‘ಮಹಂತ ಭೂಷಣ’ ಪ್ರಶಸ್ತಿಯಿಂದ ಸನ್ಮಾನಿತರಾದ ಬಾಗಲಕೋಟೆಯ ಕೀರ್ತನಕಾರರಾದ ಪೂ. ಭಸ್ಮೆ ಮಹಾರಾಜರು !

ಬಾಗಲಕೋಟ – ಇಲ್ಲಿನ ಬನಹಟ್ಟಿ ಗ್ರಾಮದ ‘ಮನೆಯಲ್ಲಿ ಮಹಾಮನೆ ಸೇವಾ ಸಮಿತಿ’ಗೆ ೧೨ ವರ್ಷ ಪೂರ್ಣವಾಗಿರುವ ನಿಮಿತ್ತ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಗನಬಸವ ಮಹಾಸ್ವಾಮಿಜಿ, ಶಾಂತ ಭೀಷ್ಮ ಮಹಾಸ್ವಾಮಿಜಿ ಮತ್ತು ಬನಹಟ್ಟಿಯ ಮಹಂತ ಮಂದಾರ ಮಠದ ಮಹಂತ ಸ್ವಾಮಿಜಿಯವರು ಉಪಸ್ಥಿತರಿದ್ದರು. ಈ ಸಮಯದಲ್ಲಿ ರಾಮಪುರದ ಕೀರ್ತನಕಾರರಾದ ಪೂ. ಸದಾನಂದ ಭಸ್ಮೆ ಇವರಿಗೆ ‘ಮಹಂತ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪೂ. ಸದಾನಂದ ಭಸ್ಮೆ ಮಹಾರಾಜರು ಪ್ರವಚನ ನಿಡಿದರು. ಅದರೊಂದಿಗೆ ಶ್ರೀ. ಶೀವಾನಂದ ಭಸ್ಮೆ (ಪೂ. ಭಸ್ಮೆ ಮಹಾರಾಜರ ಮಗ) ಇವರ ಸಂಗೀತದ ಕಾರ್ಯಕ್ರಮವೂ ನಡೆಯಿತು.