ಮುಂಬಾಪುರಿಯಲ್ಲಿ ( ಮುಂಬಯಿ) ವೇದಮಂತ್ರಗಳ ಜಯಘೋಷ!

ಮುಂಬಯಿ, ಮೇ 16 (ವಾರ್ತೆ) – ಪ್ರಸ್ತುತ ಯುದ್ಧಕಾಲದಲ್ಲಿ ತಪೋಭೂಮಿ ಭಾರತಕ್ಕೆ ರಕ್ಷಾ ಕವಚ ಸಿಗಲಿ ಮತ್ತು ದೇಶದ ಸರ್ವಾಂಗೀಣ ಏಳಿಗೆಯಾಗಲಿ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯ ವತಿಯಿಂದ ಶ್ರೀ ರಾಜಮಾತಂಗಿ ಮಹಾಯಜ್ಞವನ್ನು ಆಯೋಜಿಸಲಾಗಿದೆ. ಇಂದು ಪ್ರಭಾದೇವಿಯ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಮಧ್ಯಾಹ್ನ 3.30 ರಿಂದ ಸಂಜೆ 7.30 ರವರೆಗೆ ಈ ಚೈತನ್ಯಮಯ ಮಹಾಯಜ್ಞ ನಡೆಯಲಿದೆ.
ಮನೆಯಲ್ಲಿ ಕುಳಿತೇ ಶ್ರೀ ರಾಜಮಾತಂಗಿ ಮಹಾಯಜ್ಞದ ಚೈತನ್ಯ ಅನುಭವಿಸಿ !

ಶ್ರೀ ರಾಜಮಾತಂಗಿ ಮಹಾಯಜ್ಞದ ನೇರ ಪ್ರಸಾರ ನೋಡಲು ಈ ಕೆಳಗಿನ ಲೀಂಕ್ ಅನ್ನು ಕ್ಲಿಕ್ ಮಾಡಿರಿ !
♦ SanatanRashtraShankhnad.in/events/shri-rajamatangi-mahayajna
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ್ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಮಹಾಯಜ್ಞದ ಲಾಭವನ್ನು ಸಹಸ್ರಾರು ದೇವಿ ಭಕ್ತರು ಪಡೆಯಲಿದ್ದಾರೆ.
🕉️ Mumbai to Witness the Divine Power of the ‘Shri Rajmatangi Mahayagna’ on May 17th for National Progress, Protection & Prosperity – @1chetanrajhans National Spokesperson, @SanatanSanstha
🌟 Biggest Attraction of the Mahayagna:
Devotees will get the rare opportunity to have… pic.twitter.com/TLWcaZwtvl— Sanatan Prabhat (@SanatanPrabhat) May 16, 2026
ರಾಜ್ಯದ ರಾಜ್ಯಪಾಲರಾದ ಜಿಷ್ಣು ದೇವ್ ವರ್ಮಾ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಸೇರಿದಂತೆ ಮುಂಬಯಿ ಮತ್ತು ಸುತ್ತ-ಮುತ್ತಲಿನ ಅನೇಕ ನಾಯಕರು ಹಾಗೂ ಗಣ್ಯರಿಗೆ ಈ ಮಹಾಯಜ್ಞದ ಆಮಂತ್ರಣ ನೀಡಲಾಗಿದೆ.
ಈ ಮಹಾಯಜ್ಞದ ಪೌರೋಹಿತ್ಯವನ್ನು ತಮಿಳುನಾಡಿನ ಈರೋಡ್‌ನ ಶಿವಾಗಮ್ ವಿದ್ಯಾನಿಧಿ ಆಗಮಾಚಾರ್ಯ ಶ್ರೀ. ಅರುಣ್‌ಕುಮಾರ್ ಗುರುಮೂರ್ತಿ ಮತ್ತು ಶಿವಾಚಾರ್ಯ ಶ್ರೀ. ಗುರುಮೂರ್ತಿ ಅವರು ವಹಿಸಲಿದ್ದಾರೆ.
ಮಹಾಯಜ್ಞದ ಪ್ರಮುಖ ಆಕರ್ಷಣೆ!
ಮಹಾಯಜ್ಞದ ಅತ್ಯಂತ ದೊಡ್ಡ ಆಕರ್ಷಣೆಯೆಂದರೆ, 1000 ವರ್ಷಗಳ ಹಿಂದೆ ಆಕ್ರಮಣಕಾರಿ ಮೊಹಮ್ಮದ್ ಗಜನಿಯಿಂದ ಧ್ವಂಸಗೊಂಡಿದ್ದ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳ ದರ್ಶನ! ಇತಿಹಾಸಕ್ಕೆ ಸಾಕ್ಷಿಯಾಗಿರುವ ಈ ಪವಿತ್ರ ಅವಶೇಷಗಳನ್ನು ಯಜ್ಞ ನಡೆಯುವ ಸ್ಥಳದಲ್ಲಿ ದರ್ಶನಕ್ಕಾಗಿ ಇಡಲಾಗುವುದು. ಭಕ್ತರು ಇದರ ಲಾಭವನ್ನು ಪಡೆಯಬಹುದು. ಇದರೊಂದಿಗೆ ಸನಾತನ ಸಂಸ್ಥೆಯ ಗ್ರಂಥಗಳು, ಪೂಜಾ ಸಾಮಗ್ರಿಗಳು ಮತ್ತು ನಿತ್ಯೋಪಯೋಗಿ ಉತ್ಪನ್ನಗಳ ಪ್ರದರ್ಶನ ಕೂಡ ಇರಲಿದೆ. |
ಮಹಾಯಜ್ಞ ಕಾರ್ಯಕ್ರಮ ವಿವರ!
|

ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ