ್ಯರ ಆಗಮನದ ಖಾತ್ರಿಯನ್ನೆಲ್ಲ ಆನ್‌ಲೈನ್‌ನಲ್ಲಿ ಮಾಡಲಾಗಿತ್ತು.