
ಮುಂಬಯಿ, 14 ಮೇ (ವಾರ್ತೆ) – ಭಾರತದ ರಕ್ಷಣೆಗಾಗಿ ಸನಾತನ ಸಂಸ್ಥೆಯು ಆಯೋಜಿಸಿರುವ ಶ್ರೀ ರಾಜಮಾತಂಗಿ ಮಹಾಯಜ್ಞದ ಪ್ರಚಾರವು ಕಳೆದ 1 ತಿಂಗಳಿನಿಂದ ನಡೆಯುತ್ತಿದೆ. ಯಜ್ಞಕ್ಕೆ ಕೇವಲ 2 ದಿನಗಳು ಬಾಕಿ ಉಳಿದಿವೆ. ಹಾಗಾಗಿ ಪ್ರಚಾರದಂತೆಯೇ ಮಹಾಯಜ್ಞದ ಭವ್ಯ ಮಂಟಪ ನಿರ್ಮಾಣ ಕಾಮಗಾರಿಯೂ ಸಮರೋಪಾದಿಯಲ್ಲಿ ನಡೆಯುತ್ತಿದೆ. 164 ಅಡಿ ಅಗಲ, 378 ಅಡಿ ಉದ್ದ ಮತ್ತು 50 ಅಡಿ ಎತ್ತರ ಹಾಗೂ 5 ಸಾವಿರ ಭಕ್ತರು ಕುಳಿತುಕೊಳ್ಳಬಹುದಾದ ಭವ್ಯ ಮಂಟಪವನ್ನು ನಿರ್ಮಿಸಲಾಗುತ್ತಿದೆ. ಯಜ್ಞಕುಂಡ, ವ್ಯಾಸಪೀಠ, ಯಜ್ಞಮಂಟಪ, ವಸ್ತುಪ್ರದರ್ಶನ ಮಂಟಪದ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮೇ 15ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಯಜ್ಞಕುಂಡವನ್ನು ಶಾಸ್ತ್ರೋಕ್ತವಾಗಿ ನಿರ್ಮಿಸಲಾಗಿದೆ. ಭಕ್ತರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗುವುದು. ಬಿಸಿಲಿನ ಝಳ ತಟ್ಟದಿರಲು ಹವಾನಿಯಂತ್ರಣ ಯಂತ್ರ ಹಾಗೂ ಕೂಲರ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಸ್ಥಳದಲ್ಲೇ ಕುಡಿಯುವ ನೀರು ಒದಗಿಸಲಾಗುವುದು.
ಸೋಮನಾಥ ದಿವ್ಯ ಅಂಶರೂಪಿ ಶಿವಲಿಂಗ ದರ್ಶನ ಹಾಗೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಕೊಠಡಿ ವಿಶೇಷ!
ಚಂದ್ರನು ಸ್ಥಾಪಿಸಿದ ಸೋಮನಾಥ ದೇವಾಲಯದ ಶಿವಲಿಂಗವನ್ನು ಮತಾಂಧ ಘಜನಿಯು 1026 ನೇ ಇಸವಿಯಲ್ಲಿ ನಾಶಪಡಿಸಿದನು. ಅಂದಿನಿಂದ ಈ ಶಿವಲಿಂಗದ ಅಂಶರೂಪಿ ದಿವ್ಯ ಭಾಗವನ್ನು ಸುರಕ್ಷಿತವಾಗಿಡಲಾಗಿದೆ. ಯಜ್ಞದ ಸ್ಥಳದಲ್ಲಿ ಈ ದಿವ್ಯ ಅಂಶರೂಪಿ ಶಿವಲಿಂಗವು ದರ್ಶನಕ್ಕೆ ಲಭ್ಯವಿರಲಿದೆ. ಈ ದಿವ್ಯ ಶಿವಲಿಂಗದ ದರ್ಶನವು ಭಕ್ತರಿಗೆ ದೊಡ್ಡ ಸುವರ್ಣಾವಕಾಶವಾಗಲಿದೆ. ಇದರೊಂದಿಗೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ್ ಆಠವಲೆ ಅವರ ವಿಶ್ವಕಲ್ಯಾಣದ ಅದ್ವಿತೀಯ ಮತ್ತು ವಿವಿಧ ಕಾರ್ಯಗಳ ಬಗ್ಗೆ ಮಾಹಿತಿ ನೀಡುವ ವಿಶಿಷ್ಟ ಪ್ರದರ್ಶನವೂ ಇರಲಿದೆ.
ಯಜ್ಞಸ್ಥಳದಲ್ಲಿ ವಿವಿಧ ಪ್ರದರ್ಶನಗಳಿರಲಿವೆ!
ಸನಾತನ ಸಂಸ್ಥೆಯ ಅಧ್ಯಾತ್ಮಶಾಸ್ತ್ರ, ಧರ್ಮ, ರಾಷ್ಟ್ರ, ಸಂಸ್ಕಾರ, ಆಯುರ್ವೇದ, ವ್ಯಕ್ತಿತ್ವ ವಿಕಸನ ಮುಂತಾದ ಜನಪ್ರಿಯ ಗ್ರಂಥಗಳ ಪ್ರದರ್ಶನವನ್ನೂ ಏರ್ಪಡಿಸಲಾಗುವುದು. ಔಷಧೀಯ ಸಸ್ಯಗಳು ಮತ್ತು ತುರ್ತು ಕ್ರಮಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಕೊಠಡಿಯೂ ಇರಲಿದೆ. ಸನಾತನ ಸಂಸ್ಥೆಯ 26 ವರ್ಷಗಳ ಪಯಣ, ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ, ರಾಷ್ಟ್ರ-ಧರ್ಮ ಕಾರ್ಯದಲ್ಲಿ ಸನಾತನ ಪ್ರಭಾತ ಪತ್ರಿಕೆಯ ಪ್ರಭಾವ ಇತ್ಯಾದಿಗಳ ಮಾಹಿತಿಯನ್ನು ಫ್ಲೆಕ್ಸ್ ಮೂಲಕ ನೀಡಲಾಗುವುದು. ಈ ಎಲ್ಲಾ ಪ್ರದರ್ಶನಗಳು 130 ಅಡಿ ಉದ್ದ ಮತ್ತು 40 ಅಡಿ ಅಗಲದ ಮಂಟಪದಲ್ಲಿರಲಿವೆ.
ಪೂರ್ವನೋಂದಣಿ ಕಡ್ಡಾಯ!ಮಹಾಯಜ್ಞಕ್ಕೆ ಆಗಮಿಸುವ ಭಕ್ತರಿಗೆ ಪೂರ್ವನೋಂದಣಿ ಕಡ್ಡಾಯವಾಗಿದೆ. ಯಜ್ಞ ಮಂಟಪ ಪ್ರವೇಶಿಸುವಾಗ ಭಕ್ತರಿಗೆ ಗುರುತಿನ ಚೀಟಿ ನೀಡಲಾಗುವುದು. ಮಂಟಪ ಪ್ರವೇಶಿಸಲು 2 ದ್ವಾರಗಳಿರಲಿವೆ. ಗಣ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಇರಲಿದೆ. |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”