ಕರ್ನಾಟಕದ ಮುಖ್ಯಮಂತ್ರಿ ಯೆಡಿಯೂರಪ್ಪನವರ ರಾಜೀನಾಮೆ

ಬಿ.ಎಸ್. ಯೆಡಿಯೂರಪ್ಪ

ಬೆಂಗಳೂರು (ಕರ್ನಾಟಕ) – ಕರ್ನಾಟಕದ ಮುಖ್ಯಮಂತ್ರಿಗಳಾದ ಬಿ.ಎಸ್. ಯೆಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದಾರೆ. ಜುಲೈ ೨೬ ರಂದು ಅವರ ಸರಕಾರಕ್ಕೆ ೨ ವರ್ಷಗಳು ಪೂರ್ಣವಾದವು. ಅದೇ ದಿನದಂದು ಅವರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದ ಹೊಸ ಮುಖ್ಯಮಂತ್ರಿಗಳು ಯಾರು ಎಂದು ಭಾಜಪವು ಇನ್ನೂ ಘೋಷಿಸಿಲ್ಲ.

ರಾಜೀನಾಮೆ ನೀಡಲು ಯಾರೂ ನನ್ನ ಮೇಲೆ ಒತ್ತಡ ಹೇರಿಲ್ಲ. ನಾನೇ ಸ್ವತಃ ರಾಜೀನಾಮೆ ನೀಡಿರುವೆನು. ಸರಕಾರಕ್ಕೆ ೨ ವರ್ಷ ಪೂರ್ಣವಾದ ಬಳಿಕ ಯಾರಾದರೂ ಮುಖ್ಯಮಂತ್ರಿ ಪದವಿಯನ್ನು ಸ್ವೀಕರಿಸಬಹುದು. ಮುಂದಿನ ಚುನಾವಣೆಯಲ್ಲಿ ನಾನು ಭಾಜಪವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕೆಲಸ ಮಾಡುವೆನು ಎಂದು ಅವರು ರಾಜೀನಾಮೆ ಸಲ್ಲಿಸಿದ ಬಳಿಕ ಹೇಳಿದರು.