‘ಅಹಂಭಾವದಿಂದಾದ ಒಳ್ಳೆಯ ಕೃತಿಯೂ ದೇವರಿಗೆ ಇಷ್ಟವಾಗುವುದಿಲ್ಲ’, ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಒಂದು ಪ್ರಸಂಗದಿಂದ ಕಲಿಸಿದುದರಿಂದ ಅಹಂ ನಿರ್ಮೂಲನೆಯ ಮಹತ್ವ ಮನಸ್ಸಿನಲ್ಲಿ ಮೂಡುವುದು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಂಚಿಕೆ ಕ್ರ. ೨೫/೩೦ ರಲ್ಲಿ ಮುದ್ರಿಸಿದ ಸದ್ಗುರು ರಾಜೇಂದ್ರ ಶಿಂದೆಯವರ ಲೇಖನದಲ್ಲಿ ‘ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಿಗೆ ನಾಮಜಪದ ಉಪಾಯವನ್ನು ಮಾಡುವಾಗ ‘ಪರಾತ್ಪರ ಗುರು ಡಾ. ಆಠವಲೆಯವರೇ ಮಾಡುವವರು-ಮಾಡಿಸುವವರು ಆಗಿದ್ದಾರೆ’ ಎಂಬ ಅರಿವಾಗಿ ಅಹಂ ಹೆಚ್ಚಾಗದಿರುವುದರ ಬಗ್ಗೆ ಓದಿದ್ದೆವು.

ಈ ಸಂಚಿಕೆಯಲ್ಲಿ ‘ಭಾವವಿದ್ದಲ್ಲಿ ದೇವರು’ ಅಥವಾ ದೇವರಿಗೆ ಭಾವದ ಹಸಿವಿರುತ್ತದೆ’, ಎಂಬುದನ್ನು ನಾವು ಕೇಳಿದ್ದೇವೆ. ದೇವರಿಗೆ ಭಾವವಿರುವ ವ್ಯಕ್ತಿ ಹೆಚ್ಚು ಇಷ್ಟವಾಗುತ್ತಾನೆ;  ತದ್ವಿರುದ್ಧ ಅಹಂಭಾವ ಇರುವ ವ್ಯಕ್ತಿಗಳನ್ನು ದೇವರು ದೂರವಿಡುತ್ತಾರೆ. ‘ಅಹಂಭಾವದ ಪ್ರವಾಹ ಅಂದರೆ ದೇವರಿಂದ ದೂರ’, ಎಂಬುದನ್ನು ಯಾವಾಗಲೂ ಗಮನದಲ್ಲಿಡಬೇಕು. ಬಹಳಷ್ಟು ಸಲ ಸಾಧಕರು ಸೇವೆಗೆ (ಕಾರ್ಯಕ್ಕೆ) ಹೆಚ್ಚು ಗಮನ ಕೊಡುತ್ತಾರೆ; ಆದರೆ ಅವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನದತ್ತ ಗಂಭೀರವಾಗಿ ನೋಡುವುದಿಲ್ಲ. ಚೆನ್ನೈಯಲ್ಲಿನ ಒಂದು ದೊಡ್ಡ ಕಾರ್ಯಕ್ರಮದ ಸಮಯದಲ್ಲಿ ಅನುಭವಿಸಿದ ಒಂದು ಪ್ರಸಂಗದಿಂದ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡದಿದ್ದರೆ ‘ವ್ಯಕ್ತಿಯು ದೇವರಿಂದ ಹೇಗೆ ದೂರ ಹೋಗುತ್ತಾನೆ ?’, ಎಂಬುದು ನನ್ನ ಗಮನಕ್ಕೆ ಬಂದಿತು. 

(ಭಾಗ ೧೦)

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/112843.html

 

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೧. ದೊಡ್ಡ ಕಾರ್ಯಕ್ರಮದ ಸೇವೆಗಾಗಿ ಚೆನ್ನೈಗೆ ಹೋದಾಗ ಅಲ್ಲಿ ಓರ್ವ ಗಣ್ಯ ವ್ಯಕ್ತಿಯ ಪರಿಚಯವಾಯಿತು ಹಾಗೂ ಅವರಿಗೆ ಸನಾತನ ಸಂಸ್ಥೆಯ ಕಾರ್ಯ ಇಷ್ಟವಾಯಿತು

ಏಪ್ರಿಲ್‌ 2009 ರಲ್ಲಿ ಚೆನ್ನೈ (ತಮಿಳುನಾಡು)ಯಲ್ಲಿ ಮೊದಲ ಬಾರಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದಕ್ಕಾಗಿ ನಾನು ಅಲ್ಲಿಗೆ ಹೋಗಿದ್ದೆ; ಆದರೆ ಅಲ್ಲಿ ಅತ್ಯಲ್ಪ ಅಂದರೆ ೫-೬ ಜನ ಸಾಧಕರಷ್ಟೇ ಇದ್ದರು. ‘ಇಷ್ಟು ಕಡಿಮೆ ಸಾಧಕರಿಂದ ಕಾರ್ಯಕ್ರಮದ ಪ್ರಚಾರವನ್ನು ಹೇಗೆ ಮಾಡುವುದು ?’, ಎನ್ನುವ ವಿಷಯವನ್ನು ನಾನು ಅಭ್ಯಾಸ ಮಾಡುತ್ತಿದ್ದೆ. ಅದೇ ವೇಳೆಗೆ ನಮಗೆ ಓರ್ವ ಸಂಜೆ ದೈನಿಕದ ಸಂಪಾದಕರ ಭೇಟಿಯಾಯಿತು. ‘ಆ ಸಂಪಾದಕರು ತಮಿಳುನಾಡು ಸರಕಾರದಲ್ಲಿ ಒಂದು ದೊಡ್ಡ ಹುದ್ದೆಯಲ್ಲಿದ್ದರು. ಅವರು ಗಣ್ಯ ವ್ಯಕ್ತಿ ಆಗಿದ್ದ ಕಾರಣ ಸಮಾಜದಲ್ಲಿ ಅವರಿಗೆ ಬಹಳಷ್ಟು ಜನರ ಪರಿಚಯವಿದೆ’, ಎಂದು ನಮಗೆ ತಿಳಿಯಿತು. ನಾವು ಅವರನ್ನು ಭೇಟಿಯಾದೆವು. ಅವರಿಗೆ ಕಾರ್ಯಕ್ರಮದ ಸಂಕಲ್ಪನೆ ಮತ್ತು ಸನಾತನ ಸಂಸ್ಥೆಯ ಕಾರ್ಯ ತುಂಬಾ ಇಷ್ಟವಾಯಿತು.

೨. ಗಣ್ಯ ವ್ಯಕ್ತಿ ಕಾರ್ಯಕ್ರಮಕ್ಕೆ ಮಾಡಿದ ಸಹಾಯ !

ಚೆನ್ನೈಯಲ್ಲಿ ಸನಾತನ ಸಂಸ್ಥೆಯ ಕಾರ್ಯ ಆರಂಭವಾಗಿರದ ಕಾರಣ ನಮಗೆ ಕಾರ್ಯಕ್ರಮದ ಪ್ರಚಾರ ಮಾಡುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು. ದೇವರು ಆ ಗಣ್ಯ ವ್ಯಕ್ತಿಯ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಆ ಸಮಸ್ಯೆಯನ್ನು ಪರಿಹರಿಸಿದನು.

ಅ. ಆ ಗಣ್ಯ ವ್ಯಕ್ತಿ ತಮ್ಮ ವರ್ತಮಾನ ಪತ್ರಿಕೆಯಲ್ಲಿ ಆ ದೊಡ್ಡ ಕಾರ್ಯಕ್ರಮದ ವಿಷಯದಲ್ಲಿ ಪುಟ ತುಂಬ ಲೇಖನ ಬರೆದರು, ಹಾಗೂ ಸನಾತನ ಪಂಚಾಂಗ ಮತ್ತು ಪ.ಪೂ. ಡಾಕ್ಟರರ ವಿಷಯದಲ್ಲಿಯೂ ದೊಡ್ಡ ಲೇಖನ ಬರೆದರು.

ಆ. ಅವರು ನಮಗೆ ಸಮಾಜದ ಕೆಲವು ಒಳ್ಳೆಯ ವ್ಯಕ್ತಿಗಳ ಸಂಪರ್ಕ ಕ್ರಮಾಂಕಗಳನ್ನು ನೀಡಿದರು. ನಮಗೆ ಪ್ರಚಾರಕ್ಕಾಗಿ ಅದು ತುಂಬಾ ಉಪಯೋಗವಾಯಿತು.

ಇ. ಅಲ್ಲಿ ನಾವು ಕಾರ್ಯಕ್ರಮದ ಪ್ರಚಾರಕ್ಕಾಗಿ ಜಿಜ್ಞಾಸುಗಳಿಗಾಗಿ ಕರೆದ ಸಭೆಯಲ್ಲಿಯೂ ಅವರು ಮುಂದಾಳತ್ವ ವಹಿಸಿ ಒಳ್ಳೆಯ ರೀತಿಯಲ್ಲಿ ವಿಷಯವನ್ನು ಮಂಡಿಸಿದರು.

ಈ. ಅವರು ಕಾರ್ಯಕ್ರಮದ ದಿನ ಬೆಳಗ್ಗೆ ಸಾಧಕರಿಗಾಗಿ ಉಪಾಹಾರ ಮತ್ತು ಚಹಾದ ವ್ಯವಸ್ಥೆಯನ್ನೂ ನಾವು ಉಳಿದುಕೊಂಡಿರುವ ಸ್ಥಳಕ್ಕೆ ಬಂದು ಮಾಡಿದರು.

ಉ. ಚೆನ್ನೈಯ ಕಾರ್ಯಕ್ರಮದಲ್ಲಿ ವಕ್ತಾರರಾಗಿ ಮಾತನಾಡಿದರು.

೩. ಗಣ್ಯ ವ್ಯಕ್ತಿಯಲ್ಲಿ ತುಂಬಾ ಅಹಂ ಇದ್ದ ಕಾರಣ ಸಾಧಕರಿಗೆ ಅವರೊಂದಿಗೆ ಮಾತನಾಡಲೂ ಅಡಚಣೆಯಾಗುವುದು

ಆ ಗಣ್ಯ ವ್ಯಕ್ತಿಯು ನಮಗೆ ತುಂಬಾ ಸಹಾಯ ಮಾಡಿದರು; ಆದರೆ ಆ ವ್ಯಕ್ತಿಯಲ್ಲಿ ತುಂಬಾ ಅಹಂ ಇತ್ತು. ‘ಅವರು ಹೇಳಿದಂತೆಯೇ ಆಗಬೇಕು’, ಎಂದು ಅವರಿಗೆ ಅನಿಸುತ್ತಿತ್ತು. ಅವರ ಮಾತಿನಲ್ಲಿ ತುಂಬಾ ಅಧಿಕಾರವಾಣಿಯ ಅರಿವಾಗುತ್ತಿತ್ತು. ಅದರಿಂದ ಕೆಲವೊಮ್ಮೆ ನಮಗೆ ಅವರೊಂದಿಗೆ ಸಂಭಾಷಣೆ ಮಾಡಲು ಅಡಚಣೆಯಾಗುತ್ತಿತ್ತು.

೪. ಗಣ್ಯ ವ್ಯಕ್ತಿಯಲ್ಲಿ ತುಂಬಾ ಅಹಂ ಇರುವುದರಿಂದ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಅವರ ಭೇಟಿಯಾಗಲು ಸಾಧ್ಯವಾಗದಿರುವುದು

ಗುರುದೇವರ ಕೃಪೆಯಿಂದ ಚೆನ್ನೈಯ ಕಾರ್ಯಕ್ರಮ ತುಂಬಾ ಚೆನ್ನಾಗಿ ನೆರವೇರಿತು. ಆ ಕಾರ್ಯಕ್ರಮದ ನಂತರ ಆ ವ್ಯಕ್ತಿಯ ಮನಸ್ಸಿನಲ್ಲಿ ಪ.ಪೂ. ಡಾಕ್ಟರರನ್ನು ಭೇಟಿಯಾಗುವ ಉತ್ಸಾಹ ಮೂಡಿತು. ಕಾರ್ಯಕ್ರಮ ಮುಗಿದ ನಂತರ ಅವರು ನನಗೆ ಹೇಳಿದರು, ”ನಾನು ಡಾಕ್ಟರರನ್ನು ಭೇಟಿಯಾಗಲು ಸನಾತನದ ರಾಮನಾಥಿ ಆಶ್ರಮಕ್ಕೆ ಹೋಗುತ್ತೇನೆ. ನನಗೆ ಹೋಗುವ ವ್ಯವಸ್ಥೆ ಮಾಡಿರಿ’’ ನಾನು ಸಚ್ಚಿದಾನಂದ ಪರಬ್ರಹ್ಮ ಗುರುದೇವರಿಗೆ ಸಾಧಕರ ಮೂಲಕ ಸಂದೇಶ ಕಳಿಸಿದೆನು, ”ಆ ಗಣ್ಯ ವ್ಯಕ್ತಿ ನಿಮ್ಮನ್ನು ಭೇಟಿಯಾಗಲು ಇಚ್ಛಿಸುತ್ತಾನೆ.’ ಆಗ ಅವರು ಆ ಸಾಧಕನ ಮೂಲಕ ಸಂದೇಶ ಕಳಿಸಿದರು, ”ಅವರಿಗೆ ಮೊದಲು ಸನಾತನ-ನಿರ್ಮಿತ ‘ಅಹಂ-ನಿರ್ಮೂಲನೆಗಾಗಿ ಸಾಧನೆ’ ಈ ಗ್ರಂಥವನ್ನು ಓದಲು ಕೊಡಿ, ಅವರು ಅದರ ಅಭ್ಯಾಸ ಮಾಡಲಿ. ನಂತರ ನಾವು ಭೇಟಿಯ ವಿಚಾರ ಮಾಡೋಣ’, ಎಂದು ಹೇಳಿದರು.’’ ಅದಕ್ಕನುಸಾರ ಸಾಧಕರು ಅವರಿಗೆ ಆ ಗ್ರಂಥವನ್ನು ಉಡುಗೊರೆಯಾಗಿ ಕೊಟ್ಟರು. ೨೦೧೪ ರಲ್ಲಿ ಅವರು ನಿಧನರಾಗುವವರೆಗೂ ಅವರಿಗೆ ಪ.ಪೂ. ಗುರುದೇವರ ಭೇಟಿ ಮಾಡಲು ಸಾಧ್ಯವಾಗಲೇ ಇಲ್ಲ !

೫. ‘ದೇವರಿಗೆ ಅಹಂಭಾವದಿಂದ ಮಾಡಿದ ಕೃತಿ ಇಷ್ಟವಾಗುವುದಿಲ್ಲ, ಭಾವಪೂರ್ಣ ಸೇವೆಯೇ ದೇವರ ಚರಣಗಳಿಗೆ ತಲುಪುತ್ತದೆ’, ಎಂಬುದು ಅರಿವಾಗುವುದು

ಈ ಮೇಲಿನ ಪ್ರಸಂಗದಿಂದ ನನಗೇನು ಅರಿವಾಯಿತೆಂದರೆ, ‘ನಾವು ಎಷ್ಟೇ ಒಳ್ಳೆಯ ಕೃತಿ ಮಾಡಿದರೂ, ನಾವು ಅದನ್ನು ಅಹಂಭಾವದಿಂದ ಮಾಡಿದರೆ, ಅದು ದೇವರಿಗೆ ಇಷ್ಟವಾಗುವುದಿಲ್ಲ. ಭಾವಪೂರ್ಣ ಸೇವೆಯೇ ದೇವರ ಚರಣಗಳಿಗೆ ತಲುಪುತ್ತದೆ; ಆದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಯಾವಾಗಲೂ ಹೇಳುತ್ತಾರೆ, ”ನೀವು ಯಾವ ಕೃತಿ ಮಾಡುತ್ತೀರಿ, ಅದು ಮಹತ್ವದ್ದಲ್ಲ; ಆ ಕೃತಿಯ ಹಿಂದಿನ ಭಾವ ಹೇಗಿದೆ ?’, ಅದನ್ನು ದೇವರು ನೋಡುತ್ತಾರೆ.’’

೬. ‘ಸ್ವಭಾವದೋಷ ಮತ್ತು ಅಹಂ ಮನಸ್ಸಿಗೆ ಅರಿವಾಗಲು ಮತ್ತು ಅವುಗಳನ್ನು ದೂರಗೊಳಿಸಲು ಸೇವೆಯು ಮಾಧ್ಯಮವಾಗಿದೆ’, ಅದಕ್ಕಾಗಿ ಸ್ವಭಾವದೋಷ ಮತ್ತು ಅಹಂ ದೂರಗೊಳಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ

ಈ ಮೇಲಿನ ಪ್ರಸಂಗದಿಂದ ‘ಈ ಸೇವೆಯ ಮೂಲಕ ದೇವರು ನನಗೆ ಏನು ಕಲಿಸಲಿಕ್ಕಿದ್ದಾರೆ ? ಅಥವಾ ‘ಈ ಸೇವೆ ಮಾಡುವಾಗ ನನ್ನ ಯಾವ ಸ್ವಭಾವದೋಷ ಮತ್ತು ಅಹಂನ ಲಕ್ಷಣ ಪ್ರಕಟವಾಗುತ್ತಿದೆ’, ಎಂಬುದರ ಕಡೆಗೆ ಗಮನ ಹರಿಸಿ ಅದನ್ನು ದೂರಗೊಳಿಸಲು ಪ್ರಯತ್ನಿಸಬೇಕು. ಸ್ವಭಾವದೋಷ ಮತ್ತು ಅಹಂ ದೂರಗೊಳಿಸಿದರೆ ಬೇಗನೆ ಶ್ರೀ ಗುರುಗಳ ಸಮೀಪ ಹೋಗಬಹುದು’, ಎಂಬುದು ನನಗೆ ಕಲಿಯಲು ಸಿಕ್ಕಿತು. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪ ಗಳು ಕೃತಜ್ಞತಾಭಾವದಿಂದ ಅವರ ಚರಣಗಳಿಗೆ ಸಮರ್ಪಣೆ !

(ಮುಂದುವರಿಯುವುದು)

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ಪನವೇಲ. (೪.೯.೨೦೨೩)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.