ಸಂಕ್ರಾಂತಿಯ ಮೊದಲು ಜಗತ್ತೇ ಬೆಚ್ಚಿ ಬೀಳುವಂತಹ ದುರ್ಘಟನೆ ನಡೆಯಲಿದೆ !

ಕೋಲಾರದಲ್ಲಿನ ಕೋಡಿ ಮಠದ ಸ್ವಾಮಿ ಡಾ. ಶಿವಾನಂದ ಶಿವಯೋಗಿ ಯವರಿಂದ ಭವಿಷ್ಯವಾಣಿ!

ಕೋಡಿ ಮಠದ ಸ್ವಾಮಿ ಡಾ. ಶಿವಾನಂದ ಶಿವಯೋಗಿ

ಕೋಲಾರ – ಸಂಕ್ರಾಂತಿಯ ಮೊದಲು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಅವಘಡ ನಡೆಯಲಿದೆ. ಜಗತ್ತೇ ಬೆಚ್ಚಿ ಬೀಳಿಸುವಂತಹ ದುರ್ಘಟನೆಯಾಗಲಿದೆ. ಆಗಸ್ಟ್‍ನ ಮೂರನೇ ವಾರದಿಂದ ರೋಗರುಜಿನಗಳು ಹೆಚ್ಚಾಗಲಿವೆ. ಜನವರಿ 2022 ರ ವರೆಗೆ ರೋಗಿಗಳ ಸ್ಥಿತಿ ಹಾಗೆಯೇ ಇರಲಿದೆ. ಜನರು ಕೇವಲ ರೋಗದಿಂದ ವಲ್ಲ, ಭಯದಿಂದ ತತ್ತರಿಸಲಿದ್ದಾರೆ. ನವೆಂಬರನಿಂದ ಸಂಕ್ರಾಂತಿಯವರೆಗಿನ ಕಾಲಾವಧಿಯಲ್ಲಿ ದೇಶದ ಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡ ನಡೆಯಬಹುದು. ಆದ್ದರಿಂದ ಜಗತ್ತೇ ಬೆಚ್ಚಿಬೀಳಲಿದೆ, ಎಂದು ಕೋಲಾರದ ಅರಸಿಕೆರೆಯಲ್ಲಿನ ಹಾರನಹಳ್ಳಿಯ ಕೋಡಿ ಮಠದ ಸ್ವಾಮಿ ಡಾ. ಶಿವಾನಂದ ಶಿವಯೋಗಿ ಸ್ವಾಮಿಯವರು ಭವಿಷ್ಯವನ್ನು ನುಡಿದಿದ್ದಾರೆ.

ಸ್ವಾಮಿ ಡಾ. ಶಿವಾನಂದ ಶಿವಯೋಗಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಮುಂದಿನ ಕಾರ್ತಿಕ ಮಾಸದವರೆಗೆ ಜಲದ(ನೀರು) ಗಂಡಾಂತರವಿದೆ. ಕೊರೊನಾ ಇನ್ನಷ್ಟು ಹೆಚ್ಚಾಗಲಿದೆ. ಆದರೂ ದೇವರ ಕೃಪೆಯಿಂದ ಒಳ್ಳೆಯ ದಿನಗಳೂ ಬರಲಿವೆ. ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯ ಬಗ್ಗೆ ಸಧ್ಯ ಏನೂ ಹೇಳುವುದಿಲ್ಲ. ಕಾರ್ತಿಕ ಮಾಸ ಮುಗಿದ ಮೇಲೆ ಹೇಳುತ್ತೇನೆ ಎಂದು ಹೇಳಿದರು.