ದೇವಸ್ಥಾನದ ಪರಿಸರದ ಮಣ್ಣನ್ನು ಕಳವು ಮಾಡಿರುವ ಮತಾಂಧನು ಪೊಲೀಸರ ವಶದಲ್ಲಿ!

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿ ಒಬ್ಬ ಮುಸಲ್ಮಾನನು ಪ್ರವೇಶ ಮಾಡಿ ಯಾರು ನೋಡದ ಹಾಗೆ ಅಲ್ಲಿಯ ಮಣ್ಣನ್ನು ತೆಗೆದುಕೊಂಡು ಹೋಗುವಾಗ ಸಿಸಿಟಿವಿಯ ಕ್ಯಾಮರಾದಲ್ಲಿ ಚಿತ್ರಿತವಾಗಿದೆ. ಕೊಕ್ಕಡ ಊರಿನ ಹಳ್ಳಿಗೇರಿಯ ನಿವಾಸಿ ಕಲಂದರ ಶಾಹ ಎಂಬವನ ಮೇಲೆ ಆರೋಪ ದಾಖಲಾಗಿದೆ. ಪೊಲೀಸರು ಮಾಡಿರುವ ವಿಚಾರಣೆಯಲ್ಲಿ ಕಲಂದರನು ‘ದೇವಸ್ಥಾನದ ಮಣ್ಣು ಮತ್ತು ನೀರು ಕುಡಿಯುವುದರಿಂದ ಆಧ್ಯಾತ್ಮಿಕ ಉಪಾಯವಾಗಿ ಲಾಭವಾಗುತ್ತದೆ ಎಂದು ಬಲ್ಲವರು ಹೇಳಿದಕ್ಕೆ ಮಣ್ಣನ್ನು ತೆಗೆದುಕೊಂಡೆ’ ಎಂದು ಹೇಳಿಕೆ ನೀಡಿದ್ದಾನೆ. (ಹಿಂದೂಗಳ ದೇವಸ್ಥಾನದ ಪರಿಸರದ ಮಣ್ಣನ್ನು ಆಧ್ಯಾತ್ಮಿಕ ಉಪಾಯಕ್ಕಾಗಿ ಬಳಸಲಾಗುತ್ತಿದೆಯೋ ಅಥವಾ ಹಿಂದೂಗಳಿಗೆ ತೊಂದರೆ ಕೊಡುವುದಕ್ಕಾಗಿ ಎಂದು ಪೊಲೀಸರು ಪತ್ತೆಹಚ್ಚಬೇಕು! – ಸಂಪಾದಕರು)