ಕೆಟ್ಟ ಕಾಲವು ಬರುತ್ತಿರುವುದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಆದಷ್ಟು ಬೇಗ ಮಾಡುವುದು ಆವಶ್ಯಕವಾಗಿದೆ !
ಕು. ಸುಪ್ರಿಯಾ ಜಠಾರ : ನಾನು ಕಳೆದ ೨ ವರ್ಷಗಳಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು (ಟಿಪ್ಪಣಿ) ಮಾಡುತ್ತಿದ್ದೇನೆ ಮತ್ತು ಈಗಲೂ ಮಾಡುತ್ತಿದ್ದೇನೆ. ನನಗನಿಸುತ್ತದೆ, ‘ನಾನು ಕಳೆದ ಎರಡು ವರ್ಷಗಳಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡುತ್ತಿದ್ದೇನೆ ಆದರೆ ಆಧ್ಯಾತ್ಮಿಕ ತೊಂದರೆಯಿಂದಾಗಿ ನನಗೆ ಅದು ಸರಿಯಾಗಿ ತಿಳಿದಿರಲಿಲ್ಲ. ಈಗ ಆ ಪ್ರಕ್ರಿಯೆಯನ್ನು ಮಾಡುವಾಗ ಎಲ್ಲವೂ ತಿಳಿಯುತ್ತಿದೆ’, ಎಂದು ನನಗೆ ಅರಿವಾಗುತ್ತದೆ.
(ಟಿಪ್ಪಣಿ – ನಮ್ಮಲ್ಲಿನ ಸ್ವಭಾವದೋಷಗಳು ಮತ್ತು ಅಹಂನ ನಿರ್ಮೂಲನೆಯನ್ನು ಮಾಡಲು ದಿನವಿಡಿ ನಮ್ಮಿಂದಾದ ತಪ್ಪುಗಳನ್ನು ಪುಸ್ತಕದಲ್ಲಿ ಬರೆದು ಅದರ ಮುಂದೆ ‘ಆ ತಪ್ಪು ಯಾವ ಸ್ವಭಾವದೋಷಗಳಿಂದ ಘಟಿಸಿತು ?’, ಎಂದು ಬರೆಯಬೇಕು ಮತ್ತು ‘ಆ ರೀತಿಯ ತಪ್ಪು ಮತ್ತೊಮ್ಮೆ ಘಟಿಸಬಾರದು’, ಎಂದು ಅದರ ಮುಂದೆ ಯೋಗ್ಯ ದೃಷ್ಟಿಕೋನವಿರುವ ಸೂಚನೆಯನ್ನು ಬರೆದು ಅದನ್ನು ದಿನದಲ್ಲಿ ೧೦-೧೨ ಸಲ ಮನಸ್ಸಿಗೆ ಸತತ ನೀಡುತ್ತಿರಬೇಕು.)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಸರಿಯಾಗಿದೆ. ತೊಂದರೆಯಿಂದಾಗಿಯೇ ಹಾಗೆ ಆಗುತ್ತದೆ, ಅಂದರೆ ಈಗ ತೊಂದರೆ ಕಡಿಮೆ ಆಗಿದೆ.
ಕು. ಸುಪ್ರಿಯಾ ಜಠಾರ : ಹೌದು, ತೊಂದರೆ ಮೊದಲಿಗಿಂತಲೂ ಬಹಳ ಕಡಿಮೆಯಾಗಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹಾಗಾದರೆ ಈಗ ಬೇಗನೆ ಮುಂದೆ ಹೋಗುವೆ.
ಕು. ಸುಪ್ರಿಯಾ ಜಠಾರ : ಪರಮ ಪೂಜ್ಯ, ಈಗ ನನ್ನ ಮನಸ್ಸಿನಲ್ಲಿ, ‘ನಾನು ಮಾಡುತ್ತಿರುವ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಶೀಘ್ರ ಗತಿಯಲ್ಲಿ ಮಾಡಬೇಕು. ನನ್ನ ಚಿತ್ತ ಆದಷ್ಟು ಬೇಗನೆ ಶುದ್ಧವಾಗಬೇಕು’, ಎಂಬ ವಿಚಾರ ಬರುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇದು ಒಳ್ಳೆಯ ವಿಚಾರವಾಗಿದೆ. ಕೆಟ್ಟ ಕಾಲವು ಬಹಳ ಬೇಗನೇ ಬರುತ್ತಿದೆಯಲ್ಲವೇ; ಆದುದರಿಂದ ಚಿತ್ತವು ಆದಷ್ಟು ಬೇಗನೆ ಶುದ್ಧವಾಗಲೇಬೇಕು. ಯಾವ ವಿಚಾರ ಬಂದಿದೆಯೋ, ಅದಕ್ಕೆ ಸ್ವಯಂಸೂಚನೆಯನ್ನೂ ನೀಡು.
ಕು. ಸುಪ್ರಿಯಾ ಜಠಾರ : ಅಂದರೆ ಸ್ವಯಂಸೂಚನೆಯನ್ನು ಯಾವ ಸಂದರ್ಭದಲ್ಲಿ ಕೊಡಬೇಕು ?
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ಈಗ ಚಿತ್ತವು ಬೇಗನೆ ಶುದ್ಧವಾಗಬೇಕು’, ಎಂಬ ವಿಚಾರ ನಿನ್ನ ಮನಸ್ಸಿನಲ್ಲಿ ಬರುತ್ತದೆಯಲ್ಲವೇ, ಹಾಗಾದರೆ ಅದಕ್ಕೆ ವಾಕ್ಯವನ್ನು ಜೋಡಿಸು, ‘ಈಗ ಕೆಟ್ಟ ಕಾಲವು ಬೇಗನೆ ಬರುತ್ತಿದೆ; ಆದುದರಿಂದ ನಾನು ಚಿತ್ತಶುದ್ಧಿಯ ಪ್ರಯತ್ನವನ್ನು ಆದಷ್ಟು ಬೇಗನೆ ಹೆಚ್ಚಿಸಬೇಕು.’