‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !

ಸೌ. ಸುಪ್ರಿಯಾ ಮಾಥೂರ

೨೦೧೯ ರಲ್ಲಿ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಬಂದಿದ್ದರು. ಸೌ. ಸುಪ್ರಿಯಾ ಮಾಥೂರರು  (ಆಧ್ಯಾತ್ಮಿಕ ಮಟ್ಟ ಶೇ. ೬೭) ಪೂರ್ಣವೇಳೆ ಸಾಧನೆ ಮಾಡುವವರಿಗೆ ಪ್ರಕ್ರಿಯೆಯನ್ನು ಮಾಡಿಸುತ್ತಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಹಾಗೂ ಇತರ ಸಾಧಕರಿಂದಾದ ತಪ್ಪುಗಳು ಹಾಗೂ ಮನಸ್ಸಿನ ಪ್ರಕ್ರಿಯೆಯ ಪ್ರಸಂಗಗಳನ್ನು ಅವರು ಹೇಳಿದಾಗ ಸೌ. ಸುಪ್ರಿಯಾ ಮಾಥೂರರು ಸಾಧಕರಿಗೆ ಮುಂದಿನ ದೃಷ್ಟಿಕೋನವನ್ನು ನೀಡಿದರು. ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಪ್ರಕ್ರಿಯೆ ಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ಕೊಡಲಾಗಿದೆ.  ೨೫/೨೮ ನೇ ಸಂಚಿಕೆಯಲ್ಲಿ ಅದರ ಕೆಲವು ಭಾಗ ನೋಡಿದೆವು ಈ ವಾರದ ಅದರ ಮುಂದಿನ ಭಾಗ ನೋಡೋಣ. 

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/111708.html

ಭಾಗ ೪

ಶ್ರೀಮತಿ ಅಶ್ವಿನಿ ಪ್ರಭು

೯. ಪ್ರಸಂಗ – ಕ್ಷಮೆ ಯಾಚನೆ ಮತ್ತು ಪ್ರಾಯಶ್ಚಿತ್ತ

೯ ಅ. ದೃಷ್ಟಿಕೋನ

೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಎಂದರೆ ಸಾಧನೆಯ ವೇಗ ಹೆಚ್ಚಿಸಲು ಈಶ್ವರನು ನೀಡಿರುವ ಅಮೂಲ್ಯ ಅವಕಾಶವಾಗಿದೆ; ಆದರೆ ಈ ಪ್ರಕ್ರಿಯೆಯಲ್ಲಿ ಕಲಿಯು ವುದಕ್ಕಿಂತಲೂ ಅಧಿಕಾರವಾಣಿ ಮತ್ತು ಇತರರಿಗೆ ಕಲಿಸುವುದು ಈ ಸ್ವಭಾವದೋಷವಿದ್ದರೆ ಏನೂ ಸಾಧಿಸಲು ಆಗುವುದಿಲ್ಲಿ.

೨. ಕ್ಷಮೆ ಯಾಚನೆಯಲ್ಲಿ ಕೂಡ ಪರಿಸ್ಥಿತಿ ಹೇಳಿ ಕ್ಷಮೆ ಯಾಚಿಸುವುದು ಎಂದರೆ ಸ್ಪಷ್ಟೀಕರಣವೇ ಆಯಿತು. ಉದಾ. ನನ್ನ ಮಾತಿನಿಂದ ನಿಮಗೆ ಬೇಸರ ಅನಿಸಿದರೆ ಕ್ಷಮಿಸಿ, ಇಂತಹ ಮೇಲು ಮೇಲಿನ ಕ್ಷಮೆಯಾಚನೆ ಅಂತಃಕರಣದಿಂದ ಆಗುವುದಿಲ್ಲ. ಕ್ಷಮೆ ಯಾಚನೆಯು ದೋಷರಹಿತ ಮತ್ತು ಅದರಲ್ಲಿ ಯಾಚನೆ ಇರಬೇಕು.

೩. ಪ್ರತಿಯೊಂದು ತಪ್ಪಿಗೆ ಕಠೋರ ಪ್ರಾಯಶ್ಚಿತ್ತ ತೆಗೆದುಕೊಂಡರೆ, ಪ್ರಯತ್ನದಲ್ಲಿ ವೇಗ ಬರಬಹುದು. ಸ್ಥಿತಿಯನ್ನು ಅರಿವು ಮಾಡಿ ಕೊಟ್ಟರೂ ಅರಿವಾಗದಿರುವುದು ಅಂದರೆ ಸಾಧನೆಯ ಸ್ಥಿತಿ ಗಂಭೀರವಾಗಿದೆ, ಎಂದು ತಿಳಿದು ಪ್ರಯತ್ನಿಸಬೇಕು.

೧೦. ಪ್ರಸಂಗ – ಸಾಧನೆಯ ಸಂಸ್ಕಾರವಾಗಲು ಪ್ರಯತ್ನಿಸಬೇಕು

೧೦ ಅ. ದೃಷ್ಟಿಕೋನ

೧. ಏನಾದರೂ ಸಾಧಿಸಬೇಕಾದರೆ ಅದಕ್ಕೆ ಪ್ರಯತ್ನದ ಜೋಡಣೆ ಇರಬೇಕು. ಕೇವಲ ವಿಚಾರದಿಂದ ಧ್ಯೇಯ ಸಾಧ್ಯವಾಗುವುದಿಲ್ಲ. ಉದಾ. ಮಕ್ಕಳು ಒಳ್ಳೆಯ ರೀತಿ ಅಭ್ಯಾಸ ಮಾಡಬೇಕು, ಈ ರೀತಿ ವಿಚಾರ ಅವರ ಮುಂದೆ ಮಂಡಿಸಿ ನಾವು ಅವರ ಎದುರೇ ಟಿವಿ ನೋಡುತ್ತಾ ಕುಳಿತುಕೊಂಡರೆ, ಆಗ ಸಾಧ್ಯವಾಗುವುದೇ ? ಅಂತಹ ಸಮಯದಲ್ಲಿ ಟಿವಿಯನ್ನು ನಿಲ್ಲಿಸಿ ಅವರಲ್ಲಿ ಅಭ್ಯಾಸ ಮಾಡುವ ಸಂಸ್ಕಾರವನ್ನು ನಾವೇ ಮೂಡಿಸಬೇಕಾಗುತ್ತದೆ.

೨. ನನಗೆ ಪ್ರಯತ್ನ ಮಾಡಬೇಕೆಂಬ ವಿಚಾರ ಇದೆ; ಆದರೆ ಪ್ರತ್ಯಕ್ಷದಲ್ಲಿ ಪ್ರಯತ್ನ ಇಲ್ಲ. ಪ್ರಯತ್ನ ಏಕೆ ಆಗುವುದಿಲ್ಲ ? ಇದರ ಕಡೆ ಗಾಂಭೀರ್ಯದಿಂದ ಗಮನ ನೀಡಬೇಕು.

೩. ಪ್ರತಿಯೊಂದು ಕ್ಷಣ ನನಗಾಗಿ ಗುರುಪೂರ್ಣಿಮೆಯೇ ಆಗಿದೆ. ಗುರುಪೂರ್ಣಿಮೆಗೆ ನಿರಂತರ ನಾಮಜಪ ಆಗಬೇಕು, ಹೀಗೆ ಅನಿಸುತ್ತಿದ್ದರೆ  ನಾಮಜಪದ ಸಂಸ್ಕಾರ ಆಗಬೇಕೆಂದು ಸಂಪೂರ್ಣ ವರ್ಷವಿಡೀ ಪ್ರಯತ್ನ ಮಾಡಬೇಕಾಗುತ್ತದೆ. ಆದ್ದರಿಂದ ಈಶ್ವರನ ಅನುಸಂಧಾನದಲ್ಲಿ ಇರುವುದು ಸಾಧ್ಯವಾಗುತ್ತದೆ .

೪. ಇಡೀ ವರ್ಷ ಈಶ್ವರನ ಸಮಷ್ಟಿಯಲ್ಲಿ ಸಮರ್ಪಿತರಾಗ ಬೇಕು ? ಹೀಗೆ ವಿಚಾರ ಸತತ ಇದ್ದರೆ ಮಾತ್ರ ಕೃತಿಯ ಸ್ತರದ ಪ್ರಯತ್ನಗಳಿಗೆ ವೇಗ ಸಿಗುತ್ತದೆ. ನಕಾರಾತ್ಮಕ ವಿಚಾರದಿಂದ ಈಶ್ವರ ಏನು ಕೊಡುತ್ತಿದ್ದಾನೆಯೋ ಅದನ್ನು ಕೂಡ ಸ್ವೀಕರಿಸಲು ಬರುವುದಿಲ್ಲ. ಎಲ್ಲರೂ ಸಾಧನೆಯ ಸಂಸ್ಕಾರ ಮಾಡಲು ಹೆಚ್ಚೆಚ್ಚು ಪ್ರಯತ್ನಿಸಬೇಕು.

೧೧. ಪ್ರಸಂಗ – ಓರ್ವ ಸಾಧಕನು ನನ್ನ ತಪ್ಪು ಹೇಳಿದರು; ಆದ್ದರಿಂದ ಪ್ರಯತ್ನಪೂರ್ವಕವಾಗಿ ಮತ್ತು ದ್ವೇಷ ಬುದ್ಧಿಯಿಂದ ಅವನ ತಪ್ಪು ಹೇಳುವುದು

೧೧ ಅ. ದೃಷ್ಟಿಕೋನ : ಪೂರ್ವಗ್ರಹದಿಂದ ಅಧೋಗತಿ ಆಗುತ್ತದೆ. ಪಾಠ ಕಲಿಸುವುದು ಅಥವಾ ಸೇಡು ಬುದ್ಧಿಯ ವಿಚಾರ ಎಷ್ಟು ಇದೆ ? ಇದರ ಅಭ್ಯಾಸ ಮಾಡಬೇಕು. ಎಲ್ಲಾ ವಿಚಾರ ಹೇಳಿ ಇತರರ ಸಹಾಯ ಪಡೆಯಬೇಕು.

೧೨. ಪ್ರಸಂಗ – ಅನೇಕ ವರ್ಷ ಒಂದೇ ಸೇವೆ ಮಾಡುವುದರಿಂದ ಸೇವೆಯಲ್ಲಿ ಅತಿಆತ್ಮವಿಶ್ವಾಸ ಮತ್ತು ಅದೇ ಅದೇ ಮಾಡಿದರಿಂದ ಸಹಭಾಗ ಮತ್ತು ಉತ್ಸಾಹ ಇಲ್ಲದಿರುವುದು

೧೨ ಅ. ದೃಷ್ಟಿಕೋನ

೧. ಅನುಭವದ ಅಹಂನಿಂದ ಪರಿಪೂರ್ಣತೆ ಕಡಿಮೆ ಆಗುತ್ತದೆ. ೧೦ ವರ್ಷಗಳಾದರೂ ಅದೇ ತಪ್ಪಾಗುವುದು ಅಕ್ಷಮ್ಯವಾಗಿದೆ.

೨. ಪ್ರಾಥಮಿಕ ಹಂತದಲ್ಲಿ ಇಂತಹ ತಪ್ಪು ಆಗಬಹುದು; ಆದರೆ ನಾವು ತಪ್ಪಿನಿಂದ ಕಲಿಯುವುದಿಲ್ಲ; ಇದು ಇದರಿಂದ ಗಮನಕ್ಕೆ ಬರುತ್ತದೆ. ನಮ್ಮ ನಂತರ ಪರಿಶೀಲನೆ ಮಾಡುವವರು ಯಾರು ಇಲ್ಲ, ಹೀಗಿದ್ದರೆ ಆ ವಿಷಯದಲ್ಲಿ ನಮ್ಮಲ್ಲಿ ಸತರ್ಕತೆ ಮತ್ತು ಜವಾಬ್ದಾರಿಯ ಅರಿವು ಎಷ್ಟು ಇದೆ ? ಇದರ ಚಿಂತನೆ ಆಗಬೇಕು.

೩. ಗಾಂಭೀರ್ಯವನ್ನು ಕೂಡ ಹೆಚ್ಚಿಸಬೇಕು. ಸೇವೆಯ ಬಗ್ಗೆ ಅಜ್ಞಾನ ಇದ್ದರೆ ಅದನ್ನು ಹೇಳಬೇಕು; ಆದರೆ ತಿಳಿದಿದ್ದರೂ ನಮ್ಮಿಂದ ತಪ್ಪುಗಳು ಆದರೆ ನಮ್ಮಲ್ಲಿ ಯಾವುದೇ ರೀತಿಯ ಪ್ರಕ್ರಿಯೆ (ಚಿಂತನ, ಮಂಥನ) ಆಗುವುದಿಲ್ಲ; ಅಂದರೆ ಸಾಧನೆ ಯಲ್ಲಾಗುವ ಹಾನಿಯನ್ನು ನಿಲ್ಲಿಸಲಾಗುವುದಿಲ್ಲ ಮತ್ತು ಅಧೋಗತಿಯ ವೇಗ ಹೆಚ್ಚುವುದು.

ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು ಸೇವಾ ಕೇಂದ್ರ, ಮಂಗಳೂರು (೧೩.೭.೨೦೧೯)