ರಾಷ್ಟ್ರದ ಏಳಿಗೆಗಾಗಿ ಇಂದು ಮುಂಬಯಿಯಲ್ಲಿ ನಡೆಯಲಿದೆ ಶ್ರೀ ರಾಜಮಾತಂಗಿ ಮಹಾಯಜ್ಞ!

ಶ್ರೀ ರಾಜಮಾತಂಗಿ ಮಹಾಯಜ್ಞದ ನೇರ ಪ್ರಸಾರ ನೋಡಲು ಈ ಕೆಳಗಿನ ಲೀಂಕ್ ಅನ್ನು ಕ್ಲಿಕ್ ಮಾಡಿರಿ !

♦ Youtube.com/@SanatanSanstha
♦ SanatanRashtraShankhnad.in/events/shri-rajamatangi-mahayajna

ಶ್ರೀ ರಾಜಮಾತಂಗಿ ಮಹಾಯಜ್ಞ

ನಾರದರು ಬ್ರಹ್ಮದೇವನಲ್ಲಿ ಮಾತಂಗಿಯ ಉಗಮದ ಬಗ್ಗೆ ಕೇಳಿದಾಗ, ಬ್ರಹ್ಮದೇವರು, ‘ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು ‘ಮಾತಂಗಿ’ಯ ರೂಪದಲ್ಲಿ ಮಾತಂಗ ಋಷಿಗಳ ಮುಂದೆ ಪ್ರಕಟಳಾದಳು.

ಮಹಾಬಳೇಶ್ವರ (ಜಿಲ್ಲೆ ಸತಾರಾ)ದಲ್ಲಿರುವ ಮಹಾಬಳೇಶ್ವರ ಶಿವನ ಚರಣಗಳಲ್ಲಿ ‘ಶ್ರೀ ರಾಜಮಾತಂಗಿ ಮಹಾಯಜ್ಞ’ದ ಆಮಂತ್ರಣ ಪತ್ರಿಕೆ ಸಮರ್ಪಣೆ ! – Sri Rajamatangi Yajnya

ಈ ಯಜ್ಞದ ಆಮಂತ್ರಣವನ್ನು ನೀಡಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಮೇ 14 ರಂದು ಮಹಾಬಳೇಶ್ವರದಲ್ಲಿರುವ ಮಹಾಬಳೇಶ್ವರ ಶಿವಮಂದಿರಕ್ಕೆ ಭೇಟಿ ನೀಡಿದರು.

ಭಾರತದ ರಕ್ಷಣೆಗಾಗಿ ಮುಂಬಯಿಯಲ್ಲಿ ಮೇ ೧೭ ರಂದು ‘ಶ್ರೀ ರಾಜಮಾತಂಗಿ ಮಹಾಯಾಗ’!

ಯಜ್ಞದ ಪ್ರಾರಂಭವು ಶ್ರೀ ಗಣೇಶ ಆವಾಹನೆ, ಪುಣ್ಯಾಹವಾಚನ ಮತ್ತು ಮಹಾಸಂಕಲ್ಪದೊಂದಿಗೆ ಆಗಲಿದೆ. ಶ್ರೀ ರಾಜಮಾತಂಗಿ ದೇವಿಯ ಮೂಲಮಂತ್ರಗಳ ಜಯಘೋಷದೊಂದಿಗೆ ಆಹುತಿಗಳನ್ನು ಅರ್ಪಿಸಲಾಗುವುದು.

ಸೋಲಾಪುರದ ಶ್ರೀ ಸಿದ್ಧೇಶ್ವರನ ಚರಣಗಳಿಗೆ ಶ್ರೀ ರಾಜಮಾತಂಗಿ ಮಹಾಯಾಗದ ಆಮಂತ್ರಣ ಪತ್ರಿಕೆ ಅರ್ಪಣೆ!

ಸದ್ಯದ ಯುದ್ಧಕಾಲದಲ್ಲಿ ತಪೋಭೂಮಿ ಭಾರತಕ್ಕೆ ರಕ್ಷಣಾ ಕವಚ ಲಭಿಸಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯ ವತಿಯಿಂದ ಮೇ ೧೭, ೨೦೨೬ ರಂದು ಮುಂಬಯಿಯ ಪ್ರಭಾದೇವಿಯ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ‘ಶ್ರೀ ರಾಜಮಾತಂಗಿ ಮಹಾಯಾಗ’ವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.

ಶ್ರೀ ರಾಜಮಾತಂಗಿ ಮಹಾಯಜ್ಞದ ಭವ್ಯ ಮಂಟಪದ ಸಮರೋಪಾದಿಯಲ್ಲಿ ನಿರ್ಮಾಣ !

ಮಹಾಯಜ್ಞಕ್ಕೆ ಆಗಮಿಸುವ ಭಕ್ತರಿಗೆ ಪೂರ್ವನೋಂದಣಿ ಕಡ್ಡಾಯವಾಗಿದೆ. ಯಜ್ಞ ಮಂಟಪ ಪ್ರವೇಶಿಸುವಾಗ ಭಕ್ತರಿಗೆ ಗುರುತಿನ ಚೀಟಿ ನೀಡಲಾಗುವುದು. ಮಂಟಪ ಪ್ರವೇಶಿಸಲು 2 ದ್ವಾರಗಳಿರಲಿವೆ. ಗಣ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಇರಲಿದೆ.

ಮುಂಬಯಿನಲ್ಲಿ ನಡೆಯಲಿರುವ ಶ್ರೀ ರಾಜಮಾತಂಗಿ ಮಹಾಯಜ್ಞದ ಬಗ್ಗೆ ವಿವಿಧ ಕಡೆಗಳಲ್ಲಿ ಸಭೆಗಳ ಮೂಲಕ ಪ್ರಸಾರ !

ಆದಿಶಕ್ತಿದೇವಿ ಸತಿಯ ೧೦ ರೂಪಗಳಲ್ಲಿ, ಅಂದರೆ ದಶಮಹಾವಿದ್ಯೆಗಳಲ್ಲಿ ಶ್ರೀ ರಾಜಮಾತಂಗಿ ದೇವಿಯು ಒಂದು. ಶ್ರೀರಾಜಮಾತಂಗಿ ದೇವಿಯು ಆದಿಶಕ್ತಿಯ ಪ್ರಧಾನಮಂತ್ರಿ(ಸಲಹೆಗಾರ)ಯಾಗಿದ್ದಾಳೆ ಹಾಗೂ ಶಕ್ತಿ ಮತ್ತು ವಾಣಿಯ ಅಧಿದೇವತೆಯಾಗಿದ್ದಾಳೆ.

ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರಿಗೆ ಶ್ರೀ ರಾಜಮಾತಂಗಿ ಮಹಾಯಾಗದ ಆಮಂತ್ರಣ !

ಶ್ರೀ. ಚೇತನ್ ರಾಜಹಂಸ ಅವರು ರಾಜ್ಯಪಾಲರಿಗೆ ಸನಾತನ ಸಂಸ್ಥೆಯ ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು, ಹಾಗೂ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಭೇಟಿ ನೀಡುವಂತೆ ಆಮಂತ್ರಣ ನೀಡಿದರು.

ತುಳಜಾಪುರದ (ಧಾರಾಶಿವ ಜಿಲ್ಲೆ) ಶ್ರೀ ಭವಾನಿ ದೇವಿಯ ಚರಣಗಳಿಗೆ ‘ಶ್ರೀ ರಾಜಮಾತಂಗಿ ಮಹಾಯಜ್ಞ’ದ ಆಮಂತ್ರಣ ಪತ್ರಿಕೆ ಅರ್ಪಣೆ !

ಈ ಯಜ್ಞದ ಆಮಂತ್ರಣವನ್ನು ನೀಡಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿಯಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು 12 ಮೇ ರಂದು ತುಳಜಾಪುರದ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಫಲಕ ಮತ್ತು ಡಿಜಿಟಲ್ ಸ್ಕ್ರೀನ್ ಮೂಲಕ ಮುಂಬಯಿನಲ್ಲಿ ಶ್ರೀ ರಾಜಮಾತಂಗಿ ಮಹಾಯಜ್ಞ ಸಮಾರಂಭದ ಪರಿಣಾಮಕಾರಿ ಪ್ರಚಾರ !

ಯಜ್ಞ ಸಮಾರಂಭದಲ್ಲಿ ಪಾಲ್ಗೊಳ್ಳಲು ಫಲಕಗಳ ಮೇಲೆ ‘ಕ್ಯೂ.ಆರ್.’ ಕೋಡ್ ಪ್ರದರ್ಶಿಸಲಾಗಿದೆ. ಈ ಮೂಲಕ ಅನೇಕ ರಾಷ್ಟ್ರ ಮತ್ತು ಧರ್ಮಪ್ರೇಮಿ ನಾಗರಿಕರು ಯಜ್ಞ ಸಮಾರಂಭಕ್ಕೆ ಬರಲು ನೋಂದಾಯಿಸಿಕೊಳ್ಳುತ್ತಿದ್ದಾರೆ.