‘ಮಹಂತ ಭೂಷಣ’ ಪ್ರಶಸ್ತಿಯಿಂದ ಸನ್ಮಾನಿತರಾದ ಬಾಗಲಕೋಟೆಯ ಕೀರ್ತನಕಾರರಾದ ಪೂ. ಭಸ್ಮೆ ಮಹಾರಾಜರು !

ಇಲ್ಲಿನ ಬನಹಟ್ಟಿ ಗ್ರಾಮದ ‘ಮನೆಯಲ್ಲಿ ಮಹಾಮನೆ ಸೇವಾ ಸಮಿತಿ’ಗೆ ೧೨ ವರ್ಷ ಪೂರ್ಣವಾಗಿರುವ ನಿಮಿತ್ತ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಗನಬಸವ ಮಹಾಸ್ವಾಮಿಜಿ, ಶಾಂತ ಭೀಷ್ಮ ಮಹಾಸ್ವಾಮಿಜಿ ಮತ್ತು ಬನಹಟ್ಟಿಯ ಮಹಂತ ಮಂದಾರ ಮಠದ ಮಹಂತ ಸ್ವಾಮಿಜಿಯವರು ಉಪಸ್ಥಿತರಿದ್ದರು.

ಸರ್ವಧರ್ಮ ಸಮಭಾವವನ್ನು ನಂಬುವ ಅನೇಕ ಮಠಾಧೀಶರು ಹಿಂದೂಗಳ ಪರವಾಗಿ ನಿಲ್ಲುವುದಿಲ್ಲ ! – ಕಾಳಿಕಾ ಯುವಸೇನೆಯ ಸಂಸ್ಥಾಪಕ ಹಾಗೂ ಕರ್ನಾಟಕ ರಾಜ್ಯಾಧ್ಯಕ್ಷ ಋಷಿಕುಮಾರ ಸ್ವಾಮಿ

ಬಲಿಷ್ಠ ಹಿಂದೂ ರಾಷ್ಟ್ರವನ್ನು ನಿರ್ಮಿಸಲೇ ಬೇಕು. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ ಒಂದಾಗಬೇಕು; ಆದರೆ, ಸರ್ವಧರ್ಮಸಮಭಾವವನ್ನು ನಂಬುವ ಅನೇಕ ಮಠಾಧೀಶರು ಹಿಂದೂಗಳ ಪರವಾಗಿ ನಿಲ್ಲುವುದಿಲ್ಲ. ದೇಶದ ಹಿಂದೂ ಸಂಘಟನೆಗಳು ಜಾಗೃತರಾಗದೇ ಇದ್ದಲ್ಲಿ ಅವರು ಕೂಡ ಉಳಿಯುವುದಿಲ್ಲ.

ದೇವಸ್ಥಾನದ ಪರಿಸರದ ಮಣ್ಣನ್ನು ಕಳವು ಮಾಡಿರುವ ಮತಾಂಧನು ಪೊಲೀಸರ ವಶದಲ್ಲಿ!

ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿ ಒಬ್ಬ ಮುಸಲ್ಮಾನನು ಪ್ರವೇಶ ಮಾಡಿ ಯಾರು ನೋಡದ ಹಾಗೆ ಅಲ್ಲಿಯ ಮಣ್ಣನ್ನು ತೆಗೆದುಕೊಂಡು ಹೋಗುವಾಗ ಸಿಸಿಟಿವಿಯ ಕ್ಯಾಮರಾದಲ್ಲಿ ಚಿತ್ರಿತವಾಗಿದೆ. ಕೊಕ್ಕಡ ಊರಿನ ಹಳ್ಳಿಗೇರಿಯ ನಿವಾಸಿ ಕಲಂದರ ಶಾಹ ಎಂಬವನ ಮೇಲೆ ಆರೋಪ ದಾಖಲಾಗಿದೆ.

ವೀಕ್ಷಿಸಿ ವಿಡಿಯೋ : ಮಡಿಕೇರಿಯಲ್ಲಿ ಸೈನಿಕ ಮತ್ತು ಅವರ ಕುಟುಂಬದ ಮೇಲೆ ನಡೆದ ಮತಾಂಧರ ದಾಳಿಯ ವಿರುದ್ಧ ಮಾಜಿ ಸೈನಿಕರ ಪ್ರತಿಭಟನೆ

ಇಲ್ಲಿ ಕೆಲವು ದಿನಗಳ ಹಿಂದೆ ಆಶೋಕ ಕುಮಾರ ಈ ಸೈನಿಕನ ಮೇಲೆ ಮತ್ತು ಆತನ ಕುಟುಂಬದ ಮೇಲೆ ಚಿಕ್ಕ ಅಪಘಾತದಿಂದ ಕೆಲವು ಮತಾಂಧರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಹಲ್ಲೆಯ ನಂತರ ಗಂಭೀರವಾಗಿ ಗಾಯಗೊಂಡಿರುವ ಕೆಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಕ್ರಾಂತಿಯ ಮೊದಲು ಜಗತ್ತೇ ಬೆಚ್ಚಿ ಬೀಳುವಂತಹ ದುರ್ಘಟನೆ ನಡೆಯಲಿದೆ !

ಸಂಕ್ರಾಂತಿಯ ಮೊದಲು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಅವಘಡ ನಡೆಯಲಿದೆ. ಜಗತ್ತೇ ಬೆಚ್ಚಿ ಬೀಳಿಸುವಂತಹ ದುರ್ಘಟನೆಯಾಗಲಿದೆ. ಆಗಸ್ಟ್‍ನ ಮೂರನೇ ವಾರದಿಂದ ರೋಗರುಜಿನಗಳು ಹೆಚ್ಚಾಗಲಿವೆ. ಜನವರಿ 2022 ರ ವರೆಗೆ ರೋಗಿಗಳ ಸ್ಥಿತಿ ಹಾಗೆಯೇ ಇರಲಿದೆ.

ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧಿರಾಜ್ ತೀರ್ಥ ಶ್ರೀಪಾದಂಗಳರವರ ದೇಹತ್ಯಾಗ

ಗೋಕರ್ಣ ಪರ್ತಗಾಳಿ ಶ್ರೀಗಳು ೧೯೬೭ ರಲ್ಲಿ ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದರು ಅವರು ಪೂರ್ವಾಶ್ರಮದಲ್ಲಿ ಕುಂದಾಪುರ ಸಮೀಪದ ಗಂಗೊಳ್ಳಿಯವರಾಗಿದ್ದರು. ೨೦೧೬ ರಲ್ಲಿ ಶ್ರೀಗಳ ಸುವರ್ಣ ಚಾತುರ್ಮಾಸ್ಯ ಆಚರಣೆ ನಡೆದಿತ್ತು.

ಆರೋಪಿ ಅಲ್ಬರ್ಟ್ ಫರ್ನಾಂಡಿಸ್‍ನನ್ನು ಪೊಲೀಸರು ಬಂಧಿಸಿದ ನಂತರ ದೇವಸ್ಥಾನಕ್ಕೆ ಹೋಗಿ ಕ್ಷಮಾಯಾಚನೆ !

ಬಜ್ಪೆಯ ನಿವಾಸಿಯಾಗಿರುವ ಅಲ್ಬರ್ಟ್ ಫರ್ನಾಂಡಿಸ್ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲವು ದಿನಗಳ ಹಿಂದೆ ಆತ ದಿನೇಶ ಎಂಬ ಹಿಂದೂವಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ನಿಂದಿಸುವ ಧ್ವನಿ ಸಂದೇಶವನ್ನು ಕಳುಹಿಸಿದ್ದನು. ಆ ಸಂದೇಶವನ್ನು ಕೇಳಿ ಹಿಂದೂ ಸಂಘಟನೆಗಳು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದವು.

ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಮುಖ್ಯಮಂತ್ರಿ !

ಬಸವರಾಜ ಬೊಮ್ಮಯಿ ಅವರು ಜುಲೈ ೨೮ ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು ಕರ್ನಾಟಕದ ೨೩ ನೇ ಮುಖ್ಯಮಂತ್ರಿಯಾಗಿದ್ದಾರೆ. ರಾಜಭವನದ ಗ್ಲಾಸ್ ಹೌಸ್‌ನಲ್ಲಿ(ಗಾಜಿನ ಮನೆ) ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋತ ಇವರು ಬಸವರಾಜ ಬೊಮ್ಮಾಯಿಯವರಿಗೆ ಹುದ್ದೆ ಮತ್ತು ಗೌಪ್ಯತೆಯ ಬಗ್ಗೆ ಪ್ರಮಾಣವಚನ ನೀಡಿದರು.

ಕರ್ನಾಟಕದ ಮುಖ್ಯಮಂತ್ರಿ ಯೆಡಿಯೂರಪ್ಪನವರ ರಾಜೀನಾಮೆ

ಕರ್ನಾಟಕದ ಮುಖ್ಯಮಂತ್ರಿಗಳಾದ ಬಿ.ಎಸ್. ಯೆಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಿದ್ದಾರೆ. ಜುಲೈ ೨೬ ರಂದು ಅವರ ಸರಕಾರಕ್ಕೆ ೨ ವರ್ಷಗಳು ಪೂರ್ಣವಾದವು. ಅದೇ ದಿನದಂದು ಅವರು ರಾಜಿನಾಮೆ ಸಲ್ಲಿಸಿದ್ದಾರೆ.

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾದ ‘ಆನ್‌ಲೈನ್’ ಗುರುಪೂರ್ಣಿಮಾ ಮಹೋತ್ಸವ’ವು ಬಾವಪೂರ್ಣ ವಾತಾವರಣದಲ್ಲಿ ಆಚರಣೆ !

ಈ ಶುಭ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ‘ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆ’ ಈ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು. ಅವರು ಮಾರ್ಗದರ್ಶನದಲ್ಲಿ ‘ಅಡಚಣೆಯ ಸಮಯದಲ್ಲಿ ನಮಗೆ ಸಹಾಯವಾಗಬೇಕು; ಅದಕ್ಕಾಗಿ ನಾವು ಬ್ಯಾಂಕಿನಲ್ಲಿ ಹಣ ಇಡುತ್ತೇವೆ.