ಸಾಧಕರೇ, ಮನಮುಕ್ತವಾಗಿ ಮಾತನಾಡಲು ಪ್ರಯತ್ನಿಸಿ ಸಾಧನೆಯ ಆನಂದ ಪಡೆಯಿರಿ !

ಸೌ. ವರ್ಧಿನಿ ಗೋರಲ್‌

೧. ಮನಮುಕ್ತ ಮಾತುಕತೆಗಾಗಿ ಮಾಡಬೇಕಾದ ಪ್ರಯತ್ನ

‘ಒಬ್ಬ ಸಾಧಕನಿಗೆ ಮನಮುಕ್ತವಾಗಿ ಮಾತನಾಡ ಬೇಕೆಂದಿರುತ್ತದೆ ಆದರೆ ಎಲ್ಲಿಂದ ಆರಂಭಿಸಬೇಕು ?’, ಎಂಬುದು ಅವನ ಗಮನಕ್ಕೆ ಬರುವುದಿಲ್ಲ.

೧ ಅ. ಸಾಧಕರು ತಮ್ಮತಮ್ಮ ಪ್ರಕೃತಿಗನುಸಾರ ಮನಮುಕ್ತ ಮಾತುಕತೆಗಾಗಿ ಮಾಡಬೇಕಾದ ಪ್ರಯತ್ನ

೧ ಅ ೧. ಮಿತಭಾಷಿ : ಸಾಧಕರೊಂದಿಗೆ ಸಹಜವಾಗಿ ಹೋಗುವಾಗ-ಬರುವಾಗ ಮಾತನಾಡಬೇಕು. ‘ಊಟ ಆಯಿತೇ ? ಹೇಗಿದ್ದೀರಿ ? ಏನು ಮಾಡುತ್ತಿರುವಿರಿ ?’, ಹೀಗೆ ಮಾತನಾಡಿ ಸಹಜವಾಗಿ ಕೆಲವೊಮ್ಮೆ ಸ್ಪರ್ಶಿಸಿ, ಕೆಲವೊಮ್ಮೆ ನಕ್ಕು ಅವರನ್ನು ಮಾತನಾಡಿಸಬೇಕು. ಪ್ರತಿದಿನ ಒಬ್ಬ ಸಾಧಕನೊಂದಿಗೆ ಮಾತನಾಡಲು ಆರಂಭಿಸಬೇಕು.

೧ ಅ ೨. ಸ್ವಕೋಶದಲ್ಲಿರುವವನು : ಸ್ವಕೋಶದಲ್ಲಿರುವ ಸಾಧಕರು ಈ ಬಗೆಗಿನ ತನ್ನ ಮನಸ್ಸಿನಲ್ಲಿನ ವಿಚಾರಗಳನ್ನು ಬರೆದಿಡಬೇಕು. ಈ ವಿಚಾರಗಳನ್ನು ಜವಾಬ್ದಾರ ಸಾಧಕರಿಗೆ ತಿಳಿಸಿ ಅವುಗಳಿಗೆ ವಸ್ತುನಿಷ್ಠ ಪರಿಹಾರವನ್ನು ಕಂಡುಹಿಡಿಯಬೇಕು.

೧ ಆ. ಕುಟುಂಬದವರ ಪ್ರಕೃತಿ ಅರ್ಥ ಮಾಡಿ ಅವರೊಂದಿಗೆ ವರ್ತಿಸಬೇಕು ! : ನಮ್ಮ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯ ಪ್ರಕೃತಿ ಭಿನ್ನವಾಗಿರುತ್ತದೆ. ಮನೆಯಲ್ಲಿ ಒಬ್ಬ ವ್ಯಕ್ತಿಯು ಸಿಡಿಮಿಡಿ ಗೊಳ್ಳುತ್ತಿದ್ದರೆ ಮತ್ತು ಇನ್ನೊಬ್ಬ ಶಾಂತ ಪ್ರಕೃತಿಯವನಾಗಿದ್ದರೆ ನಮಗೆ ಈ ಎರಡೂ ಪ್ರಕೃತಿಗಳೊಂದಿಗೆ ಹೊಂದಿಕೊಳ್ಳಲು ಬರುವುದಿಲ್ಲ. ಯಾವಾಗ ಒಬ್ಬ ವ್ಯಕ್ತಿಯು ಸಿಡಿಮಿಡಿಗೊಳ್ಳುವನೋ, ಆಗ ‘ಅವನ ಈ ಸ್ಥಿತಿಗೆ ಕಾರಣವೇನು ?’, ಎಂದು ತಿಳಿದುಕೊಂಡು ಆ ಬಗ್ಗೆ ಅವನೊಂದಿಗೆ ಮಾತನಾಡಬೇಕು. ಅದಕ್ಕೆ ಪರಿಹಾರ ಕಂಡುಹಿಡಿಯಬೇಕು ಅಥವಾ ಆ ವ್ಯಕ್ತಿಯಿಂದ ನಾಮಜಪಾದಿ ಉಪಾಯಗಳನ್ನು ಮಾಡಿಸಿಕೊಳ್ಳಲು ಸಾಧ್ಯವಿದ್ದರೆ ಆ ರೀತಿ ಪ್ರಯತ್ನ ಮಾಡಿಸಿಕೊಳ್ಳಬೇಕು. ಇದರಿಂದ ಆ ವ್ಯಕ್ತಿಯ ಸಿಡಿಮಿಡಿಗೊಳ್ಳುವಿಕೆ ಕಡಿಮೆಯಾಗಲು ಸಹಾಯವಾಗುತ್ತದೆ. ಯಾವುದಾದರೊಬ್ಬ ವ್ಯಕ್ತಿಯು ಶಾಂತವಾಗಿದ್ದರೆ ಮತ್ತು ಅವನು ನಮಗೆ ಕೂಡಲೇ ಸ್ಪಂದಿಸದಿದ್ದರೆ, ಅವನು ಏನಾದರೂ ಪ್ರತ್ಯುತ್ತರ ನೀಡಬೇಕು’, ಎಂದು ನಮ್ಮ ಅಪೇಕ್ಷೆ ಇರುತ್ತದೆ. ಇಂತಹ ಸಮಯದಲ್ಲಿ ನಾವು ಅವನ ಸ್ವಭಾವವನ್ನು ಅರ್ಥಮಾಡಿಕೊಳ್ಳಬೇಕು.

೧ ಇ. ಎಲ್ಲ ವಯೋಮಾನದ ಸಾಧಕರೊಂದಿಗೆ ಮಾತನಾಡಿ ಅವರಿಂದ ಕಲಿಯಲು ಪ್ರಯತ್ನಿಸಿ ! : ಯುವ ಸಾಧಕರಿಗೆ, ವಯಸ್ಸಾ ದವರೊಂದಿಗೆ ಏನು ಮಾತನಾಡಬೇಕು ? ಅವರಿಗೆ ಸರಿಯಾಗಿ ಕೇಳಿಸುವುದಿಲ್ಲ, ಆದುದರಿಂದ ಅವರೊಂದಿಗೆ ದೊಡ್ಡಧ್ವನಿಯಲ್ಲಿ ಮಾತನಾಡಬೇಕಾಗುತ್ತದೆ’, ಎಂದು ಅನಿಸುತ್ತದೆ. ಆದರೆ ನಾವು ಕಲಿಯುವ ಸ್ಥಿತಿಯಲ್ಲಿರಬೇಕು; ಏಕೆಂದರೆ ವಯಸ್ಸಾದ ಸಾಧಕರ ಬಳಿ ನಮಗಿಂತ ಹೆಚ್ಚು ಅನುಭವವಿರುತ್ತದೆ. ಯುವ ಸಾಧಕರು ಅವರೊಂದಿಗೆ ಮಾತನಾಡಿ ಅವರ ಅನುಭವದ ಲಾಭವನ್ನು ಪಡೆದುಕೊಳ್ಳಬಹುದು. ನಮಗಿಂತ ವಯಸ್ಸಿನಲ್ಲಿ ಚಿಕ್ಕವರಾದ ಸಾಧಕರೊಂದಿಗೆ ಚಿಕ್ಕವರಂತೆ ವರ್ತಿಸಿದರೆ ಸಾಧಕರಿಗೆ ಆನಂದ ಸಿಗುತ್ತದೆ. ಇದರಿಂದ ಮಾತನಾಡುವಾಗ ವಯಸ್ಸಿನ ಮಿತಿಯ ಅಡಚಣೆ ದೂರವಾಗುವುದು.

೧ ಈ. ಸಾಧಕರ ಗುಣಗಳನ್ನು ನೋಡಿ ಮತ್ತು ಯಾವುದಾದರೊಬ್ಬ ಸಾಧಕನ ಸ್ವಭಾವದೋಷ ಗಮನಕ್ಕೆ ಬಂದಲ್ಲಿ ಜವಾಬ್ದಾರ ಸಾಧಕ ರೊಂದಿಗೆ ಮಾತನಾಡಿ ಅವನಿಗೆ ಸಾಧನೆಯಲ್ಲಿ ಸಹಾಯ ಮಾಡಿ ! : ಯಾವುದಾದರೊಬ್ಬ ವ್ಯಕ್ತಿಯ ಸ್ವಭಾವ ಇಷ್ಟವಾಗುತ್ತಿದ್ದರೆ ನಮಗೆ ಅವನೊಂದಿಗೆ ಮಾತನಾಡಲು ಬರುತ್ತದೆ. ಇನ್ನೊಬ್ಬ ವ್ಯಕ್ತಿಯ ಸ್ವಭಾವ ಇಷ್ಟವಾಗದಿದ್ದರೆ ನಾವು ಅವನೊಂದಿಗೆ ಮಾತನಾಡುವುದನ್ನು ತಪ್ಪಿಸುತ್ತೇವೆ. ಇಂತಹ ಸಮಯದಲ್ಲಿ ನಾವು ‘ಪ್ರತಿಯೊಂದು ಜೀವವು ದೇವರದ್ದಾಗಿದ್ದು ಪ್ರತಿಯೊಬ್ಬರಲ್ಲಿಯೂ ಗುಣ-ದೋಷಗಳು ಇದ್ದೇ ಇರುತ್ತವೆ’, ಎಂಬ ವಿಚಾರವನ್ನು ಮಾಡಬೇಕು. ನಾವು ಸಕಾರಾತ್ಮಕರಾಗಿದ್ದು ಸಾಧಕರಲ್ಲಿನ ಗುಣಗಳನ್ನು ನೋಡಬೇಕು. ಸಾಧಕರ ಸ್ವಭಾವದೋಷಗಳು ಗಮನಕ್ಕೆ ಬರುತ್ತಿದ್ದರೆ, ನಾವು ಜವಾಬ್ದಾರ ಸಾಧಕರೊಂದಿಗೆ ಮಾತನಾಡಿ ಅವರಿಗೆ ಅವರ ಸಾಧನೆಯಲ್ಲಿ ಸಹಾಯ ಮಾಡಬಹುದು.

೧ ಉ. ತಮ್ಮ ಅಡಚಣೆಗಳನ್ನು ಮನಮುಕ್ತವಾಗಿ ಮಂಡಿಸಬೇಕು ! : ಕಾರಣಾಂತರಗಳಿಂದ ನಾವು ನಮ್ಮ ಅಡಚಣೆಗಳನ್ನು ಮತ್ತು ಮನಸ್ಸಿನ ವಿಚಾರಗಳನ್ನು ಜವಾಬ್ದಾರ ಸಾಧಕರಿಗೆ ಹೇಳುವುದಿಲ್ಲ. ಇಂತಹ ಸಮಯದಲ್ಲಿ ಯಾವ ಸಾಧಕರು ನಮಗೆ ನಮ್ಮ ಹತ್ತಿರದವರು ಎಂದು ಅನಿಸುತ್ತಾರೆಯೋ, ಅವರೊಂದಿಗೆ ನಾವು ಮಾತನಾಡಬಹುದು. ಅವರಿಗೆ ನಮ್ಮ ಅಡಚಣೆಗಳನ್ನು ಹೇಳಿ ಪರಿಹಾರವನ್ನು ಕೇಳಬಹುದು ಅಥವಾ ಸಂತರೊಂದಿಗೆ ಮಾತನಾಡಬಹುದು.

೨. ಮನಮುಕ್ತ ಮಾತುಕತೆಯಿಂದಾಗುವ ಲಾಭಗಳು !

೨ ಅ. ಮನಸ್ಸು ನಿರ್ಮಲವಾಗಿ ಆನಂದಿಯಾಗಿರಲು ಸಾಧ್ಯವಾಗುವುದು : ಮನಮುಕ್ತವಾಗಿ ಮಾತನಾಡುವುದಕ್ಕೆ ಸಾಧನೆಯಲ್ಲಿ ಬಹಳ ಮಹತ್ವವಿದೆ. ಮನಮುಕ್ತವಾಗಿ ಮಾತನಾಡುವುದರಿಂದ ನಮ್ಮ ಮನಸ್ಸು ನಿರ್ಮಲವಾಗಲು ಸಹಾಯವಾಗಿ ನಾವು ಆನಂದಿ ಯಾಗುತ್ತೇವೆ ಮತ್ತು ನಮಗೆ ಸಿಗುವ ಆನಂದವನ್ನು ಇತರರಿಗೂ ಹಂಚಲು ಸಾಧ್ಯವಾಗುತ್ತದೆ. ಮನಸ್ಸು ಆನಂದಿಯಾಗಿರು ವುದರಿಂದ ನಮಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ.

೨ ಆ. ಮನಮುಕ್ತವಾಗಿ ಮಾತನಾಡಲು ಆರಂಭಿಸಿದರೆ ನಮ್ಮಲ್ಲಿನ ಸ್ವಭಾವದೋಷಗಳು ಗಮನಕ್ಕೆ ಬಂದು ಅವುಗಳನ್ನು ದೂರಗೊಳಿಸಲು ಪ್ರಯತ್ನಿಸಬಹುದು : ‘ಭಯವೆನಿಸುವುದು, ಪ್ರತಿಷ್ಠೆಯನ್ನು ಕಾಪಾಡುವುದು, ಕೀಳರಿಮೆ, ಪೂರ್ವಗ್ರಹದೂಷಿತ, ಅನಾವಶ್ಯಕ ವಿಚಾರ’, ನಮ್ಮಲ್ಲಿರುವ ಈ ಸ್ವಭಾವದೋಷಗಳು ಮತ್ತು ಅಹಂನ ಲಕ್ಷಣಗಳಿಂದ ನಾವು ಇತರರೊಂದಿಗೆ ಮಾತನಾಡುವುದನ್ನು ತಪ್ಪಿಸುತ್ತೇವೆ. ನಾವು ಯಾರೊಂದಿಗಾದರೂ ಮನಮುಕ್ತವಾಗಿ ಮಾತನಾಡಲು ಆರಂಭಿಸಬೇಕು. ಆರಂಭದಲ್ಲಿ ಎದುರಿಗಿರುವ ವ್ಯಕ್ತಿಯೊಂದಿಗೆ ಮಾತನಾಡುವುದು ಸ್ವಲ್ಪ ಕಠಿಣವೆನಿಸುತ್ತದೆ; ಆದರೆ ಒಮ್ಮೆ ಮಾತನಾಡಲು ಅಭ್ಯಾಸವಾದರೆ ‘ಮಾತನಾಡುವಾಗ ನಮ್ಮಲ್ಲಿನ ಯಾವ ಸ್ವಭಾವದೋಷ ಉಕ್ಕಿ ಬರುತ್ತದೆ ?’, ಎಂಬುದು ನಮ್ಮ ಗಮನಕ್ಕೆ ಬರತೊಡಗುತ್ತದೆ. ಆದುದರಿಂದ ಅದನ್ನು ದೂರಗೊಳಿಸಲು ಪ್ರಯತ್ನಿಸಲು ಸುಲಭವಾಗುತ್ತದೆ.

೨ ಇ. ಸಾಧಕರ ಬಗ್ಗೆ ಪೂರ್ವಗ್ರಹವಿರಿಸುವ ಬದಲು ವರ್ತಮಾನ ಸ್ಥಿತಿಯಲ್ಲಿದ್ದು ಅವರೊಂದಿಗೆ ಮಾತನಾಡಿದರೆ ಅಂತರವು ದೂರವಾಗಿ ಆ ಸಾಧಕರೊಂದಿಗೆ ಆತ್ಮೀಯತೆ ಮೂಡುತ್ತದೆ : ಹಿಂದೆ ಕೆಲವು ಸಾಧಕರೊಂದಿಗೆ ನಮ್ಮ ಪ್ರಸಂಗಗಳು ಸಂಭವಿಸಿದ್ದರಿಂದ ಅದಕ್ಕೆ ಸಂಬಂಧಿಸಿದಂತೆ ನಮ್ಮ ಮನಸ್ಸಿನ ಮೇಲೆ ಪರಿಣಾಮವಾಗಿರುತ್ತದೆ. ಆದುದರಿಂದ ನಾವು ಆ ಸಾಧಕ ರೊಂದಿಗೆ ಮಾತನಾಡುವುದನ್ನು ತಪ್ಪಿಸುತ್ತೇವೆ. ಪೂರ್ವಗ್ರಹದಲ್ಲಿ ಸಿಲುಕದೇ ವರ್ತಮಾನ ಸ್ಥಿತಿಯಲ್ಲಿದ್ದು ನಾವು ಅವರೊಂದಿಗೆ ಮಾತನಾಡಿದರೆ, ನಮ್ಮಲ್ಲಿನ ಅಂತರ ದೂರವಾಗಿ ಅವರೊಂದಿಗೆ ನಮಗೆ ಆತ್ಮೀಯತೆ ಮೂಡುತ್ತದೆ.

೨ ಈ. ಸಾಧಕರೊಂದಿಗೆ ಪ್ರೇಮದಿಂದ ಮಾತನಾಡಿದರೆ ಅವರ ಬಗ್ಗೆ ಆತ್ಮೀಯತೆ ಅನಿಸಿ ಅವರಿಗೆ ನಮ್ಮ ಆಧಾರವೆನಿಸುವುದು : ಕೆಲವೊಮ್ಮೆ ಸಾಧಕರಿಗೆ ಸೇವೆ ಅಥವಾ ಇತರ ಕಾರಣಗಳಿಂದ ಮಾತನಾಡಲು ಸಮಯ ಸಿಗುವುದಿಲ್ಲ. ಆದುದರಿಂದ ಬಹಳಷ್ಟು ಜನರು ಇತರರೊಂದಿಗೆ ಮಾತನಾಡುವುದನ್ನು ಬಿಟ್ಟು ಬಿಡುತ್ತಾರೆ. ‘ಮಾತನಾಡಲು ಹೆಚ್ಚು ಸಮಯ ಕೊಡಬೇಕಾಗುತ್ತದೆ’, ಎಂದೇನಿಲ್ಲ. ನಾವು ಸಹಜವಾಗಿ ಮಾತನಾಡಬಹುದು. ಆದುದರಿಂದ ಸಾಧಕರಲ್ಲಿ ಆತ್ಮೀಯತೆ ಮತ್ತು ಪ್ರೇಮ ಉತ್ಪನ್ನವಾಗುತ್ತದೆ, ಹಾಗೆಯೇ ಆ ಸಾಧಕರಿಗೆ ನಮ್ಮ ಆಧಾರವೆನಿಸುತ್ತದೆ. ಕೆಲವೊಮ್ಮೆ ತಾರತಮ್ಯದಿಂದ ‘ನಾವು ಏನು ಮಾತನಾಡಬೇಕು ?’, ಎಂದು ನಿರ್ಧರಿಸಬಹುದು. ಆಶ್ರಮದ ಸಂತರು ಬರುವಾಗ-ಹೋಗುವಾಗ ಎದುರಿಗೆ ಬಂದ ಸಾಧಕರೊಂದಿಗೆ ಒಂದೆರಡು ಶಬ್ದಗಳನ್ನು ಮಾತನಾಡಿ ಅವರಿಗೆ ಆನಂದ ನೀಡುತ್ತಾರೆ. ಅವರಿಂದ ಕಲಿಯುವುದು ಬಹಳಷ್ಟಿದೆ.

೨ ಉ. ಸಂತರು ಮತ್ತು ಸಾಧಕರ ಸತ್ಸಂಗದಿಂದ ಭೀತಿದಾಯಕ ಪ್ರಸಂಗಗಳಿಂದ ಹೊರಗೆ ಬರಲು ಸಾಧ್ಯವಾಗುವುದು : ‘ವ್ಯಾವಹಾರಿಕ ಜೀವನದಲ್ಲಿ ಘಟಿಸಿದ ಪ್ರಸಂಗಗಳಲ್ಲಿ ಅಪಘಾತ, ಮನೆಯಲ್ಲಿನ ವ್ಯಕ್ತಿಯ ಸಾವು ಮತ್ತು ನೋಡಿದ ಭಯಾನಕ ದೃಶ್ಯ’, ಇಂತಹ ಪ್ರಸಂಗಗಳಿಂದಾಗಿ ಮನಸ್ಸಿನ ಮೇಲೆ ಒತ್ತಡ ಬಂದು ನಮಗೆ ಭಯವಾಗುತ್ತದೆ. ಇಂತಹ ಸಮಯದಲ್ಲಿ ಅದರಿಂದ ಹೊರಗೆ ಬರಲು ‘ಸಂತರು ಮತ್ತು ಸಾಧಕರ ಸತ್ಸಂಗ ದಲ್ಲಿರುವುದು, ‘ಸನಾತನ ಪ್ರಭಾತ’ ಓದುವುದು ಅಥವಾ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಕೇಳುವುದು’, ಹೀಗೆ ಪ್ರಯತ್ನಿಸಬಹುದು. ಅದರಿಂದ ವರ್ತಮಾನಕಾಲದಲ್ಲಿರಲು ಸಾಧ್ಯವಾಗಿ ಮನಸ್ಸಿನ ಮೇಲಿನ ಒತ್ತಡ ದೂರವಾಗಿ ಆನಂದ ಸಿಗುವುದು.

೨ ಊ. ಮನಮುಕ್ತವಾಗಿ ಮಾತನಾಡಿದರೆ ‘ಬಹಿರ್ಮುಖತೆ, ಒಬ್ಬಂಟಿತನ, ಪೂರ್ವಗ್ರಹದೂಷಿತ ಮತ್ತು ಕೀಳರಿಮೆ’, ಈ ಸ್ವಭಾವದೋಷಗಳು ಕಡಿಮೆಯಾಗಲು ಸಹಾಯವಾಗುತ್ತದೆ.

೨ ಎ. ಸಹಸಾಧಕನಿಗೆ ಅವನ ತಪ್ಪನ್ನು ಮನಮುಕ್ತವಾಗಿ ಹೇಳಿ ಸಹಾಯ ಮಾಡಿದರೆ ಸಮಷ್ಟಿಯ ಮೇಲಾಗುವ ಪರಿಣಾಮವನ್ನು ತಪ್ಪಿಸಲು ಬರುವುದು : ‘ಯಾವುದಾದರೊಬ್ಬ ಸಾಧಕನು ಅವನ ಸೇವೆಯ ಮೊದಲ ಹಂತದಲ್ಲಿಯೇ ಎಲ್ಲಿಯೋ ತಪ್ಪುತ್ತಿದ್ದಾನೆ’, ಎಂಬುದು ನಮ್ಮ ಗಮನಕ್ಕೆ ಬರುತ್ತದೆ; ಆದರೆ ‘ಅವನಿಗೇನು ಅನಿಸಬಹುದು ?’, ಎಂಬ ವಿಚಾರದಿಂದ ನಾವು ಅವನಿಗೆ ಅವನ ತಪ್ಪನ್ನು ಹೇಳುವುದನ್ನು ತಪ್ಪಿಸುತ್ತೇವೆ. ಅದರಲ್ಲಿ ನಮಗೆ ಹಾನಿ ಆಗುತ್ತದೆ; ಆದರೆ ತನ್ನ ತಪ್ಪು ಗಮನಕ್ಕೆ ಬರದ ಕಾರಣ ಆ ಸಾಧಕನ ಸೇವೆಯೂ ಪರಿಪೂರ್ಣವಾಗುವುದಿಲ್ಲ. ಅದರ ಪರಿಣಾಮ ಅವನ ಸೇವೆಯ ಮೇಲಾಗುತ್ತದೆ. ಈ ಸೇವೆಯನ್ನು ಪುನಃ ಮಾಡಲು ಅವನು ಸಮಯ ನೀಡಬೇಕಾಗುತ್ತದೆ. ನಾವು ಅವನಿಗೆ ಸೇವೆಯಲ್ಲಿ ಸಹಾಯ ಮಾಡುವವರು ಇರುವುದರಿಂದ ನಮ್ಮ ಸೇವೆಗೂ ವಿಳಂಬವಾಗಿ ನಮ್ಮ ಸಮಯ ವ್ಯರ್ಥವಾಗುತ್ತದೆ.

೩. ಮನಮುಕ್ತವಾಗಿ ಮಾತನಾಡಲು ಪ್ರಯತ್ನಿಸುವ ಸಾಧಕರಿಗೆ ಇತರರು ಹೇಗೆ ಸಹಾಯ ಮಾಡಬೇಕು ?  

ನಮ್ಮೊಂದಿಗೆ ಮಾತನಾಡದಿರುವ ಸಾಧಕರ ನಿರೀಕ್ಷಣೆ ಮಾಡಿ ‘ಅವರ ಮನಸ್ಸಿನ ಮೇಲಿನ ಒತ್ತಡ ಹೋಗಬೇಕು’, ಎಂಬ ರೀತಿ ಯಲ್ಲಿ ಅವರೊಂದಿಗೆ ಪ್ರೀತಿಯಿಂದ ಮಾತನಾಡಬೇಕು. ಅದರಿಂದ ಅವರಿಗೆ ಸಹಜವಾಗಿ ಮಾತನಾಡಲು ಸಾಧ್ಯವಾಗುತ್ತದೆ.’

– ಸೌ. ವರ್ಧಿನಿ ವಾಸುದೇವ ಗೋರಲ್‌ (ಆಧ್ಯಾತ್ಮಿಕ ಮಟ್ಟ ಶೇ. ೬೨, ೨೭ ವರ್ಷ), ಸನಾತನ ಆಶ್ರಮ, ರಾಮನಾಥಿ, ಗೋವಾ (೮.೯.೨೦೨೩)