ಮಹಾಬಳೇಶ್ವರ (ಜಿಲ್ಲೆ ಸತಾರಾ)ದಲ್ಲಿರುವ ಮಹಾಬಳೇಶ್ವರ ಶಿವನ ಚರಣಗಳಲ್ಲಿ ‘ಶ್ರೀ ರಾಜಮಾತಂಗಿ ಮಹಾಯಜ್ಞ’ದ ಆಮಂತ್ರಣ ಪತ್ರಿಕೆ ಸಮರ್ಪಣೆ ! – Sri Rajamatangi Yajnya

ಅತಿಬಳೇಶ್ವರ ದೇವಸ್ಥಾನದಲ್ಲಿರುವ ವಿಷ್ಣುಸ್ವರೂಪ ಲಿಂಗ ಮತ್ತು ಪಂಚಗಂಗಾ ದೇವಸ್ಥಾನದಲ್ಲಿ ದರ್ಶನ ಪಡೆದರು !

ಮಹಾಬಳೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದ ನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಮಹಾಬಳೇಶ್ವರ (ಜಿಲ್ಲೆ ಸತಾರಾ) – ‘ಪ್ರಸ್ತುತ ಯುದ್ಧದ ಸಮಯದಲ್ಲಿ ತಪೋಭೂಮಿ ಭಾರತಕ್ಕೆ ರಕ್ಷಾಕವಚ ದೊರೆಯಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ’, ಇದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ಮೇ 17, 2026 ರಂದು ಮುಂಬಯಿನ ಪ್ರಭಾದೇವಿಯಲ್ಲಿರುವ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ‘ಶ್ರೀ ರಾಜಮಾತಂಗಿ ಮಹಾಯಜ್ಞ’ವನ್ನು ಭವ್ಯವಾಗಿ ಆಯೋಜಿಸಲಾಗಿದೆ. ಈ ಯಜ್ಞದ ಆಮಂತ್ರಣವನ್ನು ನೀಡಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಮೇ 14 ರಂದು ಮಹಾಬಳೇಶ್ವರದಲ್ಲಿರುವ ಮಹಾಬಳೇಶ್ವರ ಶಿವಮಂದಿರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಇಲ್ಲಿನ ಶ್ರೀ ಮಹಾಬಳೇಶ್ವರ ಶಿವನ ಭಾವಪೂರ್ಣ ದರ್ಶನ ಪಡೆದರು ಮತ್ತು ಶಿವಲಿಂಗಕ್ಕೆ ಅಭಿಷೇಕ ಮಾಡಿದರು.

ದೇವಸ್ಥಾನದ ಪೂಜಾರಿ ಶ್ರೀ. ಓಂಕಾರ ದೀಕ್ಷಿತ ಅವರು ಪೌರೋಹಿತ್ಯ ಮಾಡಿದರು. ಇದರ ನಂತರ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ಭಗವಾನ ಶಿವನ ಚರಣಗಳಲ್ಲಿ ಯಜ್ಞದ ಆಮಂತ್ರಣ ಪತ್ರಿಕೆಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉತ್ತಮ ಆರೋಗ್ಯ ದೊರೆಯಲಿ, ಆಪತ್ಕಾಲದಿಂದ ಸಾಧಕರ ರಕ್ಷಣೆಯಾಗಲಿ, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿ, ಇದರೊಂದಿಗೆ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲಿ, ದೇಶದ ರಕ್ಷಣೆಯಾಗಲಿ ಮತ್ತು ಜನರ ಆರೋಗ್ಯವು ಚೆನ್ನಾಗಿರಲಿ ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಶಿವನ ಚರಣಗಳಲ್ಲಿ ಮನಃಪೂರ್ವಕ ಪ್ರಾರ್ಥಿಸಿದರು.

ಮಹಾಬಳೇಶ್ವರ ದೇವಸ್ಥಾನದ ಪೂಜಾರಿ ಶ್ರೀ ಓಂಕಾರ ದೀಕ್ಷಿತ ಅವರಿಗೆ ಆಮಂತ್ರಣ ಪತ್ರಿಕೆ ನೀಡುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

 ವಿಷ್ಣುಸ್ವರೂಪ ಲಿಂಗದ ಅತಿಪ್ರಾಚೀನ ಅತಿಬಳೇಶ್ವರ ದೇವಸ್ಥಾನ ! 

ಮಹಾಬಳೇಶ್ವರ ಶಿವಲಿಂಗ

‘ಅತಿಬಳೇಶ್ವರ ದೇವಸ್ಥಾನವು ಹಳೆಯ ಮಹಾಬಳೇಶ್ವರದಲ್ಲಿರುವ ಪ್ರಾಚೀನ ಮತ್ತು ಐತಿಹಾಸಿಕ ದೇವಸ್ಥಾನವಾಗಿದೆ. ಇಲ್ಲಿ ವಿಷ್ಣುಸ್ವರೂಪ ಲಿಂಗವಿದೆ. ಈ ದೇವಸ್ಥಾನವು 15 ನೇ ಶತಮಾನದ್ದಾಗಿದ್ದು, ಮಹಾಬಳೇಶ್ವರ ಕ್ಷೇತ್ರದ 3 ಮುಖ್ಯ ಪವಿತ್ರ ದೇವಸ್ಥಾನಗಳಲ್ಲಿ ಒಂದಾಗಿದೆ. ಒಂದು ಐತಿಹ್ಯದ ಪ್ರಕಾರ ಭಗವಾನ್ ಶಿವ ಮತ್ತು ಭಗವಾನ್ ವಿಷ್ಣುವು ಮಹಾಬಲ ಮತ್ತು ಅತಿಬಲ ಎಂಬ 2 ರಾಕ್ಷಸರನ್ನು ಸೋಲಿಸಿದರು. ಅವರ ವಿನಂತಿಯ ಮೇರೆಗೆ ಈ ದೇವಸ್ಥಾನವನ್ನು ನಿರ್ಮಿಸಲಾಯಿತು, ಹಾಗೆಯೇ ಅತಿಬಲ ಎಂಬ ರಾಕ್ಷಸನು ಈ ಭಾಗದಲ್ಲಿ ತಪಸ್ಸು ಮಾಡಿದ್ದನು. ಅತಿಬಲ ಎಂಬ ರಾಕ್ಷಸನ ಹೆಸರಿನಿಂದಲೇ ಈ ದೇವಸ್ಥಾನಕ್ಕೆ ಅತಿಬಳೇಶ್ವರ ಎಂಬ ಹೆಸರು ಬಂದಿದೆ.