ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೆ ಸಾಧನೆಯ ವಿಷಯದಲ್ಲಿ ಸಾಧಕರು ಕೇಳಿದ ಕೆಲವು ಪ್ರಶ್ನೆಗಳು ಮತ್ತು ಅವುಗಳಿಗೆ ಅವರು ನೀಡಿರುವ ಉತ್ತರಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಡಾ. ರವೀಂದ್ರ ಭೋಸಲೆ : ಸ್ವಯಂಸೂಚನೆಗಳ ಸತ್ರ ಮಾಡುವ ಬದಲು ಕೇವಲ ಪ್ರಾರ್ಥನೆ ಮಾಡಿ ಸ್ವಭಾವ ದೋಷ ನಿರ್ಮೂಲನೆಯನ್ನು ಮಾಡಬಹುದೇ ?

ಪರಾತ್ಪರ ಗುರು ಡಾ. ಆಠವಲೆ : ಸ್ವಯಂಸೂಚನೆಯು ಬುದ್ಧಿಯ ಸ್ತರದಲ್ಲಿ ಹಾಗೂ ಪ್ರಾರ್ಥನೆ ಮನಸ್ಸಿನ ಸ್ತರದಲ್ಲಿ ಕಾರ್ಯ ಮಾಡುತ್ತದೆ. ಆದ್ದರಿಂದ ಸ್ವಯಂಸೂಚನಾ ಸತ್ರ ಮಾಡುವುದು ಹೆಚ್ಚು ಪ್ರಭಾವಪೂರ್ಣವಾಗಿದೆ.

ಡಾ. ರವೀಂದ್ರ ಭೋಸಲೆ : ಅನಿಷ್ಟ ಶಕ್ತಿ ಮನುಷ್ಯನ ಶರೀರ ದಲ್ಲಿನ ಸ್ಥಾನವನ್ನು ಪದೇ ಪದೇ ಬದಲಾಯಿಸುತ್ತದೆ. ಆದ್ದರಿಂದ ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ ನಾಮಜಪ ಹುಡುಕುವಾಗ ಆ ಸ್ಥಾನ ಪದೇ ಪದೇ ಹುಡುಕುವುದರಲ್ಲಿ ಸಮಯ ವ್ಯರ್ಥವಾಗುವುದಿಲ್ಲವೇ ?

ಡಾ. ರವೀಂದ್ರ ಭೋಸಲೆ

ಪರಾತ್ಪರ ಗುರು ಡಾ. ಆಠವಲೆ : ಇಲ್ಲ ತದ್ವಿರುದ್ಧ ಸಮಯದ ಸದುಪಯೋಗವಾಗುತ್ತದೆ.

ಡಾ. ರವೀಂದ್ರ ಭೋಸಲೆ : ಭಾವಾರ್ಚನೆ ಮಾನಸಿಕ ಸ್ತರದ್ದಾಗಿದೆಯೇ ?

ಪರಾತ್ಪರ ಗುರು ಡಾ. ಆಠವಲೆ : ಇಲ್ಲ. ಭಾವಾರ್ಚನೆಯಿಂದ ಆಧ್ಯಾತ್ಮಿಕ ಲಾಭವಾಗುತ್ತದೆ.

ಡಾ. ರವೀಂದ್ರ ಭೋಸಲೆ : ನಾವು ಮುದ್ರೆ ಮಾಡಿದಾಗ ನಮಗೆ ಸಕಾರಾತ್ಮಕ ಶಕ್ತಿ ಹೇಗೆ ಗ್ರಹಣ ಮಾಡಲು ಸಾಧ್ಯವಾಗುತ್ತದೆ ?

ಪರಾತ್ಪರ ಗುರು ಡಾ. ಆಠವಲೆ : ನಾವು ಮುದ್ರೆ ಮಾಡಿದಾಗ ಸಹಸ್ರಾರ, ಆಜ್ಞಾಚಕ್ರ ಇಂತಹ ಕುಂಡಲಿನಿ ಚಕ್ರಗಳಿಂದ ಸಕಾರಾತ್ಮಕ ಶಕ್ತಿ ನಮ್ಮ ಶರೀರ ದೊಳಗೆ ಪ್ರವೇಶ ಮಾಡುತ್ತದೆ.

ಡಾ. ರವೀಂದ್ರ ಭೋಸಲೆ : ನಾನು ಕಣ್ಣುಮುಚ್ಚಿ ನಮಸ್ಕಾರದ ಮುದ್ರೆ ಮಾಡಿ ನಿಮ್ಮನ್ನು ಸ್ಮರಣೆ ಮಾಡುತ್ತೇನೆ. ಆಗ ನನ್ನ ಕಣ್ಣುಗಳ ಮುಂದೆ ನಿಮ್ಮ ನಮಸ್ಕಾರ ಮಾಡಿದ ರೂಪ ಬರುತ್ತದೆ. ಇದರ ಹಿಂದಿನ ಕಾರಣವೇನು ?

ಪರಾತ್ಪರ ಗುರು ಡಾ. ಆಠವಲೆ : ಬಿಂಬ-ಪ್ರತಿಬಿಂಬ ಈ ನ್ಯಾಯದಿಂದ ಹಾಗಾಗುತ್ತದೆ.

ಡಾ. ರವೀಂದ್ರ ಭೋಸಲೆ : ರೋಗಿಗಳ ಶಸಚಿಕಿತ್ಸೆ ಮಾಡುವಾಗ ‘ನಾನು ಹೋರಾಡುತ್ತಿದ್ದೇನೆ’, ಎನ್ನುವ ಭಾವ ಇಟ್ಟುಕೊಳ್ಳಬಹುದೇ ?

ಪರಾತ್ಪರ ಗುರು ಡಾ. ಆಠವಲೆ : ಶಸ್ತ್ರಚಿಕಿತ್ಸೆ ಮಾಡುವಾಗ ನೀವು ನಾಮಜಪ ಮಾಡಿರಿ; ಅಂದರೆ ದೇವರೆ ನಿಮ್ಮ ಮೂಲಕ ಶಸ್ತ್ರಚಿಕಿತ್ಸೆ ಮಾಡುವರು.

ಡಾ. ರವೀಂದ್ರ ಭೋಸಲೆ : ಶ್ರೀಗುರುದೇವಾ, ನೀವು ನನ್ನ ಮಗನಿಗೆ ಆಶೀರ್ವಾದ ನೀಡಿರಿ. ಅದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ.

ಪರಾತ್ಪರ ಗುರು ಡಾ. ಆಠವಲೆ : ಸಾಧನೆ ಮಾಡಿ ಅರ್ಹತೆ ಹೆಚ್ಚಾದಾಗ ದೇವರ ಆಶೀರ್ವಾದ ತನ್ನಿಂತಾನೆ ಸಿಗುತ್ತದೆ.

– ಡಾ. ರವೀಂದ್ರ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೧) ಅಹಿಲ್ಯಾನಗರ, ಮಹಾರಾಷ್ಟ್ರ.

ಮನೆ ಹತ್ತಿರವಿದ್ದರೂ ‘ಹಬ್ಬಹರಿದಿನಗಳಲ್ಲಿ ಆಶ್ರಮದಲ್ಲಿದ್ದು ಸೇವೆ ಮಾಡೋಣ’, ಎಂದು ಸಾಧಕಿಗೆ ಎನಿಸುವುದು ಮತ್ತು ‘ಇದು ಪ್ರಗತಿಯ ಲಕ್ಷಣ’, ಎಂದು ಪರಾತ್ಪರ ಗುರು ಡಾ. ಆಠವಲೆಯವರು ಹೇಳುವುದು

‘ಒಮ್ಮೆ ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಸತ್ಸಂಗ ಲಭಿಸಿತು. ಆಗ ನಾನು ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರವನ್ನು ಮುಂದೆ ಕೊಡಲಾಗಿದೆ.

ನಾನು : ಪರಾತ್ಪರ ಗುರು ಡಾಕ್ಟರ, ಕಳೆದ ೧೧ ವರ್ಷಗಳಿಂದ ನಾನು ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿದ್ದು ಸಾಧನೆಯನ್ನು ಮಾಡುತ್ತಿದ್ದೇನೆ. ಈ ಮೊದಲು ನಾನು ಆಶ್ರಮದಿಂದ ಡೊಂಬಿವಲಿ (ಠಾಣೆ ಜಿಲ್ಲೆ)ಯಲ್ಲಿನ ನಮ್ಮ ಮನೆಗೆ ವರ್ಷದಲ್ಲಿ ಒಂದು ಬಾರಿಯೇ ಮತ್ತು ಸ್ವಲ್ಪ ದಿನಗಳ ಮಟ್ಟಿಗೆ ಹೋಗುತ್ತಿದ್ದೆನು. ಈಗ ನಾವು ಗೋವಾದಲ್ಲಿ ಆಶ್ರಮದ ಹತ್ತಿರವೇ ಮನೆಯನ್ನು ತೆಗೆದುಕೊಂಡಿದ್ದೇವೆ. ‘ಹಬ್ಬದ ದಿನ ಮನೆಯನ್ನು ಅಲಂಕರಿಸುವುದು, ಏನಾದರೂ ಸಿಹಿ ಪದಾರ್ಥಗಳನ್ನು ತಯಾರಿಸುವುದು’ ಮುಂತಾದ ವಿಷಯಗಳನ್ನು ಮಾಡಬೇಕಾಗುತ್ತದೆ; ಆದರೆ ಮನೆ ಹತ್ತಿರವಿದ್ದರೂ ನನಗೆ ಯಾವಾಗಲೂ ‘ಹಬ್ಬಕ್ಕೆ ಮನೆಗೆ ಹೋಗಬೇಕು, ಮನೆಯಲ್ಲಿ ಬೇರೆ ಏನಾದರೂ ಮಾಡಬೇಕು, ಅಲಂಕರಿಸಬೇಕು, ಪದಾರ್ಥಗಳನ್ನು ಮಾಡಬೇಕು’, ಎಂದು ಎನಿಸುವುದಿಲ್ಲ. ನನಗೆ ಆ ರೀತಿ ಇಚ್ಛೆಯೇ ಆಗುವುದಿಲ್ಲ. ಕೇವಲ ನನ್ನ ಮನೆಯ ಜನರಿಗೆ ಎನಿಸುತ್ತದೆ; ಎಂದು ನಾನು ನನಗೆ ಸಮಯ ಸಿಕ್ಕಾಗ ಮನೆಯಲ್ಲಿನ ಕೆಲವು ಕೆಲಸಗಳನ್ನು ಮಾಡುತ್ತೇನೆ. ಇದರ ಬದಲಾಗಿ ನನಗೆ ‘ಆಶ್ರಮದಲ್ಲಿಯೇ ಇದ್ದು ಸೇವೆಯನ್ನು ಮಾಡೋಣ’, ಎಂದು ಅನಿಸುತ್ತದೆ. ಗುರುದೇವಾ, ಹೀಗೆ ಅನಿಸುವುದು, ಎಂದರೆ ನನ್ನಲ್ಲಿನ ಆಲಸ್ಯದಿಂದಾಗಿಯೋ ಅಥವಾ ನಿರಾಶೆಯಿಂದಾಗುತ್ತದೆ ?

ಪರಾತ್ಪರ ಗುರು ಡಾ. ಆಠವಲೆ : ಇದು ಒಳ್ಳೆಯದಿದೆ. ಆಧ್ಯಾತ್ಮಿಕ ಪ್ರಗತಿಯ ಲಕ್ಷಣವಾಗಿದೆ.’

– ಓರ್ವ ಸಾಧಕಿ, ಫೊಂಡಾ, ಗೋವಾ.