ಸಾಧಕರೆ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ತಳಮಳದಿಂದ ಮಾಡಿ ಮನುಷ್ಯ ಜನ್ಮದ ಉದ್ದೇಶವಾದ ‘ಆನಂದಪ್ರಾಪ್ತಿ’ಯನ್ನು ಸಾಧಿಸೋಣ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸನಾತನ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ಸಾಧಕರಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಯತ್ನಿಸಲು ಹೇಳುತ್ತಿದೆ. ಈಗಿನ ಕಲಿಯುಗದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಮತ್ತು ಸ್ವಭಾವದೋಷ ಹಾಗೂ ಅಹಂ ಗಳಿಂದ ಸಾಧಕರ ಆಧ್ಯಾತ್ಮಿಕ ಪ್ರಗತಿ ಆಗುವಲ್ಲಿ ಅನೇಕ ಅಡೆತಡೆಗಳು ಬರುತ್ತಿವೆ. ಸಾಧಕರು ಆನಂದಪ್ರಾಪ್ತಿಗಾಗಿ ಸಾಧನೆ ಮಾಡು ತ್ತಿದ್ದಾರೆ. ಜೀವನವು ಆನಂದಮಯವಾಗುವುದಕ್ಕಾಗಿ ಚಿತ್ತದ ಮೇಲಿನ ಜನ್ಮಜನ್ಮಾಂತರದ ಸಂಸ್ಕಾರ ನಾಶವಾಗಬೇಕು ಮತ್ತು ಅದಕ್ಕಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ಗಾಂಭೀರ್ಯದಿಂದ ನಡೆಸಬೇಕು.

ಸಾಧಕರು ಸೇವೆ ಅಥವಾ ವ್ಯವಹಾರದಲ್ಲಿನ ಯಾವುದೇ ಕೃತಿ ಮಾಡುವಾಗ ಅಂತರ್ಮುಖರಾಗಿ ತಮ್ಮ ತಪ್ಪುಗಳ ನಿರೀಕ್ಷಣೆ ಮತ್ತು ಚಿಂತನೆ (ಟಿಪ್ಪಣಿ) ಮಾಡಿದರೆ ಸ್ವಭಾವದೋಷ ಮತ್ತು ಅಹಂ ಇವುಗಳ ಅಂಶಗಳು ಅರಿವಾಗತೊಡಗುತ್ತವೆ. ಸತತ ಪ್ರಯತ್ನ ಮಾಡಿದ ನಂತರ ಅದರ ತೀವ್ರತೆ ಕಡಿಮೆ ಆಗುತ್ತದೆ. ನಂತರ ಈ ಪ್ರಕ್ರಿಯೆಯ ಸಂಸ್ಕಾರ ಅಂತರ್ಮನಸ್ಸಿನ ಮೇಲಾದ ನಂತರ ತಪ್ಪಾಗುವ ಮೊದಲೇ ಅದರ ಅರಿವಾಗಿ ಯೋಗ್ಯ ಕೃತಿ ಆಗುತ್ತದೆ ಮತ್ತು ಸಾಧನೆಯಲ್ಲಿ ಆನಂದ ಸಿಗುತ್ತದೆ.

(ಟಿಪ್ಪಣಿ : ‘ಯಾವ ತಪ್ಪಾಗಿದೆ ? ಅದರ ಹಿಂದೆ ಯಾವ ಸ್ವಭಾವದೋಷ ಇತ್ತು ? ತಪ್ಪಿನಿಂದ ಸ್ವಂತದ ಮೇಲೆ ಅಥವಾ ಸಮಷ್ಟಿಯ ಮೇಲೆ ಏನು ಪರಿಣಾಮ ಆಗಿದೆ ? ತಪ್ಪು ಪುನಃ ಆಗಬಾರದೆಂದು ಉಪಾಯಯೋಜನೆ ಮತ್ತು ಪಾಪಕ್ಷಾಲನೆ ಆಗುವುದಕ್ಕಾಗಿ ಯಾವ ಪ್ರಾಯಶ್ಚಿತ್ತ ತೆಗೆದುಕೊಳ್ಳುವಿರಿ ?’, ಇದರ ಬಗ್ಗೆ ಚಿಂತನೆ ಮಾಡಬೇಕು.)

ಸನಾತನದ ಸಾಧಕರ ಸಾಧನೆಯ ಕುರಿತಾದ ಸಮರ್ಪಣೆಯ ಒಂದು ಉದಾಹರಣೆ !

ದೇಶ ವಿದೇಶಗಳಿಂದ ಅನೇಕ ಜನರು ಪ್ರವಾಸಕ್ಕಾಗಿ ಗೋವಾಗೆ ಬರುತ್ತಾರೆ ಮತ್ತು ಸಮುದ್ರತೀರ ನೋಡುವುದಕ್ಕೆ ಹೋಗುತ್ತಾರೆ; ಆದರೆ  ಗೋವಾದ ಸನಾತನ ಆಶ್ರಮದ ಅನೇಕ ಸಾಧಕರು ಮಾತ್ರ ವರ್ಷಾನುವರ್ಷಗಳಿಂದ ಗೋವಾದಲ್ಲಿನ ಸಮುದ್ರವನ್ನು ಕೂಡ ನೋಡಿಲ್ಲ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ