ಕಲಿಯುಗದಲ್ಲಿ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಇವೆಲ್ಲವು ಸಾಧನಾಮಾರ್ಗದ ಅಡಿಪಾಯ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಹಿಂದಿನ ಕಾಲದಲ್ಲಿ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಹೆಚ್ಚು ಪ್ರಮಾಣದಲ್ಲಿರುತ್ತಿತ್ತು. ಅವರಲ್ಲಿ ಸ್ವಭಾವದೋಷ ಮತ್ತು ಅಹಂನ ಪ್ರಮಾಣ ಕಡಿಮೆ ಇರುತ್ತಿತ್ತು. ಆದ್ದರಿಂದ ಮೂಲದಲ್ಲಿಯೇ ವ್ಯಕ್ತಿಯು ಸಾತ್ತ್ವಿಕ ವೃತ್ತಿಯಾಗಿರುವುದರಿಂದ ಅವರಿಗೆ ಸಾಧನೆ ಮಾಡಲು ಸಹಜವಾಗಿ ಸಾಧ್ಯವಾಗುತ್ತಿತ್ತು.

ಕಲಿಯುಗದಲ್ಲಿ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಬಹಳ ಕಡಿಮೆ ಇರುತ್ತದೆ. ಅದರೊಂದಿಗೆ ಅವನ ಸ್ವಭಾವದೋಷ ಮತ್ತು ಅಹಂನ ತೀವ್ರತೆಯೂ ಹೆಚ್ಚು ಇರುತ್ತದೆ. ಆದ್ದರಿಂದ ಇತ್ತೀಚಿನ ಕಾಲದಲ್ಲಿ ಯಾವುದೇ ಸಾಧನಾಮಾರ್ಗದಿಂದ ಸಾಧನೆಯನ್ನು ಮಾಡುವುದಾದರೂ ಸಾಧನೆಗೆ ಆವಶ್ಯಕವಿರುವ ಮೂಲಭೂತ ಸಾತ್ತ್ವಿಕತೆಯನ್ನು ಹೆಚ್ಚಿಸುವುದು ಆವಶ್ಯಕವಾಗಿದೆ ಇದು ಕೇವಲ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆಯಿಂದಲೇ ಆಗಲು ಸಾಧ್ಯ. ಆದ್ದರಿಂದ ಕಲಿಯುಗದಲ್ಲಿ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆಯು ಎಲ್ಲ ಸಾಧನಾಮಾರ್ಗಗಳ ಅಡಿಪಾಯವಾಗಿದೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ