‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !

ಸೌ. ಸುಪ್ರಿಯಾ ಮಾಥೂರ

೨೦೧೯ ರಲ್ಲಿ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಬಂದಿದ್ದರು. ಸೌ. ಸುಪ್ರಿಯಾ ಮಾಥೂರರು  (ಆಧ್ಯಾತ್ಮಿಕ ಮಟ್ಟ ಶೇ. ೬೭) ಪೂರ್ಣವೇಳೆ ಸಾಧನೆ ಮಾಡುವವರಿಗೆ ಪ್ರಕ್ರಿಯೆಯನ್ನು ಮಾಡಿಸುತ್ತಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಹಾಗೂ ಇತರ ಸಾಧಕರಿಂದಾದ ತಪ್ಪುಗಳು ಹಾಗೂ ಮನಸ್ಸಿನ ಪ್ರಕ್ರಿಯೆಯ ಪ್ರಸಂಗಗಳನ್ನು ಅವರು ಹೇಳಿದಾಗ ಸೌ. ಸುಪ್ರಿಯಾ ಮಾಥೂರರು ಸಾಧಕರಿಗೆ ಮುಂದಿನ ದೃಷ್ಟಿಕೋನವನ್ನು ನೀಡಿದರು. ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಪ್ರಕ್ರಿಯೆ ಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ಕೊಡಲಾಗಿದೆ.  ೨೫/೩೩ ನೇ ಸಂಚಿಕೆಯಲ್ಲಿ ಅದರ ಕೆಲವು ಭಾಗ ನೋಡಿದೆವು ಈ ವಾರದ ಅದರ ಮುಂದಿನ ಭಾಗ ನೋಡೋಣ.

(ಭಾಗ ೬)

ಶ್ರೀಮತಿ ಅಶ್ವಿನಿ ಪ್ರಭು

೧೫. ಪ್ರಸಂಗ – ಕಲಿಸುವ ವೃತ್ತಿ ಇರುವುದು

೧೫ ಅ. ದೃಷ್ಟಿಕೋನ

೧. ‘ಕಲಿಸುವ ವೃತ್ತಿಯಿದ್ದರೆ ಮನಸ್ಸು ಆಗ್ರಹೀ ಸ್ಥಿತಿಯಲ್ಲಿರುತ್ತಿದೆ. ‘ಇತರರನ್ನು ಕೀಳ್ಮಟ್ಟದವರೆಂದು ಪರಿಗಣಿಸುವುದು’, ಈ ಭಾಗವೂ ಇರುತ್ತದೆ. ಸಾಧನೆಯಲ್ಲಿ ಯಾರು ಏನೇ ಹೇಳಿದರೂ ಕೇಳುವ ಸ್ಥಿತಿಯಲ್ಲಿರಬೇಕು.

೨. ನಮ್ಮ ಸಾಧನೆಯಲ್ಲಿ ಕುಟುಂಬದವರ ಸಹಭಾಗ ಮಹತ್ವದ್ದಾಗಿರುತ್ತದೆ. ಅವರ ಸಹಾಯ ಪಡೆಯಲು ಹೆಚ್ಚು ಪ್ರಯತ್ನಿಸಬೇಕು; ಆದರೆ ನಮ್ಮಲ್ಲಿನ ಅಹಂಭಾವದಿಂದಾಗಿ ನಾವು ಅವರಿಂದ ಸಹಾಯ ಪಡೆಯುವುದಿಲ್ಲ. ಆದ್ದರಿಂದ ಪ್ರಗತಿಯಾಗಲು ಹೆಚ್ಚು ಸಮಯ ಬೇಕಾಗುತ್ತದೆ.

೧೬. ಪ್ರಸಂಗ – ‘ಸ್ವ’ದ ಮೇಲೆ ನಿಯಂತ್ರಣ

೧೬ ಅ. ದೃಷ್ಟಿಕೋನ

೧. ಮನಸ್ಸಿನ ಸ್ತರದಲ್ಲಿನ ವಿಚಾರಗಳನ್ನು ಸತತ ನಿರೀಕ್ಷಣೆ ಮಾಡಬೇಕು. ನನಗೆ ಏನನಿಸುತ್ತದೆ ?, ಎನ್ನುವುದಕ್ಕಿಂತ ಎದುರಿನ ವ್ಯಕ್ತಿಗೆ ಏನನಿಸುತ್ತದೆ ?’, ಎನ್ನುವುದರ ಬಗ್ಗೆ ‘ಪಟ್ಟು ಹಿಡಿಯುವುದು’ ಈ ಗುಣವನ್ನು ಹೆಚ್ಚಿಸಲು ಪ್ರಯತ್ನಿಸಬೇಕು.

೨. ಪ್ರಯತ್ನದಲ್ಲಿ ಫಲಾಪೇಕ್ಷೆ ಇದ್ದರೆ ಪ್ರಯತ್ನ ಕುಸಿಯುತ್ತದೆ. ‘ನಾನು ‘ಸ್ವ’ ಅರ್ಪಣೆ ಮಾಡುವ ಸಲುವಾಗಿ ಸಾಧನೆಗೆ ಬಂದಿದ್ದೇನೆ ‘, ಎಂಬ ವಿಚಾರ ತಮ್ಮಲ್ಲಿ ಕಡಿಮೆಯಿದೆ.

೩. ಸನಾತನದ ಆಶ್ರಮದಲ್ಲಿನ ಎಲ್ಲ ಕಾರ್ಯಪದ್ಧತಿಗಳು ನಮ್ಮ ‘ಸ್ವ’ವನ್ನು ನಾಶಗೊಳಿಸುವುದಕ್ಕಾಗಿಯೇ ಇವೆ. ಆ ಅರ್ಥವು ನಮ್ಮ ಬುದ್ಧಿಗೆ ತಿಳಿಯಬೇಕೆಂದು ಪ್ರತಿಯೊಂದು ಕಾರ್ಯಪದ್ಧತಿಯ ವಿಶ್ಲೇಷಣೆ ಮಾಡಬೇಕು.’

– ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು ಸೇವಾಕೇಂದ್ರ, ಮಂಗಳೂರು. (೧೩.೭.೨೦೧೯)