ಸೋಲಾಪುರದ ಶ್ರೀ ಸಿದ್ಧೇಶ್ವರನ ಚರಣಗಳಿಗೆ ಶ್ರೀ ರಾಜಮಾತಂಗಿ ಮಹಾಯಾಗದ ಆಮಂತ್ರಣ ಪತ್ರಿಕೆ ಅರ್ಪಣೆ!

  • ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಗ್ರಾಮದೇವತೆ ಶ್ರೀ ಸಿದ್ಧೇಶ್ವರ ಮಹಾರಾಜರ ಭಾವಪೂರ್ಣ ದರ್ಶನ ಪಡೆದರು

  • ಮುಂಬಯಿಯಲ್ಲಿ ಮೇ ೧೭ ರಂದು ಶ್ರೀ ರಾಜಮಾತಂಗಿ ಮಹಾಯಾಗ!

ಸೋಲಾಪುರ – ‘ಸದ್ಯದ ಯುದ್ಧಕಾಲದಲ್ಲಿ ತಪೋಭೂಮಿ ಭಾರತಕ್ಕೆ ರಕ್ಷಣಾ ಕವಚ ಲಭಿಸಲಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಲಿ’ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯ ವತಿಯಿಂದ ಮೇ ೧೭, ೨೦೨೬ ರಂದು ಮುಂಬಯಿಯ ಪ್ರಭಾದೇವಿಯ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ‘ಶ್ರೀ ರಾಜಮಾತಂಗಿ ಮಹಾಯಾಗ’ವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಈ ಯಾಗಕ್ಕೆ ಆಮಂತ್ರಣ ನೀಡಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಶಿವಯೋಗ ಸಮಾಧಿ ಹಾಗೂ ಗ್ರಾಮದೇವತೆ ಶ್ರೀ ಸಿದ್ಧೇಶ್ವರ ಮಹಾರಾಜರ ಚರಣಗಳಿಗೆ ಆಮಂತ್ರಣ ಪತ್ರಿಕೆಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಅವರು ಶ್ರೀ ಸಿದ್ಧೇಶ್ವರ ಮಹಾರಾಜರ ಭಾವಪೂರ್ಣ ದರ್ಶನವನ್ನೂ ಪಡೆದರು.

ಶ್ರೀ ಸಿದ್ಧೇಶ್ವರ ಮಹಾರಾಜರ ದರ್ಶನ ಪಡೆದ ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ದೇವಸ್ಥಾನದ ಪುರೋಹಿತರಾದ ಶ್ರೀ. ಮಹೇಶ ಸ್ವಾಮಿ ಮತ್ತು ಶ್ರೀ. ರಾಜಶೇಖರ ಹಬ್ಬು ಅವರು ಸಂಕಲ್ಪ ಮಾಡಿ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ‘ಶ್ರೀ ರಾಜಮಾತಂಗಿ ಮಹಾಯಾಗವು ನಿರ್ವಿಘ್ನವಾಗಿ ನೆರವೇರಲಿ, ದೇಶದ ರಕ್ಷಣೆಯಾಗಲಿ, ಜನರ ಆರೋಗ್ಯ ವೃದ್ಧಿಸಲಿ ಮತ್ತು ಆದಷ್ಟು ಬೇಗ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿ’ ಎಂದು ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಶ್ರೀ ಸಿದ್ಧೇಶ್ವರ ಮಹಾರಾಜರಲ್ಲಿ ಮನಃಪೂರ್ವಕವಾಗಿ ಪ್ರಾರ್ಥಿಸಿದರು. ಈ ವೇಳೆ ಸನಾತನ ಸಂಸ್ಥೆಯ ಪೂ. (ಕು.) ದೀಪಾಲಿ ಮತಕರ ಸೇರಿದಂತೆ ಇತರ ಸಾಧಕರು ಉಪಸ್ಥಿತರಿದ್ದರು.

೮೨೫ ವರ್ಷಗಳ ವಾರಕರಿ ಪರಂಪರೆಯ ಅನುಭೂತಿ ನೀಡುವ ಸೋಲಾಪುರದ ಶ್ರೀ ವಿಠ್ಠಲ ಮಂದಿರ!

ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜರ ಅಜ್ಜ ಶ್ರೀ. ಗೋವಿಂದ ಪಂತ ಮತ್ತು ಅವರ ಧರ್ಮಪತ್ನಿ ಭಾಗ್ಯವಂತಿ ನೀರಾಬಾಯಿ ಅವರು ಮರಾಠವಾಡದ ಆಪೇಗಾಂವ ನಿವಾಸಿಗಳಾಗಿದ್ದು, ನಿಷ್ಠಾವಂತ ವಾರಕರಿಗಳಾಗಿದ್ದರು. ಪಂಢರಪುರದ ಶ್ರೀ ವಿಠ್ಠಲನ ದರ್ಶನಕ್ಕಾಗಿ ಅವರು ಕಾಲ್ನಡಿಗೆಯಲ್ಲಿ ವಾರಿಯನ್ನು ಮಾಡುತ್ತಿದ್ದರು. ಮಹಾನ್ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಮಹಾರಾಜರ ಮಾರ್ಗದರ್ಶನದಲ್ಲಿ ಸೋಲಾಪುರದಲ್ಲಿ ಕೆರೆ ನಿರ್ಮಾಣಕ್ಕಾಗಿ ಶ್ರಮದಾನ ನಡೆಯುತ್ತಿತ್ತು.

ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಪುರೋಹಿತರಿಂದ ಶ್ರೀ ವಿಠ್ಠಲರ ಪ್ರಸಾದವನ್ನು ಸ್ವೀಕರಿಸುತ್ತಿರುವುದು.

ಶ್ರೀ ಸಿದ್ಧೇಶ್ವರ ಮಹಾರಾಜರು ಆ ವೃದ್ಧ ದಂಪತಿಗಳ ಕ್ಷೇಮಸಮಾಚಾರ ವಿಚಾರಿಸಿದರು, “ನಾವು ಶ್ರೀ ವಿಠ್ಠಲನ ದರ್ಶನಕ್ಕಾಗಿ ಪಂಢರಿಗೆ ಹೋಗುತ್ತಿದ್ದೇವೆ” ಎಂದು ಗೋವಿಂದ ಪಂತ ತಿಳಿಸಿದರು. ಅವರ ಭಕ್ತಿಯನ್ನು ಮೆಚ್ಚಿದ ಶ್ರೀ ಸಿದ್ಧೇಶ್ವರ ಮಹಾರಾಜರು ಅವರಿಗೆ ಅಲ್ಲಿಯೇ ವಿಠ್ಠಲನ ದರ್ಶನ ಮಾಡಿಸಿದರು. ಈ ಸ್ಥಾನದಲ್ಲಿ ಇಂದಿಗೂ ಶ್ರೀ ವಿಠ್ಠಲನ ಸುಂದರ ಮೂರ್ತಿ ಭಕ್ತರ ದರ್ಶನಕ್ಕಾಗಿ ಲಭ್ಯವಿದೆ. ಈ ಶ್ರೀ ವಿಠ್ಠಲನ ದೇವಸ್ಥಾನವು ಶ್ರೀ ಸಿದ್ಧೇಶ್ವರ ಮಹಾರಾಜರ ದೇವಸ್ಥಾನದ ಆವರಣದಲ್ಲಿಯೇ ಇದೆ. ಶ್ರೀ ವಿಠ್ಠಲ ದೇವಸ್ಥಾನದಲ್ಲಿಯೂ ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ದರ್ಶನ ಪಡೆದರು ಮತ್ತು `ಶ್ರೀ ರಾಜಮಾತಂಗಿ ಯಾಗ ನಿರ್ವಿಘ್ನವಾಗಿ ನೆರವೇರಬೇಕು ಮತ್ತು ಆದಷ್ಟು ಬೇಗ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕೆಂದು ಪ್ರಾರ್ಥಿಸಿದರು.

 

ಶ್ರೀ ಸಿದ್ಧೇಶ್ವರ ಮಹಾರಾಜರ ಕಾರ್ಯ ಪರಿಚಯ!

‘ಕಾಯಕವೇ ಕೈಲಾಸ’ ಅಂದರೆ ‘ಕರ್ಮದಿಂದಲೇ ಕೈಲಾಸ ಪ್ರಾಪ್ತಿಯಾಗುತ್ತದೆ’ ಎಂಬ ಮಹಾನ್ ಬೋಧನೆಯನ್ನು ನೀಡಿದ ಅವತಾರ ಪುರುಷರೇ ಶ್ರೀ ಸಿದ್ಧೇಶ್ವರ ಮಹಾರಾಜರು! ೧೨ ನೇ ಶತಮಾನದಲ್ಲಿ ಅವರು ಸೋಲಾಪುರ ನಗರವನ್ನು ನಿರ್ಮಿಸಿದರು. ಸಾಮಾಜಿಕ ಸುಧಾರಣೆಗಳನ್ನು ಮಾಡುವಾಗ ಅವರು ಶ್ರಮಕ್ಕೆ ಗೌರವವನ್ನು ತಂದುಕೊಟ್ಟರು. ಅವರು ಸಾಮೂಹಿಕ ವಿವಾಹ ಮಹೋತ್ಸವಗಳನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು. ಬರಗಾಲ ಅಥವಾ ನೀರಿನ ಅಭಾವವನ್ನು ನೀಗಿಸಲು, ಸಾಮೂಹಿಕ ಶ್ರಮದಾನದ ಮೂಲಕ ಕೆರೆಯನ್ನು ನಿರ್ಮಿಸಿದರು. ವಿವಿಧ ನದಿಗಳಿಂದ ಪವಿತ್ರ ಜಲವನ್ನು ತಂದು ಆ ಕೆರೆಗೆ ಸಮರ್ಪಿಸಿದರು. ಸೊನ್ನಲಗಿಯ ಸುತ್ತಮುತ್ತಲಿನ ಐದು ಹಳ್ಳಿಗಳಲ್ಲಿ ೬೮ ಶಿವಲಿಂಗಗಳೊಂದಿಗೆ ಅಷ್ಟವಿನಾಯಕ ಮತ್ತು ಅಷ್ಟಭೈರವರ ಪ್ರತಿಷ್ಠಾಪನೆಯನ್ನು ಮಾಡಿದರು. ಅವರು ಜಗಜ್ಯೋತಿ ಶ್ರೀ ಬಸವೇಶ್ವರರ ಪಾವನ ಬೋಧನೆ ಮತ್ತು ಉಪದೇಶಗಳನ್ನು ಜನಸಾಮಾನ್ಯರಲ್ಲಿ ಪ್ರಸಾರ ಮಾಡಿದರು.

ಶ್ರೀ ಸಿದ್ಧೇಶ್ವರ ಮಹಾರಾಜರ ಚರಣಗಳಲ್ಲಿ ಅರ್ಪಿಸಿದ ಶ್ರೀ ರಾಜಮಾತಂಗಿ ಮಹಾಯಜ್ಞದ ಆಮಂತ್ರಣ ಪತ್ರ

ಶ್ರೀ ಸಿದ್ಧರಾಮೇಶ್ವರರು ತಮ್ಮ ಸ್ನೇಹಿತರೊಂದಿಗೆ ದನಗಳನ್ನು ಕಾಯಲು ಕಾಡಿಗೆ ತೆರಳಿದ್ದಾಗ, ಶ್ರೀಶೈಲದ ಮಲ್ಲಿಕಾರ್ಜುನ ಪ್ರಭುಗಳು ಒಬ್ಬ ಜಂಗಮರ (ಲಿಂಗಾಯತ ಸಮಾಜದ ಸ್ವಾಮಿಗಳು) ರೂಪದಲ್ಲಿ ಸಿದ್ಧರಾಮೇಶ್ವರರ ಮುಂದೆ ಪ್ರಕಟರಾದರು. ‘ಈ ಜಂಗಮರು ಸಾಕ್ಷಾತ್ ಪರಮೇಶ್ವರನೇ ಆಗಿದ್ದಾರೆ’ ಎಂಬುದನ್ನು ಸಿದ್ಧರಾಮೇಶ್ವರರು ಕ್ಷಣಮಾತ್ರದಲ್ಲಿ ಗುರುತಿಸಿದಾಗ, ಮಲ್ಲಿಕಾರ್ಜುನ ಸ್ವಾಮಿಯು ಅವರಿಗೆ ಪ್ರತ್ಯಕ್ಷ ದರ್ಶನವನ್ನು ನೀಡಿದ್ದರು.