ಸ್ವಭಾವದೋಷ ನಿವಾರಣೆಗಾಗಿ ಸ್ವಯಂಸೂಚನೆ ನೀಡುವ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಮಾಡಿದ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಒಂದು ಸ್ವಭಾವದೋಷಕ್ಕೆ ಒಂದು ವಾರ ದಿನದಲ್ಲಿ ೩-೪ ಬಾರಿ ಸ್ವಯಂಸೂಚನೆ ತೆಗೆದುಕೊಂಡ ನಂತರ ಮುಂದಿನ ವಾರ ಮತ್ತೊಂದು ಸ್ವಭಾವದೋಷಕ್ಕೆ ಸ್ವಯಂಸೂಚನೆ ಕೊಡುವುದು.

ಶ್ರೀ ಅಗ್ನಿವಲ್ಲಭ : ಗುರುದೇವ, ಆರಂಭಿಕ ಹಂತದಲ್ಲಿ ಪ್ರಕ್ರಿಯೆ (ಟಿಪ್ಪಣಿ) ಮಾಡುವಾಗ ನನಗೆ ಏನು ಸಾಧ್ಯವಾಗುತ್ತಿರಲಿಲ್ಲ, ಆಗ ನಾನು. ಸೌ. ಸುಪ್ರಿಯಾ ಮಾಥುರ್‌ (ಪ್ರಕ್ರಿಯೆ ವರದಿ ಸೇವಕಿ, ಆಧ್ಯಾತ್ಮಿಕ ಮಟ್ಟ ಶೇಕಡ ೬೭) ಮತ್ತು.  ಪೂ.  ರೇಖಾ ಕಾಣಕೋಣಕರ (ಸನಾತನದ ೬೦ ನೇ (ಸಮಷ್ಟಿ) ಸಂತ) ಇವರೊಂದಿಗೆ ಮನಮುಕ್ತವಾಗಿ  ಮಾತನಾಡುತ್ತಿರಲ್ಲಿಲ್ಲ. ಈಗ ಅದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ. ಪ್ರತೀ ಅರ್ಧ ಗಂಟೆಗೊಮ್ಮೆ ನಾನು ಮನಸ್ಸಿನ ವಿಚಾರ ಬರೆದು ಅವರಿಗೆ ತೋರಿಸುತ್ತೇನೆ ಮತ್ತು ಅದಕ್ಕೆ ಸ್ವಯಂಸೂಚನೆ ಮಾಡಿಸಿಕೊಳ್ಳುತ್ತೇನೆ.

(ಟಿಪ್ಪಣಿ – ಅ. ಸ್ವಭಾವದೋಷ ಮತ್ತು ಅಹಂ ಇದರ ನಿರ್ಮೂಲನೆಯ  ಪ್ರಕ್ರಿಯೆ

ಶ್ರೀ. ಅಗ್ನಿವಲ್ಲಭ

ಆ. ತನ್ನಲ್ಲಿನ  ಸ್ವಭಾವದೋಷ ಮತ್ತು ಅಹಂ ಇದರ ನಿರ್ಮೂಲನೆ ಮಾಡಲು ದಿನವಿಡಿ ನಮ್ಮಿಂದಾದ ತಪ್ಪನ್ನು ಪುಸ್ತಕದಲ್ಲಿ ಬರೆದು, ಆ ತಪ್ಪು ಯಾವ ದೋಷದಿಂದ ಆಯಿತು, ಅದನ್ನು ಬರೆಯುವುದು ಮತ್ತು  ಆ ತಪ್ಪು ಮತ್ತೊಮ್ಮೆ ಆಗಬಾರದು, ಎಂಬುದಕ್ಕಾಗಿ ಅದರ ಮುಂದೆ ಯೋಗ್ಯ ದೃಷ್ಟಿಕೋನದ ಸೂಚನೆಯನ್ನು ಬರೆದು ಅದನ್ನು ದಿನದಲ್ಲಿ ೧೦-೧೨ ಬಾರಿ ಮನಸ್ಸಿಗೆ ಕೊಡುವುದು)

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ದಿನದಲ್ಲಿ ಎಷ್ಟು ಬಾರಿ ಸ್ವಯಂಸೂಚನೆ  ಕೊಡುತ್ತೀರಿ ?

ಶ್ರೀ. ಅಗ್ನಿವಲ್ಲಭ : ೧೨ ರಿಂದ ೧೫ ಬಾರಿ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇವತ್ತು ೧೨-೧೫ ಸೂಚನೆ ಮತ್ತು ನಾಳೆ ಬೇರೆ ೧೨-೧೫ ಸೂಚನೆ ತೆಗೆದು ಕೊಳ್ಳುತ್ತಿಯಾ; ಆದರೆ ಇವತ್ತು ತೆಗೆದುಕೊಂಡ ಸೂಚನೆ ನಾಳೆ ತೆಗೆದು ಕೊಳ್ಳುವುದಿಲ್ಲವೇ ? ಒಂದು ಗಮನದಲ್ಲಿಡಿ. ಒಂದು ಪ್ರಸಂಗಕ್ಕೆ ಸ್ವಯಂಸೂಚನೆ ದಿನದಲ್ಲಿ ಕನಿಷ್ಟಪಕ್ಷ ೩-೪ ಬಾರಿ ತೆಗೆದು ಕೊಳ್ಳಬೇಕು. ಹೀಗೆ ೨-೩ ಪ್ರಸಂಗಕ್ಕೆ ದಿನದಲ್ಲಿ ೩-೪ ಬಾರಿ ಸ್ವಯಂಸೂಚನೆ ತೆಗೆದುಕೊಳ್ಳಬೇಕು. ನಂತರ ಮುಂದಿನ ವಾರದಲ್ಲಿ ಬೇರೆ ೨-೩ ಅಂಶ ತೆಗೆದುಕೊಳ್ಳಬೇಕು. ಅದೇ ಅಂಶಕ್ಕೆ ಒಂದು ವಾರಪೂರ್ತಿ ದಿನದಲ್ಲಿ ೩-೪ ಬಾರಿ ಸ್ವಯಂಸೂಚನೆ ತೆಗೆದುಕೊಳ್ಳಬೇಕು. ಅಲ್ಲಿಯ ವರೆಗೆ ಮನಸ್ಸಿನಲ್ಲಿ ಬೇರೆ ವಿಷಯ ಬಂದರೆ, ಅದನ್ನು ಪುಸ್ತಕದಲ್ಲಿ ಬರೆದು ಇಟ್ಟುಕೊಳ್ಳಬೇಕು. ಈ ಪದ್ದತಿಯಲ್ಲಿ ಒಂದು ವಾರಪೂರ್ತಿ ೨-೩ ಪ್ರಸಂಗದ ಮೇಲೆ ಸ್ವಯಂಸೂಚನೆ ತೆಗೆದುಕೊಂಡ ನಂತರ ಮುಂದಿನ ವಾರದಲ್ಲಿ ಮತ್ತೊಂದು ೨-೩ ಪ್ರಸಂಗಕ್ಕೆ ಸ್ವಯಂಸೂಚನೆ ತೆಗೆದುಕೊಳ್ಳಬೇಕು. ಪ್ರತೀದಿನ ಹೊಸ ಹೊಸ ಅಂಶಕ್ಕೆ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬಾರದು. ಈ ಅಂಶವನ್ನು ಎಲ್ಲರಿಗೂ ತಿಳಿಸು.

ಶ್ರೀ. ಅಗ್ನಿವಲ್ಲಭ : ಆಯಿತು ಗುರುದೇವ. ಸುಪ್ರಿಯ ಅಕ್ಕನೊಂದಿಗೆ ಮಾತನಾಡಿದ ನಂತರ ನನಗೆ ತುಂಬಾ ಅಂಶಗಳು ಕಲಿಯಲು ಸಿಕ್ಕಿದವು. ನಾನು ಆ ಎಲ್ಲಾ ಅಂಶಗಳನ್ನು ಬರೆದಿಟ್ಟುಕೊಂಡಿದ್ದೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು ಆದರೆ ಕೇವಲ ಬರೆದಿಟ್ಟು ಏನೂ ಉಪಯೋಗವಿಲ್ಲ. ಸ್ವಯಂಸೂಚನೆ ಕೇವಲ ಬಾಹ್ಯಮನಸ್ಸು ಮತ್ತು ಬುದ್ದಿಯಿಂದ ತೆಗೆದುಕೊಳ್ಳುವುದು ಬೇಡ, ಅದು ಅಂತರ್‌ಮನಸ್ಸಿಗೆ ತಲುಪಬೇಕು. ಅರ್ಥವಾಯಿತೇ ? ಅಂದರೆ ಬೇಗನೆ ಹೊರಗೆ ಬರಬಹುದು.

ಶ್ರೀ. ಅಗ್ನಿವಲ್ಲಭ : ಹೌದು ಗುರುದೇವ.