ಯಜ್ಞದ ಪ್ರಚಾರಕ್ಕಾಗಿ ಈವರೆಗೆ ೨೪೩ ಕೌಟುಂಬಿಕ ಸಭೆಗಳು ಹಾಗೂ ೨೫ಕ್ಕೂ ಹೆಚ್ಚು ಸಾಮೂಹಿಕ ಸಭೆಗಳ ಆಯೋಜನೆ!

ಮುಂಬಯಿ, ಮೇ ೧೩ (ವಾರ್ತೆ) – ಆದಿಶಕ್ತಿದೇವಿ ಸತಿಯ ೧೦ ರೂಪಗಳಲ್ಲಿ, ಅಂದರೆ ದಶಮಹಾವಿದ್ಯೆಗಳಲ್ಲಿ ಶ್ರೀ ರಾಜಮಾತಂಗಿ ದೇವಿಯು ಒಂದು. ಶ್ರೀರಾಜಮಾತಂಗಿ ದೇವಿಯು ಆದಿಶಕ್ತಿಯ ಪ್ರಧಾನಮಂತ್ರಿ(ಸಲಹೆಗಾರ)ಯಾಗಿದ್ದಾಳೆ ಹಾಗೂ ಶಕ್ತಿ ಮತ್ತು ವಾಣಿಯ ಅಧಿದೇವತೆಯಾಗಿದ್ದಾಳೆ. ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಮತ್ತು ಧರ್ಮಕಾರ್ಯಕ್ಕಾಗಿ ದೇವಿಯ ಆಶೀರ್ವಾದವು ಅತ್ಯಂತ ಮಹತ್ವದ್ದಾಗಿದೆ. ಆದುದರಿಂದ ಎಲ್ಲರಿಗೂ ದೇವಿಯ ಆಶೀರ್ವಾದವು ಲಭಿಸಲಿ ಎಂಬ ಉದ್ದೇಶದಿಂದ ಮುಂಬಯಿ, ಮುಂಬಯಿ ಉಪನಗರ, ಠಾಣೆ ಮತ್ತು ರಾಯಗಡ ಜಿಲ್ಲೆಗಳ ನಗರ ಪ್ರದೇಶಗಳ ಸೊಸೈಟಿಗಳಲ್ಲಿ ಹಾಗೂ ಗ್ರಾಮೀಣ ಭಾಗದ ಹಳ್ಳಿ-ಹಳ್ಳಿಗಳಲ್ಲಿ ಸಭೆಗಳನ್ನು ನಡೆಸಿ ಮಹಾಯಜ್ಞದ ಪ್ರಚಾರ ಮಾಡಲಾಗುತ್ತಿದೆ. ಯಜ್ಞದ ಪ್ರಚಾರಕ್ಕಾಗಿ ಈವರೆಗೆ ೨೪೩ ಕೌಟುಂಬಿಕ ಸಭೆಗಳು ಮತ್ತು ೨೫ಕ್ಕೂ ಹೆಚ್ಚು ಸಾಮೂಹಿಕ ಸಭೆಗಳನ್ನು ನಡೆಸಲಾಗಿದ್ದು, ಇದರ ಮೂಲಕ ಸಾವಿರಾರು ಜಿಜ್ಞಾಸುಗಳಿಗೆ ಮಹಾಯಜ್ಞದ ಮಹತ್ವವನ್ನು ತಲುಪಿಸಲಾಗಿದೆ.

ರಾಯಗಡ, ಠಾಣೆ ಮತ್ತು ಪಾಲ್ಘರ್ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಭೆಗಳನ್ನು ನಡೆಸಲಾಗುತ್ತಿದೆ. ದೇವಸ್ಥಾನಗಳ ವಿಶ್ವಸ್ಥರು, ಹಿಂದೂ ಜನಜಾಗೃತಿ ಸಮಿತಿಯ ಯುವ ತರಬೇತಿ ವರ್ಗಕ್ಕೆ ಬರುವ ಯುವಕರು ಹಾಗೂ ವಸತಿ ಸಂಕೀರ್ಣಗಳ ನಾಗರಿಕರ ಸಭೆಗಳನ್ನೂ ಸಹ ನಡೆಸಲಾಗುತ್ತಿದೆ.

೧೦೦ಕ್ಕೂ ಹೆಚ್ಚು ಪೂರ್ಣಕಾಲಿಕ ಕಾರ್ಯಕರ್ತರು ಮತ್ತು ನೂರಾರು ಸಾಧಕ-ಧರ್ಮಪ್ರೇಮಿಗಳಿಂದ ಮಹಾಯಜ್ಞದ ಪ್ರಚಾರ ಕಾರ್ಯ!
ಪ್ರಸ್ತುತ ಸನಾತನ ಸಂಸ್ಥೆಯ ೧೦೦ಕ್ಕೂ ಹೆಚ್ಚು ಪೂರ್ಣಕಾಲಿಕ ಸಾಧಕರು ಮತ್ತು ಧರ್ಮಪ್ರೇಮಿಗಳು ಮಹಾಯಜ್ಞದ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಇವರೊಂದಿಗೆ ಉದ್ಯೋಗ-ವ್ಯವಹಾರ ಮಾಡುವವರು ಮತ್ತು ಗೃಹಿಣಿಯರು ಸೇರಿದಂತೆ ನೂರಾರು ಜನರು ಕಳೆದ ಕೆಲವು ದಿನಗಳಿಂದ ಈ ಮಹಾಯಜ್ಞದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಗಣ್ಯ ವ್ಯಕ್ತಿಗಳಿಂದ ನೊಂದಣಿ!![]() ವೈದ್ಯರು, ನ್ಯಾಯವಾದಿಗಳು, ಪ್ರಾಧ್ಯಾಪಕರು, ಉದ್ಯಮಿಗಳು, ದೇವಸ್ಥಾನದ ಟ್ರಸ್ಟಿಗಳು, ರಾಜಕೀಯ ಕ್ಷೇತ್ರದಲ್ಲಿನ ವ್ಯಕ್ತಿಗಳು, ಪತ್ರಕರ್ತರು ಸೇರಿದಂತೆ ಅನೇಕ ಗಣ್ಯರು ಶ್ರೀ ರಾಜಮಾತಂಗಿ ಮಹಾಯಜ್ಞದಲ್ಲಿ ಪಾಲ್ಗೊಳ್ಳಲು ನೊಂದಣಿ ಮಾಡಿಕೊಂಡಿದ್ದಾರೆ. ಯಜ್ಞದ ಆಧ್ಯಾತ್ಮಿಕ ಲಾಭವನ್ನು ಪಡೆಯಲು ಅನೇಕರು ಕುಟುಂಬ ಸಮೇತ ಆಗಮಿಸಲಿದ್ದಾರೆ. |

ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ