ಆರೋಪಿ ಅಲ್ಬರ್ಟ್ ಫರ್ನಾಂಡಿಸ್‍ನನ್ನು ಪೊಲೀಸರು ಬಂಧಿಸಿದ ನಂತರ ದೇವಸ್ಥಾನಕ್ಕೆ ಹೋಗಿ ಕ್ಷಮಾಯಾಚನೆ !

ಮಂಗಳೂರಿನ ಕಟಿಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಅವಹೇಳನಕಾರಿ ಶಬ್ದಗಳಿಂದ ಅವಮಾನಿಸಿದ ಪ್ರಕರಣ

ಪೊಲೀಸರು ಹಿಡಿಯದೇ ಇರುತ್ತಿದ್ದರೆ ಫರ್ನಾಂಡಿಸ್ ದೇವಾಲಯಕ್ಕೆ ಹೋಗಿ ಕ್ಷಮೆಯಾಚಿಸುತ್ತಿದ್ದರೇನು ? ಇಂತಹವರನ್ನು ಕೇವಲ ಕ್ಷಮೆ ನೀಡಿ ಬಿಟ್ಟುಬಿಡದೇ ಅವರಿಗೆ ಶಿಕ್ಷೆಯಾಗಲು ಪ್ರಯತ್ನಿಸಬೇಕು !

ಮಂಗಳೂರು – ಇಲ್ಲಿ ಕೆಲವು ದಿನಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಅಶ್ಲೀಲವಾಗಿ ವಾಯ್ಸ್ ಮೆಸೇಜ್‍ನ ಮೂಲಕ ಅವಮಾನಿಸಿದ ಆರೋಪಿ ಅಲ್ಬರ್ಟ್ ಫರ್ನಾಂಡಿಸ್ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಿದ ಘಟನೆ ನಡೆದಿದೆ.

ಬಜ್ಪೆಯ ನಿವಾಸಿಯಾಗಿರುವ ಅಲ್ಬರ್ಟ್ ಫರ್ನಾಂಡಿಸ್ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲವು ದಿನಗಳ ಹಿಂದೆ ಆತ ದಿನೇಶ ಎಂಬ ಹಿಂದೂವಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ನಿಂದಿಸುವ ಧ್ವನಿ ಸಂದೇಶವನ್ನು ಕಳುಹಿಸಿದ್ದನು. ಆ ಸಂದೇಶವನ್ನು ಕೇಳಿ ಹಿಂದೂ ಸಂಘಟನೆಗಳು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದವು. ಇದರಿಂದ ಪೊಲೀಸರು ಅಲ್ಬರ್ಟ್ ಫರ್ನಾಂಡಿಸ್‍ನನ್ನು ಮುಂಬಯಿಯಿಂದ ಕರೆದುಕೊಂಡು ಮಂಗಳೂರಿಗೆ ಕರೆತಂದರು. ಫರ್ನಾಂಡಿಸ್ ಕಟೀಲು ದೇವಾಲಯಕ್ಕೆ ಹೋಗಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಮುಂದೆ ‘ನಾನು ತಪ್ಪು ಮಾಡಿದೆ. ಹೀಗೆ ಮಾಡಬಾರದಿತ್ತು. ನಾನು ಅಪರಾಧಿಯಾಗಿದ್ದೇನೆ’, ಎಂದು ಕಣ್ಣಿರಿಡುತ್ತಾ ಕ್ಷಮೆಯಾಚನೆ ಮಾಡಿದನು. ನಂತರ ದೂರನ್ನು ಸಲ್ಲಿಸಿದ್ದ ಹಿಂದೂ ಸಂಘಟನೆಯ ಮುಖ್ಯಸ್ಥರು ಬಜ್ಪೆ ಪೊಲೀಸ್ ಠಾಣೆಯಲ್ಲಿ ಒಟ್ಟಾಗಿ ಸೇರಿ ಈ ಪ್ರಕರಣವನ್ನು ಇತ್ಯರ್ಥಗೊಳಿಸಿದರು.

( ಸೌಜನ್ಯ : Daijiworld Television )