ಸಾಧಕರಲ್ಲಿನ ‘ಭಾವ ಮತ್ತು ತಳಮಳ’, ಹಾಗೆಯೇ ಅವರಲ್ಲಿನ ‘ಸ್ವಭಾವದೋಷ ಮತ್ತು ಅಹಂ’ಗಳತ್ತ ಗಮನಹರಿಸಿ ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವ ಅಲೌಕಿಕ ಪ್ರಜ್ಞೆಯ ಪರಾತ್ಪರ ಗುರು ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕಲಿಯುಗದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯ ಬಗ್ಗೆ ಸಮಾಜ ಅಜ್ಞಾನಿಯಾಗಿದೆ. ನಮ್ಮೆಲ್ಲ ಸಾಧಕರಿಗೆ ಪರಾತ್ಪರ ಗುರು ಡಾ. ಆಠವಲೆಯವರು ಪದೇ ಪದೇ ಮಾಡಿದ ಮಾರ್ಗದರ್ಶನದಿಂದ ಕೆಟ್ಟ ಶಕ್ತಿಗಳ ಸೂಕ್ಷ್ಮ ಜಗತ್ತಿನ ವಿಷಯ ತಿಳಿಯಿತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಸೂಕ್ಷ್ಮ ಜಗತ್ತಿನ ವಿಷಯದಲ್ಲಿನ ಅನುಭವವನ್ನು ಈ ಲೇಖನಮಾಲಿಕೆಯಿಂದ ನಾವು ನೋಡುತ್ತಿದ್ದೇವೆ.

೨೫/೩೨ ರ ಸಂಚಿಕೆಯಲ್ಲಿ ಈ ಲೇಖನ ಮಾಲಿಕೆಯ ಕೆಲವು ಭಾಗವನ್ನು ನೋಡಿದೆವು, ಇಂದು ಸಾಧಕರ ಸಾಧನೆ ಆಗಬೇಕು’, ಎಂದು ಅವರಿಗೆ ಹೇಗೆ ಸಹಾಯ ಮಾಡಬಹುದು ? ಎನ್ನುವ ವಿಷಯವನ್ನು ನೋಡೋಣ. 

(ಭಾಗ ೫)

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ‘ಸಾಧಕರ ಸಾಧನೆಯಾಗಬೇಕೆಂದು ಅವರಿಗೆ ಹೇಗೆ ಸಹಾಯ ಮಾಡಬೇಕು ?, ಎಂಬುದನ್ನು ಕಲಿಸುವ ಪರಾತ್ಪರ ಗುರು ಡಾ. ಆಠವಲೆ !

೧ ಅ. ಪರಾತ್ಪರ ಗುರು ಡಾ. ಆಠವಲೆಯವರು ಅನುಭೂತಿಗಳ ಅಭ್ಯಾಸ ಮಾಡಲು ಹೇಳುವುದು : ‘ಪರಾತ್ಪರ ಗುರು ಡಾ. ಆಠವಲೆಯವರು ನಮಗೆ (ಸೂಕ್ಷ್ಮಪರೀಕ್ಷಣೆ ಮಾಡುವ ಸಾಧಕರಿಗೆ), ”ನೀವು ಸಾಧನೆಯಲ್ಲಿ ಬರುವ ಅನುಭೂತಿಗಳನ್ನೂ ಅಭ್ಯಾಸ ಮಾಡಬೇಕು” ಎಂದು ಹೇಳಿದರು. ನಾವು ಹಾಗೆ ಪ್ರಯತ್ನ ಆರಂಭಿಸಿದಾಗ ನಮಗೆ ಅನೇಕ ಪ್ರಶ್ನೆಗಳಿಗೆ ಉತ್ತರಗಳು ಸಿಗಲು ಆರಂಭವಾಯಿತು, ಉದಾ. ಒಬ್ಬ ಸಾಧಕನಿಗೆ ತೊಂದರೆ ಇದ್ದರೂ, ಅವನನ್ನು ನೋಡಿದಾಗ ಒಳ್ಳೆಯದೆನಿಸುವುದು. ಇದರ ಕಾರಣವನ್ನು ಹುಡುಕಿದಾಗ ‘ಆ ಸಾಧಕನಲ್ಲಿ ಸೇವೆಯನ್ನು ಮಾಡುವ ತಳಮಳ ಚೆನ್ನಾಗಿದೆ’, ಎಂಬುದು ಅರಿವಾಯಿತು.

೧ ಆ. ಸಾಧನೆಯಲ್ಲಿ ದೇವರ ಬಗ್ಗೆ ಭಾವ, ಸಾಧನೆಯ ಬಗ್ಗೆ ತಳಮಳ, ಪ್ರೇಮಭಾವ ಮತ್ತು ಅಹಂ ಕಡಿಮೆ ಇರುವುದಕ್ಕೆ ಹೆಚ್ಚು ಮಹತ್ವವಿದೆ ಮತ್ತು ‘ಸಾಧಕರು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಾರೆ ?’, ಎಂಬುದನ್ನು ಕಂಡು ಹಿಡಿಯಲು ಪರಾತ್ಪರ ಗುರು ಡಾ. ಆಠವಲೆ ಯವರು ಹೇಳುವುದು : ಮೊದಲು ನಾವು ಸಾಧಕರಿಗೆ ಯಾವ ರೀತಿಯ ತೊಂದರೆಯಿದೆ ?’, ಎಂಬುದನ್ನು ಮಾತ್ರ ಹುಡುಕಿ ಕೊಡುತ್ತಿದ್ದೆವು. ಅನಂತರ ಪರಾತ್ಪರ ಗುರು ಡಾಕ್ಟರರು ನಮಗೆ, ”ಸಾಧನೆಯಲ್ಲಿ ದೇವರ ಬಗ್ಗೆ ಭಾವಕ್ಕೆ ತುಂಬಾ ಮಹತ್ವವಿದೆ. ಸಾಧಕನ ಅಹಂ ಕೂಡ ಕಡಿಮೆ ಇರಬೇಕು. ಸಾಧಕನಲ್ಲಿನ ‘ಸಾಧನೆಯ ತಳಮಳ ಮತ್ತು ಪ್ರೇಮಭಾವ’ ಈ ಗುಣಗಳೂ ಮಹತ್ವದ್ದಾಗಿವೆ. ಸಾಧಕರಲ್ಲಿನ ಈ ಘಟಕಗಳ ಪರೀಕ್ಷಣೆ ಮಾಡಿ ‘ಅವನು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದಾನೆ ?’, ಇದನ್ನೂ ಅವನಿಗೆ ಹೇಳಿರಿ. ಸಾಧಕನ ಸಾಧನೆ ಹೆಚ್ಚಾದಾಗ ತನ್ನಿಂತಾನೇ ಅವನ ತೊಂದರೆಗಳೂ ಕಡಿಮೆಯಾಗುತ್ತಾ ಹೋಗುತ್ತವೆ” ಎಂದು ಹೇಳಿದರು. ನಮ್ಮಿಂದ ಈ ರೀತಿ ವಿಚಾರವಾಗಿರಲಿಲ್ಲ.

೧ ಇ. ಸಾಧಕನ ಸಾಧನೆಯ ವರದಿಯನ್ನು ತೆಗೆದುಕೊಳ್ಳುವ ಹೊಸ ಉಪಾಯಪದ್ಧತಿಯ ಉದಯ : ನಾವು ಸಾಧಕನಲ್ಲಿ ಎಷ್ಟು ಶೇಕಡಾ ಭಾವ, ತಳಮಳ ಮತ್ತು ಅಹಂ ಇದೆ ?’, ಎಂಬುದರ ಪರೀಕ್ಷಣೆ ಮಾಡಿ ಆ ಸಾಧಕನಿಗೆ ಆವಶ್ಯಕವಿರುವ ಘಟಕದ ಮೇಲೆ ಹೆಚ್ಚು ಗಮನಹರಿಸಲು ಹೇಳುತ್ತಿದ್ದೆವು. ಸಾಧಕನು ಅದಕ್ಕನುಸಾರ ಕೃತಿ ಮಾಡಿದಾಗ ಅವನ ಸಾಧನೆಯಲ್ಲಿ ವೃದ್ಧಿಯಾಗಿ ಅವನಿಗೆ ಆನಂದ ಸಿಗುತ್ತಿತ್ತು. ಪರಾತ್ಪರ ಗುರು ಡಾಕ್ಟರರು ಸಾಧಕನಿಗಿರುವ ಆಧ್ಯಾತ್ಮಿಕ ತೊಂದರೆಯ ಶೇಕಡಾವಾರು ಮತ್ತು ಸಾಧಕನಲ್ಲಿನ ‘ಭಾವ, ತಳಮಳ ಮತ್ತು ಅಹಂ’ ಇವುಗಳ ಶೇಕಡಾವಾರಿಗೆ ಅಷ್ಟೇ ಮಹತ್ವ ನೀಡಲು ಪ್ರಾರಂಭಿಸಿದರು. ಇದರಿಂದ ಸಾಧಕನ ಸಾಧನೆಯ ವರದಿ ತೆಗೆದುಕೊಳ್ಳುವ ಈ ಹೊಸ ಉಪಾಯಪದ್ಧತಿ ಉದಯವಾಯಿತು.

೧ ಈ. ಸಾಧಕಿಯರು ಮಾಡಿದ ಸೂಕ್ಷ್ಮ ಪರೀಕ್ಷಣೆಯನ್ನು ಪರಾತ್ಪರ ಗುರು ಡಾಕ್ಟರರು ತನ್ಮಯರಾಗಿ ತಿಳಿದುಕೊಳ್ಳುವುದು ಇದರಿಂದ ಸೂಕ್ಷ್ಮ ಜಗತ್ತಿನ ಪರೀಕ್ಷಣೆ ಮಾಡಲು ಉತ್ಸಾಹ ಬರುವುದು : ನಾವು (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ), ಸುಶ್ರೀ (ಕು.) ಕವಿತಾ ರಾಠಿವಡೆಕರ್‌ (ಆಧ್ಯಾತ್ಮಿಕ ಮಟ್ಟ ಶೇ. ೬೬, ವಯಸ್ಸು ೪೩) ಕು. ಸುಷ್ಮಾ ಪೇಡಣೇಕರ  (ಈಗ ಸೌ. ಸುಷ್ಮಾ ನಾಯಿಕ್, ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೪೨) ‘ಸಾಧಕರಲ್ಲಿ ಶೇಕಡಾ ಎಷ್ಟು ಭಾವ, ತಳಮಳ ಮತ್ತು ಅಹಂ ಇದೆ ?’, ಇದನ್ನೆಲ್ಲ ಅಭ್ಯಾಸ ಮಾಡುತ್ತಿದ್ದೆವು. ನಾವು ಸೂಕ್ಷ್ಮ ಜಗತ್ತಿನ ವಿಷಯದಲ್ಲಿ ಪರಸ್ಪರ ಮಾತನಾಡಿಕೊಂಡು ಅದರ ಎಲ್ಲ ಅಂಶಗಳನ್ನು ಪುಸ್ತಕದಲ್ಲಿ ಬರೆದುಕೊಂಡು ಪರಾತ್ಪರ ಗುರು ಡಾಕ್ಟರರ ಬಳಿ ಹೋಗುತ್ತಿದ್ದೆವು. ಅವರು ನಾವು ಹೇಳುವ ಸಣ್ಣ ಸಣ್ಣ ವಿಷಯಗಳನ್ನೂ ಅಷ್ಟೇ ತನ್ಮಯರಾಗಿ ತಿಳಿದುಕೊಳ್ಳುತ್ತಿದ್ದರು. ಅದರಿಂದ ನಮಗೆ ಸೂಕ್ಷ್ಮ ಜಗತ್ತಿನ ಪರೀಕ್ಷಣೆ ಮಾಡಲು ಉತ್ಸಾಹ ಬರುತ್ತಿತ್ತು.

೧ ಉ. ಪ್ರಸಾರಸೇವೆಯಲ್ಲಿನ ಸಾಧಕರ ಸೂಕ್ಷ್ಮ ಪರೀಕ್ಷಣೆ ಮಾಡಿ ಅದನ್ನು ಅವರಿಗೆ ಹೇಳುವುದು

೧ ಉ ೧. ಪರಾತ್ಪರ ಗುರು ಡಾ. ಆಠವಲೆಯವರು ಭಾರತದಾದ್ಯಂತ ಸಾಧನೆಯ ಪ್ರಸಾರ ಮಾಡುವ ಪ್ರಮುಖ ಪ್ರಸಾರ ಸೇವಕರ ಸತ್ಸಂಗಕ್ಕೆ ಹೋಗಲು ಹೇಳಿ ಅವರಲ್ಲಿನ ‘ಭಾವ, ತಳಮಳ ಮತ್ತು ಅಹಂ’ ಈ ಘಟಕಗಳ ಶೇಕಡಾವಾರು ತೆಗೆಯಲು ಹೇಳುವುದು : ಆ ಸಮಯದಲ್ಲಿ ಸಂಪೂರ್ಣ ಭಾರತದಾದ್ಯಂತ ಸಾಧನೆಯ ಪ್ರಸಾರ ಮಾಡುವ ಪ್ರಮುಖ ಪ್ರಸಾರ ಸೇವಕರ ಸತ್ಸಂಗ ಗೋವಾದಲ್ಲಿ ನಡೆಯುತ್ತಿತ್ತು. ಪರಾತ್ಪರ ಗುರು ಡಾಕ್ಟರರು ಹಲವಾರು ಬಾರಿ ನನಗೆ ಈ ಸತ್ಸಂಗಕ್ಕೆ ಹೋಗಲು ಹೇಳಿದರು. ಅವರು ನನಗೆ ”ಪ್ರಸಾರಸೇವಕನು ಹೇಗೆ ಮಾತನಾಡುತ್ತಾನೆ ? ಸಾಧನೆಯ ಬಗ್ಗೆ ಅವನ ದೃಷ್ಟಿಕೋನ ಹೇಗಿದೆ ? ಅವನು ಇತರರ ಮಾತನ್ನು ಕೇಳುತ್ತಾನೆಯೇ ? ಸತ್ಸಂಗದಲ್ಲಿ ಅವನ ಗಮನವಿರುತ್ತದೆಯೇ ? ಅವನು ಪ್ರತಿಯೊಂದು ಅಂಶವನ್ನು ಗಂಭೀರವಾಗಿ ವಿಚಾರ ಮಾಡುತ್ತಾನೆಯೇ ?’, ಇವೆಲ್ಲವನ್ನೂ ಪ್ರತ್ಯಕ್ಷ ನೋಡಿ ಅವನಲ್ಲಿನ ‘ಭಾವ. ತಳಮಳ ಮತ್ತು ಅಹಂ’ ಈ ಘಟಕಗಳ ಪ್ರಮಾಣವನ್ನು ತೆಗೆಯಿರಿ” ಎಂದು ಹೇಳಿದರು. ನಾನು ಹಾಗೆ ಮಾಡಿ ಪರಾತ್ಪರ ಗುರು ಡಾಕ್ಟರರ ಮುಂದೆ ಒಂದು ತಖ್ತೆಯನ್ನು ನೀಡುತ್ತಿದ್ದೆ. ಪರಾತ್ಪರ ಗುರು ಡಾಕ್ಟರರು ಅದರಲ್ಲಿನ ಕೊರತೆಯನ್ನು ಹುಡುಕಿ ಆ ವಿಷಯದಲ್ಲಿ ನನಗೆ ಮಾರ್ಗದರ್ಶನ ಮಾಡುತ್ತಿದ್ದರು.

೧ ಉ ೨. ಪರಾತ್ಪರ ಗುರು ಡಾಕ್ಟರರು ಪ್ರಸಾರಸೇವಕರ ಪರೀಕ್ಷಣೆಯನ್ನು ಅವರಿಗೆ ಹೇಳಿ ‘ಸಾಧನೆಗೆ ಸಂಬಂಧಿಸಿದಂತೆ ಯಾವ ಘಟಕದ ಕಡೆಗೆ ಹೇಗೆ ಗಮನ ಹರಿಸಬೇಕು ?’, ಎಂಬುದನ್ನು ಅವರಿಗೆ ಹೇಳಲು ಹೇಳುತ್ತಿದ್ದರು : ಅನಂತರ ಅವರು ನನಗೆ ”ಸತ್ಸಂಗ ಆರಂಭವಾಗುವ ಮೊದಲೇ ನಿಮ್ಮ ಪರೀಕ್ಷಣೆಯನ್ನು ಸಾಧಕರಿಗೆ ಹೇಳಬೇಕು ಮತ್ತು ‘ಸಾಧನೆಗೆ ಸಂಬಂಧಿಸಿದಂತೆ ಆಯಾಯ ಘಟಕಗಳ ಕಡೆಗೆ ಹೇಗೆ ಗಮನ ಹರಿಸಬೇಕು ?’, ಎಂಬುದನ್ನೂ ಅವರಿಗೆ ಹೇಳಬೇಕು” ಎಂದು ಹೇಳುತಿದ್ದರು. ನಾನು ಆಜ್ಞಾಪಾಲನೆಯೆಂದು ತಕ್ಷಣ ಇವೆಲ್ಲವನ್ನೂ ಸತ್ಸಂಗದ ಮೊದಲೇ ಸಾಧಕರಿಗೆ ಹೇಳುತ್ತಿದ್ದೆನು.

೧ ಊ. ಶ್ರೀಗುರುಗಳ ಆಜ್ಞಾಪಾಲನೆ ಮಾಡಿ ಇತರರ ಪರೀಕ್ಷಣೆಯನ್ನು ಅವರಿಗೆ ಹೇಳುವಾಗ ನನ್ನಲ್ಲಿನ ಸಾಧನೆಯ ಗುಣಗಳನ್ನೂ ಹೆಚ್ಚಿಸುವ ಗಾಂಭೀರ್ಯ ಹೆಚ್ಚಾಗುವುದು : ನನ್ನ ಮನಸ್ಸಿನಲ್ಲಿ ‘ಈ ಪ್ರಸಾರಸೇವಕರಿಗೆ ಏನನಿಸಬಹುದು ?’, ಎಂಬ ವಿಚಾರ ಸ್ವಲ್ಪವೂ ಬರುತ್ತಿರಲಿಲ್ಲ. ಶ್ರೀ ಗುರುಗಳೇ ನನಗೆ ಆ ಶಕ್ತಿಯನ್ನು ನೀಡಿದ್ದರು. ‘ಗುರುಗಳ ಮಾತಿನಲ್ಲಿ ಎಷ್ಟು ಶಕ್ತಿ ಇರುತ್ತದೆ !’, ಎಂಬುದು ಅವರ ವಚನವನ್ನು ತಕ್ಷಣ ಆಜ್ಞಾಪಾಲನೆ ಮಾಡುವುದರಿಂದಲೇ ತಿಳಿಯುತ್ತದೆ’, ಎಂಬುದು ನನ್ನ ಗಮನಕ್ಕೆ ಬರತೊಡಗಿತು, ಅಲ್ಲ, ಅವರು ಹಾಗೆ ನನ್ನಿಂದ ಮಾಡಿಸಿಕೊಳ್ಳತೊಡಗಿದರು; ಏಕೆಂದರೆ ಆಗ ನಾನು ಕೂಡ ಸಾಧನೆಯಲ್ಲಿ ಹೊಸಬಳಾಗಿದ್ದೆ. ನನ್ನಲ್ಲಿ ಸಾಧನೆಗೆ ಆವಶ್ಯಕವಿರುವ ಈ ಎಲ್ಲ ಗುಣಗಳಿರಲಿಲ್ಲ. ನಾನು ಇತರರಿಗೆ ಹೇಳುವಾಗ ‘ನನ್ನಲ್ಲಿಯೂ ಭಾವ, ತಳಮಳ ಮತ್ತು ಅಹಂ ಕಡಿಮೆ ಇರುವುದು’ ಇಂತಹ ಘಟಕಗಳ ವಿಷಯದಲ್ಲಿ ಗಾಂಭೀರ್ಯ ಹೆಚ್ಚಾಗಲು ಆರಂಭವಾಯಿತು.

೧ ಎ. ಪರಾತ್ಪರ ಗುರು ಡಾ. ಆಠವಲೆಯವರು ‘ಗುರು, ಇದು ಒಂದು ದೇಹವಾಗಿರದೆ ಅದು ಒಂದು ತತ್ತ್ವವಾಗಿದೆ’, ಎನ್ನುವ ಸಾಧನೆಯ ಮೂಲಭೂತ ಸಿದ್ಧಾಂತವನ್ನು ನಮಗೆ ಅರಿವಾಗದಂತೆಯೇ ಕಲಿಸಿದರು : ‘ನಾನು ಸ್ವತಃ ಇವುಗಳಲ್ಲಿ ಪರಿಪೂರ್ಣ ಇಲ್ಲದಿರುವಾಗ ಬೇರೆಯವರಿಗೆ ಹೇಗೆ ಉಪದೇಶ ಮಾಡಲಿ ?’, ಎನ್ನುವ ವಿಚಾರ ನನ್ನ ಮನಸ್ಸಿನಲ್ಲಿ ಬರಲಿಲ್ಲ. ಆಗ ನನಗೆ ‘ಈ ದೇಹದಿಂದ ಸಾಕ್ಷಾತ್‌ ಪರಾತ್ಪರ ಗುರು ಡಾಕ್ಟರರೇ ಮಾತನಾಡುತ್ತಿದ್ದಾರೆ ಮತ್ತು ಅವರು ಸರ್ವಜ್ಞ ಮತ್ತು ಪರಿಪೂರ್ಣರಾಗಿದ್ದಾರೆ, ಹೀಗಿರುವಾಗ ನಾನೇಕೆ ಚಿಂತೆ ಮಾಡಬೇಕು ? ನಾವು ಕೇವಲ ನಮ್ಮ ದೇಹದಲ್ಲಿರುವ ಅವರ ತತ್ತ್ವವನ್ನು ಅನುಭವಿಸಲಿಕ್ಕಿದೆ, ಎನ್ನುವ ಶ್ರದ್ಧೆಯಿತ್ತು.’ ‘ಈ ರೀತಿ ಪರಾತ್ಪರ ಗುರು ಡಾಕ್ಟರರು ‘ಗುರು ಎಂಬುದು ಒಂದು ದೇಹವಾಗಿರದೆ ಅದು ಒಂದು ತತ್ತ್ವ ಆಗಿದೆ’, ಎಂಬ ಸಾಧನೆಯ ಮೂಲಭೂತ ಸಿದ್ಧಾಂತವನ್ನು ನನಗೆ ಕಲಿಸಲು ಯಾವಾಗ ಪ್ರಾರಂಭಿಸಿದರು ?’, ಎಂಬುದು ನನಗೆ ತಿಳಿಯಲೇ ಇಲ್ಲ.

ಈ ಎಲ್ಲವುಗಳಿಂದ ‘ಸಾಧನೆಗೆ ಬೇರೆ ಪರ್ಯಾಯವಿಲ್ಲ’, ಎಂಬ ಅಂಶವನ್ನು ಮನಸ್ಸಿನಾಳದಲ್ಲಿ ಬಿಂಬಿಸಲು ಪರಾತ್ಪರ ಗುರು ಡಾ. ಆಠವಲೆಯವರು ಪ್ರಯತ್ನಿಸಿದರು – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಸಾಧಕರಿಗಿರುವ ಆಧ್ಯಾತ್ಮಿಕ ತೊಂದರೆ, ಹಾಗೆಯೇ ಅವರಲ್ಲಿನ ಭಾವ, ತಳಮಳ ಮತ್ತು ಅಹಂ ಇವುಗಳ ಶೇಕಡಾವಾರಿನ ಪರೀಕ್ಷಣೆ ನೋಂದಣಿಯಾಗಲು ಆರಂಭವಾಯಿತು. ಇದರಿಂದ ಗುರುದೇವರು ‘ಸಾಧನೆ ಮಾಡದೆ ಪರ್ಯಾಯವಿಲ್ಲ’, ಎಂಬ ಅಂಶವನ್ನು ಪುನಃ ಪುನಃ ನಮ್ಮ ಮನಸ್ಸಿನಾಳದಲ್ಲಿ ಬಿಂಬಿಸಲು ಪ್ರಯತ್ನಿಸಿದರು. ಇದಕ್ಕೇ ‘ಗುರುತತ್ತ್ವದ ಬೋಧನೆ’, ಎನ್ನುತ್ತಾರೆ.

೩. ಸಾಧಕರಲ್ಲಿನ ಸ್ವಭಾವದೋಷಗಳು ದೂರವಾಗಲು ‘ಸ್ವಭಾವದೋಷ-ನಿರ್ಮೂಲನೆ ಪದ್ಧತಿ’ ಮತ್ತು ‘ಸ್ವಯಂಸೂಚನೆಗಳನ್ನು ತೆಗೆದುಕೊಳ್ಳುವುದು’ ಈ ಪ್ರಕ್ರಿಯೆಯ ಆರಂಭ !

೩ ಅ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಲ್ಲಿನ ಸ್ವಭಾವದೋಷಗಳನ್ನು ಹುಡುಕಿ ಅವುಗಳನ್ನು ಅವರಿಗೆ ತಿಳಿಸಲು ಹೇಳುವುದು ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ಬೆಂಬಲಕ್ಕಿರುವುದರಿಂದ ಅವುಗಳನ್ನು ಸಹಜವಾಗಿ ಹೇಳಲು ಸಾಧ್ಯವಾಗುವುದು : ಸಾಧಕರಲ್ಲಿನ ಸಾಧನೆಯ ಮುಂದಿನ ಘಟಕಗಳ ಪರೀಕ್ಷಣೆ ಮಾಡುವಾಗ ಗುರುದೇವರು (ಪರಾತ್ಪರ ಗುರು ಡಾ. ಆಠವಲೆ) ನನಗೆ ಹೇಳಿದರು, ”ಈಗ ಸಾಧಕರಲ್ಲಿನ ಮೂಲ ಸ್ವಭಾವದೋಷಗಳನ್ನು ಹುಡುಕಿ ತೆಗೆಯಿರಿ. ದೇವರಿಗೆ ಕೇಳಿರಿ, ‘ಈ ಸಾಧಕನ ಸಾಧನೆಯಲ್ಲಿ ಅಡಚಣೆಯುಂಟು ಮಾಡುವ ಮೂಲ ಸ್ವಭಾವದೋಷ ಯಾವುದು ?’, ಸಾಧಕರ ಮೂಲ ಸ್ವಭಾವದೋಷವನ್ನು ಹುಡುಕಿದ ನಂತರ ‘ಸಾಧಕ ಇತರರೊಂದಿಗೆ ಸುಳ್ಳು ಮಾತನಾಡುತ್ತಿದ್ದರೆ ಅಥವಾ ಇತರರನ್ನು ಮೋಸಗೊಳಿಸುತ್ತಿದ್ದರೆ, ಅದನ್ನು ಕೂಡ ನಾವು ಸಾಧಕರಿಗೆ ಸಂಕೋಚವಿಲ್ಲದೆ ಹೇಳುತ್ತಿದ್ದೆವು. ಸಾಧಕನಿಗೆ ಸೇವೆಯಿಂದ ತಪ್ಪಿಸಿಕೊಳ್ಳುವ ಸ್ವಭಾವ ಇದ್ದರೆ ಅಥವಾ ತನ್ನ ಪ್ರತಿಷ್ಠೆಯನ್ನು ಕಾಪಾಡುವ ಸ್ವಭಾವ ಇದ್ದರೆ ಈಶ್ವರನು ಸಂಬಂಧಪಟ್ಟ ಸಾಧಕನಲ್ಲಿನ ಆ ಸ್ವಭಾವದೋಷವನ್ನು ತಕ್ಷಣ ನಮ್ಮ ಗಮನಕ್ಕೆ ತಂದುಕೊಡುತ್ತಿದ್ದನು. ಸಾಕ್ಷಾತ್‌ ಪರಾತ್ಪರ ಗುರು ಡಾಕ್ಟರರೇ ಬೆಂಬಲಕ್ಕಿರುವುದರಿಂದ ನಮಗೆ ಸಾಧಕರ ಸ್ವಭಾವದೋಷ ಗಳನ್ನು ಹೇಳುವಾಗ ಏನೂ ಅನಿಸುತ್ತಿರಲಿಲ್ಲ. ಇದು ಕೂಡ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯೇ ಆಗಿದೆ !

೩ ಆ. ‘ಸಾಧಕರಿಗೆ ಸೂಕ್ಷ್ಮಜ್ಞಾನವಿರುವ ಸಾಧಕರ ಬಗ್ಗೆ ಆತ್ಮೀಯತೆ ಅನಿಸಬೇಕು’, ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಕಲಿಸುವುದು : ನಾವು ಸಾಧಕನಿಗೆ ಅವನ ಸ್ವಭಾವದೋಷವನ್ನು ಹೇಳಿದಾಗ ಅವನಿಗೆ ಕೆಡುಕೆನಿಸುತ್ತಿತ್ತು, ಅದಕ್ಕೆ ಉಪಾಯವೆಂದು ನಾವು ಮೊದಲು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆವು, ‘ಆ ಸಾಧಕನಿಗೆ ಸಾಧನೆಯಲ್ಲಿ ಮುಂದೆ ಹೋಗಲು ನಾವು ಅವನಿಗೆ ಸಹಾಯವನ್ನೇ ಮಾಡುತ್ತಿದ್ದೇವೆ’, ಎನ್ನುವ ವಿಶ್ವಾಸ ಅವನಲ್ಲಿ ಮೂಡಲಿ ದೇವರೆ !’ ಈ ಪ್ರಾರ್ಥನೆಯಿಂದ ನಮಗೆ ಒಳ್ಳೆಯ ಪರಿಣಾಮಗಳು ಕಂಡುಬಂದವು. ಬಹಳಷ್ಟು ಸಾಧಕರಿಗೆ ಸೂಕ್ಷ್ಮ ಜ್ಞಾನವಿರುವ ಸಾಧಕರ ಬಗ್ಗೆ ವಿಶ್ವಾಸ ಮೂಡಲು ಆರಂಭವಾಯಿತು. ಇದರಿಂದ ‘ಸಾಧಕರೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳಬೇಕು ಮತ್ತು ಅದಕ್ಕಾಗಿ ಪ್ರೇಮಭಾವ ಮಹತ್ವದ್ದಾಗಿದೆ. ಕೇವಲ ಸೂಕ್ಷ್ಮಜ್ಞಾನವಿದ್ದರೆ ಸಾಲದು, ‘ಸಾಧಕರಿಗೆ ಸೂಕ್ಷ್ಮಜ್ಞಾನವಿರುವ ಸಾಧಕರ ಬಗ್ಗೆ ಆತ್ಮೀಯತೆ ಅನಿಸಬೇಕು’, ಎನ್ನುವ ಅಂಶವನ್ನು ಪರಾತ್ಪರ ಗುರು ಡಾಕ್ಟರರು ನಮಗೆ ಕಲಿಸಿದರು.

೩ ಇ. ಸಾಧಕರಿಗೆ ಸ್ವಭಾವದೋಷವನ್ನು ಹೇಳುವ ಈ ಪದ್ಧತಿಯಿಂದ ಮುಂದೆ ೨೦೦೩ ರಿಂದ ‘ಸ್ವಭಾವದೋಷ-ನಿರ್ಮೂಲನೆ ಪದ್ಧತಿ’ ಮತ್ತು ‘ಸ್ವಯಂಸೂಚನೆಗಳನ್ನು ತೆಗೆದುಕೊಳ್ಳುವುದು’, ಈ ಪ್ರಕ್ರಿಯೆ ಆರಂಭವಾಯಿತು : ‘ಸಾಧಕರಿಗೆ ಸ್ವಭಾವದೋಷವನ್ನು ಹೇಳುವ ಪದ್ಧತಿಯಲ್ಲಿಯೇ ಇಂದಿನ ‘ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ’ಯ ಬೀಜ ಅಡಗಿತ್ತು’, ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಸುಮಾರು ೨೦೦೩ ರಲ್ಲಿ ‘ಸ್ವಭಾವದೋಷ-ನಿರ್ಮೂಲನೆ ಪದ್ಧತಿ’ ಮತ್ತು ‘ಸ್ವಯಂಸೂಚನೆಗಳನ್ನು ತೆಗೆದುಕೊಳ್ಳುವುದು’, ಈ ಪದ್ಧತಿ ಬೇರೂರಲು ಅರಂಭವಾಯಿತು ಮತ್ತು ಈಗ ಅದು ಚೆನ್ನಾಗಿ ಬೇರೂರಿದೆ. ಈಗ ಅನೇಕ ಸಾಧಕರು ಈ ಪ್ರಕ್ರಿಯೆಯನ್ನು ಕಲಿಯಲು ರಾಮನಾಥಿಯ ಸನಾತನ ಆಶ್ರಮಕ್ಕೆ ಬರುತ್ತಿದ್ದಾರೆ ಮತ್ತು ಆನಂದ ಪಡೆಯುತ್ತ್ತಿದ್ದಾರೆ.

೪. ಕೃಪಾಳು ಪರಾತ್ಪರ ಗುರು ಡಾ. ಆಠವಲೆಯವರ ಶ್ರೇಷ್ಠತೆ

೪ ಅ. ಸಾಧಕರನ್ನು ವಿವಿಧ ರೀತಿಯಲ್ಲಿ ಸಿದ್ಧಪಡಿಸುವುದು : ‘ಪರಾತ್ಪರ ಗುರು ಡಾಕ್ಟರರು ನಮ್ಮೆಲ್ಲ ಸಾಧಕರನ್ನು ಹೇಗೆ ವಿವಿಧ ರೀತಿಯಲ್ಲಿ ಸಿದ್ಧಪಡಿಸಿದ್ದಾರೆ ?’, ಇದನ್ನು ಈಗ ವಿಚಾರ ಮಾಡಿದರೆ ಗಮನಕ್ಕೆ ಬರುತ್ತದೆ. ಕೆಲವು ಸಂಪ್ರದಾಯಗಳಲ್ಲಿ ಕೇವಲ ‘ನಾಮಜಪ ಮಾಡಿರಿ’, ಎಂದು ಹೇಳಲಾಗುತ್ತದೆ. ಪರಾತ್ಪರ ಗುರು ಡಾಕ್ಟರರು ‘ನಾಮಜಪ ಮಾಡುವುದರೊಂದಿಗೆ ಇನ್ನಿತರ ವಿಷಯಗಳಿಗೂ ಮಹತ್ವವಿರುತ್ತದೆ ಮತ್ತು ಹಾಗೆ ಮಾಡಿದರೆ ಮಾತ್ರ ಪ್ರಗತಿಯಾಗುತ್ತದೆ’, ಎಂಬುದನ್ನು ನಮಗೆ ಕಲಿಸಿದರು.

೪ ಆ. ಸೂಕ್ಷ್ಮ ಪರೀಕ್ಷಣೆ ಮಾಡುವ ಸಾಧಕಿಯರು ಕೂಡ ಸಾಧನೆಯಲ್ಲಿ ಪುಷ್ಪಗಳ ಹಾಗೆ ನಿಧಾನವಾಗಿ ಅರಳುತ್ತಾ ಹೋದರು : ಗುರುದೇವರು ಸಾಧಕಪುಷ್ಪಗಳಾದ ನಮ್ಮೆಲ್ಲರ ಮೇಲೆ ಕೃಪಾವೃಷ್ಟಿ ಮಾಡುತ್ತಿರುವುದರಿಂದ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುತ್ತಾ ನಾವು ಕೂಡ ಸಾಧನೆಯಲ್ಲಿ ಪುಷ್ಪಗಳ ಹಾಗೆ ಅರಳುತ್ತಿದ್ದೆವು. ಈ ಚೈತನ್ಯವೃಷ್ಟಿಯೇ ನಮ್ಮಂತಹ ಸಾಧಕಪುಷ್ಪಗಳನ್ನು ಅರಳಿಸಿ ವಿಕಾಸಗೊಳಿಸುತ್ತಿತ್ತು ಮತ್ತು ಅವರ ಗುರುಕೃಪಾ ವೃಷ್ಟಿಯ ಸುಗಂಧವೂ ಹರಡುತ್ತಿತ್ತು.

೫. ಶಬ್ದಾತೀತ ಕೃತಜ್ಞತೆ

‘ಗುರುದೇವರೆ, ನಿಮ್ಮ ವಿಷಯದಲ್ಲಿ ಎಷ್ಟು ಬರೆದರೂ ಅದು ಕಡಿಮೆಯೇ ಆಗಿದೆ. ‘ನೀವು ನಮಗೆ ಕಲಿಸಲು ಎಷ್ಟು ಶ್ರಮಿಸಿದ್ದೀರಿ’, ಎಂಬುದರ ಕಲ್ಪನೆಯನ್ನು ಮಾಡಲು ಸಾಧ್ಯವಿಲ್ಲ. ನಿಜವಾಗಿಯೂ ನಮ್ಮನ್ನು ಸಿದ್ಧಪಡಿಸುವ ತಳಮಳ ನಮಗಿಂತ ನಿಮಗೇ ಹೆಚ್ಚು ಪ್ರಮಾಣದಲ್ಲಿದೆ. ‘ನಿಜವಾದ ಗುರುಗಳು ಹೇಗಿರುತ್ತಾರೆ ?’, ಎಂಬುದನ್ನು ನಾವು ಪ್ರತ್ಯಕ್ಷ ನೋಡಿದೆವು ಮತ್ತು ಅದು ನೀವೇ ಆಗಿದ್ದೀರಿ ಗುರುದೇವರೆ, ನೀವೇ ಆಗಿದ್ದೀರಿ !’

ಶ್ರೀಚಿತಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಕಾಂಚೀಪುರಮ್, ತಮಿಳುನಾಡು. (೬.೨.೨೦೨೨).

(ಮುಂದುವರಿಯುವುದು)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.