ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಭವಾನಿ ದೇವಿಯ ಭಾವಪೂರ್ಣ ದರ್ಶನ ಪಡೆದರು ಮತ್ತು ದೇವಿಗೆ ಅಭಿಷೇಕ ಮಾಡಿದರು !

ತುಳಜಾಪುರ – ಪ್ರಸ್ತುತ ಯುದ್ಧದ ಕಾಲದಲ್ಲಿ ತಪೋಭೂಮಿ ಭಾರತಕ್ಕೆ ಸಂರಕ್ಷಕ ಕವಚ ದೊರೆಯಬೇಕು ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ 17 ಮೇ 2026 ರಂದು ಮುಂಬಯಿನ ಪ್ರಭಾದೇವಿ ಬಳಿಯಿರುವ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ‘ಶ್ರೀ ರಾಜಮಾತಂಗಿ ಮಹಾಯಜ್ಞ’ದ ಭವ್ಯ ಆಯೋಜನೆ ಮಾಡಲಾಗಿದೆ. ಈ ಯಜ್ಞದ ಆಮಂತ್ರಣವನ್ನು ನೀಡಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿಯಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು 12 ಮೇ ರಂದು ತುಳಜಾಪುರದ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಇಲ್ಲಿನ ಶ್ರೀ ಭವಾನಿ ದೇವಿಯ ಭಾವಪೂರ್ಣ ದರ್ಶನ ಪಡೆದರು ಮತ್ತು ದೇವಿಗೆ ಅಭಿಷೇಕ ಮಾಡಿ ಉಡಿ ತುಂಬಿದರು. ತದನಂತರ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ದೇವಿಯ ಚರಣಗಳಿಗೆ ಯಜ್ಞದ ಆಮಂತ್ರಣ ಪತ್ರಿಕೆಯನ್ನು ಅರ್ಪಿಸಿದರು. ಈ ಪ್ರಸಂಗದಲ್ಲಿ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉತ್ತಮ ಆರೋಗ್ಯ ಲಭಿಸಲಿ, ಆಪತ್ಕಾಲದಿಂದ ಸಾಧಕರ ರಕ್ಷಣೆಯಾಗಲಿ, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿ’ ಎಂಬುದರೊಂದಿಗೆ, ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲಿ, ದೇಶದ ರಕ್ಷಣೆಯಾಗಲಿ ಮತ್ತು ಜನರ ಆರೋಗ್ಯವು ಉತ್ತಮವಾಗಿರಲಿ ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ದೇವಿಯ ಚರಣಗಳಲ್ಲಿ ಮನಸಾರೆ ಪ್ರಾರ್ಥನೆ ಮಾಡಿದರು.
ತುಳಜಾಪುರದ ಭವಾನಿ ಶಂಕರ ದೇವಸ್ಥಾನದ ಅರ್ಚಕರಿಗೆ ಆದ ದೇವಿಯ ಸ್ವಪ್ನ ದೃಷ್ಟಾಂತ![]() ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಭವಾನಿ ದೇವಿಯ ದರ್ಶನ ಪಡೆದ ನಂತರ ದೇವಸ್ಥಾನದ ಎದುರೇ ಇರುವ ಭವಾನಿ ಶಂಕರ ದೇವಸ್ಥಾನದ ದರ್ಶನ ಪಡೆದರು. ಅವರನ್ನು ನೋಡಿದ ಕೂಡಲೇ ಭವಾನಿ ಶಂಕರ ದೇವಸ್ಥಾನದಲ್ಲಿ ಪೌರೋಹಿತ್ಯ ಮಾಡುವ ಅರ್ಚಕರಾದ ಶ್ರೀ. ಉಮೇಶ ಇನಾಮದಾರ ಅವರು ತಮಗೆ 12 ಮೇ ರಂದು ಬೆಳಗಿನ ಜಾವ ದೇವಿಯಿಂದಾದ ಸ್ವಪ್ನ ದೃಷ್ಟಾಂತವನ್ನು ಹೇಳಿದರು. ಶ್ರೀ. ಉಮೇಶ ಇನಾಮದಾರ ಅವರು, ತಾಯೀ, ನೀವು ಬರುತ್ತೀರಿ ಎಂಬುದು ನಮಗೆ ತಿಳಿದಿರಲಿಲ್ಲ; ಆದರೆ ಇಂದು ಬೆಳಗಿನ ಜಾವ 3 ಗಂಟೆಗೆ ಸಾಕ್ಷಾತ್ ದೇವಿಯು ನನ್ನ ಕನಸಿನಲ್ಲಿ ಬಂದಳು. ದೇವಿಯು ಕಣ್ಣುಗಳನ್ನು ತೆರೆದಳು ಮತ್ತು ಅವಳ ಪಕ್ಕದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಇಂದು ಉಟ್ಟಿರುವ ಸೀರೆಯಲ್ಲಿ (ಪಿಸ್ತಾ ಬಣ್ಣದ ಅಂಚಿನ ಸೀರೆ) ಕಾಣಿಸಿದರು. ಅವರ ಕೈಗಳಿಂದ ದೇವಿಯ ಚರಣಗಳ ಮೇಲೆ ಚಿನ್ನದ ನಾಣ್ಯಗಳ ಮಳೆ ಸುರಿಯುತ್ತಿತ್ತು. ಆ ಸ್ತ್ರೀ ಯಾರು ಎಂಬುದು ನನಗೆ ಆಗ ತಿಳಿಯಲಿಲ್ಲ; ಆದರೆ ಯಾವಾಗ ನೀವು (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ದೇವಸ್ಥಾನದಲ್ಲಿ ದರ್ಶನಕ್ಕಾಗಿ ಬಂದಿರೋ, ಆಗ ಬೆಳಗಿನ ಜಾವದ ಸ್ವಪ್ನ ದೃಷ್ಟಾಂತದ ರಹಸ್ಯ ತಿಳಿಯಿತು, ಅದು ಇವರೇ ಆಗಿದ್ದರು ಎಂಬುದು ತಿಳಿಯಿತು,” ಎಂದು ಹೇಳಿದರು. |

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!