
ಮುಂಬಯಿ, 11 ಮೇ (ವಾರ್ತೆ.) – ಸನಾತನ ಸಂಸ್ಥೆಯ ವತಿಯಿಂದ 17 ಮೇ ರಂದು ಪ್ರಭಾದೇವಿಯ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಮಧ್ಯಾಹ್ನ 3.30 ರಿಂದ 7.30 ರವರೆಗೆ ಶ್ರೀ ರಾಜಮಾತಂಗಿ ಮಹಾಯಜ್ಞವನ್ನು ಆಯೋಜಿಸಲಾಗಿದೆ. ಹೆಚ್ಚು ಹೆಚ್ಚು ಭಕ್ತರು ಈ ಯಜ್ಞದ ಲಾಭ ಪಡೆಯಲು, ಮುಂಬಯಿ ಮತ್ತು ಉಪನಗರಗಳಲ್ಲಿ ಫಲಕ ಮತ್ತು ಡಿಜಿಟಲ್ ಸ್ಕ್ರೀನ್‌ಗಳ ಮೂಲಕ ಅತ್ಯಂತ ಪರಿಣಾಮಕಾರಿ ಪ್ರಚಾರ ನಡೆಯುತ್ತಿದೆ.
🕉️ Extensive promotion for the Shri Rajmatangi Mahayajnya organised by @SanatanSanstha is underway across Mumbai through hoardings and digital screens ahead of the event on May 17 at Prabhadevi.
The divine and Sattvik form of Shri Rajmatangidevi featured in the displays is… https://t.co/3fpiEFXlHZ pic.twitter.com/c0hm3tb6U7
— Sanatan Prabhat (@SanatanPrabhat) May 11, 2026

ಯಜ್ಞದ ಜಾಹೀರಾತುಗಳಲ್ಲಿನ ‘ಶ್ರೀ ರಾಜಮಾತಂಗಿದೇವಿಯ ಸಾತ್ವಿಕ ಮತ್ತು ಚೈತನ್ಯದಾಯಕ ರೂಪವು ಎಲ್ಲರ ಗಮನ ಸೆಳೆಯುತ್ತಿದೆ. ಫಲಕ, ಡಿಜಿಟಲ್ ಸ್ಕ್ರೀನ್ ಮೂಲಕ ಇದುವರೆಗೆ ಸಾವಿರಾರು ಭಕ್ತರಿಗೆ ಯಜ್ಞದ ಮಾಹಿತಿ ತಲುಪಿದೆ.

ಪಶ್ಚಿಮ ಮತ್ತು ಮಧ್ಯ ರೈಲ್ವೆಯ ಬೋಗಿಗಳಲ್ಲಿನ ‘ಎಲ್.ಇ.ಡಿ.’ ಟಿವಿಗಳಲ್ಲಿ ಯಜ್ಞದ ಜಾಹೀರಾತುಗಳನ್ನು ಪ್ರದರ್ಶಿಸಲಾಗಿದೆ. ಇದರಿಂದಾಗಿ ನಿಯಮಿತವಾಗಿ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಜ್ಞದ ಮಾಹಿತಿ ತಲುಪುತ್ತಿದೆ. ಮುಂಬಯಿನ ವಿವಿಧ ಬಸ್ ನಿಲ್ದಾಣಗಳು ಸೇರಿದಂತೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಭಾಂಡುಪ್ ಮತ್ತು ಮಾಟುಂಗಾ ಮುಂತಾದ ರೈಲು ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಫಲಕಗಳ ಮೂಲಕ ಮತ್ತು ರೈಲು ನಿಲ್ದಾಣಗಳ ಹೊರಗೆ ‘ಎಲ್.ಇ.ಡಿ. ಸ್ಕ್ರೀನ್’ ಮೂಲಕವೂ ಯಜ್ಞದ ಜಾಹೀರಾತುಗಳು ನಾಗರಿಕರ ಗಮನ ಸೆಳೆಯುತ್ತಿವೆ. ಪವೈ ಬಳಿಯ ಹೆದ್ದಾರಿಯಲ್ಲಿ ಯಜ್ಞದ ಜಾಹೀರಾತಿನ 60 ಅಡಿ ಉದ್ದದ ಹೋರ್ಡಿಂಗ್ ಅಳವಡಿಸಲಾಗಿದೆ. ಇದು ತುಂಬಾ ಗಮನ ಸೆಳೆಯುವಂತೆ ಆಗಿದೆ.

ಯಜ್ಞ ಸಮಾರಂಭದಲ್ಲಿ ಪಾಲ್ಗೊಳ್ಳಲು ಫಲಕಗಳ ಮೇಲೆ ‘ಕ್ಯೂ.ಆರ್.’ ಕೋಡ್ ಪ್ರದರ್ಶಿಸಲಾಗಿದೆ. ಈ ಮೂಲಕ ಅನೇಕ ರಾಷ್ಟ್ರ ಮತ್ತು ಧರ್ಮಪ್ರೇಮಿ ನಾಗರಿಕರು ಯಜ್ಞ ಸಮಾರಂಭಕ್ಕೆ ಬರಲು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಫಲಕಗಳ ಮೇಲೆ ನೀಡಲಾಗಿರುವ ಸಂಪರ್ಕ ಸಂಖ್ಯೆಗೆ ಕರೆ ಮಾಡುವ ಮೂಲಕ ಅನೇಕ ಆಸಕ್ತರು ಯಜ್ಞ ಸಮಾರಂಭದ ಮಾಹಿತಿಯನ್ನು ತಿಳಿದುಕೊಂಡು ಯಜ್ಞಕ್ಕೆ ಬರಲು ತಮ್ಮ ಪಾಲ್ಗೊಳ್ಳುವಿಕೆಯನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ