ವಾಸ್ತುಶಾಸ್ತ್ರ

ಸಾವಿರಾರು ವರ್ಷಗಳ ಮೊದಲು ವಾಸ್ತುಶಾಸ್ತ್ರದ ಆಳವಾದ ಅಧ್ಯಯನ ಮಾಡಿರುವ ಶ್ರೇಷ್ಠವಾದ ಹಿಂದೂ ಧರ್ಮ !

ಸಾವಿರಾರು ವರ್ಷಗಳ ಹಿಂದೆ ನಿಸರ್ಗ, ವಾಸ್ತು ಹಾಗೂ ಶರೀರ ಇವುಗಳ ನಡುವಿನ ಇಂಧನದ ಸಮತೋಲನವನ್ನು ವಾಸ್ತುಶಾಸ್ತ್ರದ ಮಾಧ್ಯಮದಿಂದ ಸಾಧಿಸುವ ಕಲೆಯು ಶ್ರೇಷ್ಠರಾದ ದ್ರಷ್ಟಾರರಿಗೆ ತಿಳಿದಿತ್ತು. ಮನೆಯಲ್ಲಿನ ಪ್ರತಿಯೊಂದು ವಸ್ತು ಹೇಗಿರಬೇಕು ಹಾಗೂ ಅದನ್ನು ಎಲ್ಲಿಡಬೇಕು, ಎಂಬುದರ ಬಗ್ಗೆ ಶ್ರೇಷ್ಠ ಹಿಂದೂ ವಾಸ್ತುಶಾಸ್ತ್ರದಲ್ಲಿ ಸೂಕ್ಷ್ಮವಾಗಿ ವಿಚಾರ ಮಾಡಲಾಗಿದೆ. ‘ಮನೆಯಲ್ಲಿ ದೇವರ ಕೋಣೆ ಎಲ್ಲಿರ ಬೇಕು, ಆಭರಣಗಳ ಕಪಾಟು ಎಲ್ಲಿರಬೇಕು ಇತ್ಯಾದಿ ಅನೇಕ ವಿಷಯಗಳ ಬಗ್ಗೆ ಮಾರ್ಗದರ್ಶನವನ್ನು ಮಾಡಲಾಗಿದೆ.

ಭಾರತೀಯ ವಾಸ್ತುಶಾಸ್ತ್ರದಲ್ಲಿರುವ ವಿಚಾರಗಳು ಇತರ ಅಭಿವೃದ್ಧಿಶೀಲ ದೇಶಗಳಲ್ಲಿನ ವಾಸ್ತುಶಾಸ್ತ್ರದಲ್ಲಿಲ್ಲ !

‘ವಿದೇಶಗಳಲ್ಲಿ ಅಭಿವೃದ್ಧಿಯಾಗಿರುವ ವಾಸ್ತುಶಾಸ್ತ್ರದಲ್ಲಿ ವಾಸ್ತುವಿನ ಸುದೃಢತೆಗೆ ಒತ್ತು ನೀಡಲಾಗಿದೆ. ಆದರೆ ಭಾರತೀಯ ವಾಸ್ತುಶಾಸ್ತ್ರದಲ್ಲಿ ಸುದೃಢತೆಯೊಂದಿಗೆ ಆ ಮನೆಯಲ್ಲಿ ವಾಸಿಸುವ ವ್ಯಕ್ತಿಗಳು, ಅವರ ಮಾನಸಿಕ ಸ್ಥಿತಿ ಹಾಗೂ ಆ ವ್ಯಕ್ತಿಗಳಿಗೆ ದೇವರೊಂದಿಗಿನ ಸಂಬಂಧ ಇತ್ಯಾದಿಗಳ ವಿಚಾರವನ್ನೂ ಮಾಡಲಾಗಿದೆ. ಎರಡು ವಾಸ್ತು ಶಾಸ್ತ್ರಗಳಲ್ಲಿರುವ ಮುಖ್ಯವಾದ ಈ ವ್ಯತ್ಯಾಸವನ್ನು ನ್ಯಾಯವಾದಿ ವಝೆಯವರು ತಿಳಿಸುತ್ತಾ, “ನಮ್ಮ ವಾಸ್ತು ಶಾಸ್ತ್ರಕ್ಕೆ ಸೂರ್ಯನಿಂದ ಹೊರಡುವ ಕಿರಣಗಳು, ಚುಂಬಕೀಯ ಆಕರ್ಷಣೆ ಹಾಗೂ ಪ್ರಮುಖ ದಿಕ್ಕು-ಉಪದಿಕ್ಕು ಇತ್ಯಾದಿ ಮೂರು ವಿಷಯಗಳ ಆಧಾರವಿದೆ, ಎಂದಿದ್ದಾರೆ. – (ದಿಶಾಚಕ್ರ, ಪು. ೮೩, ಪ.ಪೂ. ಪರಶರಾಮ ಮಾಧವ ಪಾಂಡೆ ಮಹಾರಾಜರು)

ಪಾಶ್ಚಾತ್ಯ  ವಾಸ್ತು ಪದ್ಧತಿಗನುಸಾರ ನಿರ್ಮಿಸಿದ ಕಟ್ಟಡಗಳು ೧೦ ವರ್ಷಗಳಲ್ಲಿ ಬೀಳುವುದು ಹಾಗೂ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಿದ ದೇವಸ್ಥಾನಗಳು ಇನ್ನೂ ಯಥಾಸ್ಥಿತಿಯಲ್ಲಿರುವುದು !

ಎಲ್ಲಿ ಸಾವಿರಾರು ವರ್ಷಗಳಿಂದ ಸಮುದ್ರದಲ್ಲಿ ಶಾಶ್ವತವಾಗಿರುವ ‘ರಾಮ ಸೇತುವೆ’ಯನ್ನು ನಿರ್ಮಿಸಿರುವ ಸ್ಥಾಪತ್ಯ ವಿಶಾರದ (ವಾಸ್ತುಶಾಸ್ತ್ರಜ್ಞ)-ವಾನರ ಅಭಿಯಂತರರಾದ ನಳ ಹಾಗೂ ನೀಲರು ಮತ್ತು ಎಲ್ಲಿ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳುವ ಮೊದಲೇ ಕುಸಿಯುವ ಸೇತುವೆಗಳು ಹಾಗೂ ಇತರ ಕಟ್ಟಡಗಳನ್ನು ನಿರ್ಮಿಸುವ ಇಂದಿನ ಭ್ರಷ್ಟ ಸ್ಥಾಪತ್ಯವಿಶಾರದರು !

ವಾಸ್ತುಕಲೆಯ ಇತಿಹಾಸ !

ಭಾರತದಲ್ಲಿ ವೇದಕಾಲದಿಂದಲೂ ವಾಸ್ತುಶಾಸ್ತ್ರ ಅಸ್ತಿತ್ವದಲ್ಲಿದ್ದ ಬಗ್ಗೆ ಪುರಾವೆಗಳು ಸಿಗುತ್ತವೆ. ಗೃಹ್ಯಸೂತ್ರದಲ್ಲಿ ವಾಸ್ತುಶಾಸ್ತ್ರದ ಅನೇಕ ಸಿದ್ಧಾಂತಗಳು ಕಂಡುಬರುತ್ತವೆ. ಶುಲ್ಬಸೂತ್ರದಲ್ಲಿ ಯಜ್ಞವೇದಿಕೆಯನ್ನು ರಚಿಸುವಾಗ ಯಾವ ಪ್ರಕಾರದ ಇಟ್ಟಿಗೆಗಳನ್ನು ಉಪಯೋಗಿಸಬೇಕು, ಎಂಬುದನ್ನು ಹೇಳಲಾಗಿದೆ. ವಾಲ್ಮೀಕಿ ರಾಮಾಯಣದಲ್ಲಿ ನಗರಗಳು, ನದಿಯ ತೀರ, ಕೋಟೆಗಳ ವರ್ಣನೆ ಅಲ್ಲಲ್ಲಿ ಕಂಡು ಬರುತ್ತವೆ. ವೇದಕಾಲದಿಂದಲೇ ವಾಸ್ತುಶಾಸ್ತ್ರವು ವಿಕಸಿತಗೊಂಡಿರುವ ಪುರಾವೆಗಳೆಂದು ಭಾರತದ ದೇವಾಲಯಗಳನ್ನು ನೋಡಬಹುದು. ಈ ದೇವಾಲಯಗಳ ಇತಿಹಾಸವನ್ನು ಕೂಲಂಕುಶವಾಗಿ ಅಧ್ಯಯನ ಮಾಡಿದರೆ, ನಮಗೆ ತಿಳಿದು ಬರುವ ವಿಷಯವೆಂದರೆ, ಈ ದೇವಾಲಯಗಳ ನಿರ್ಮಿತಿಯಲ್ಲಿ ವೇದಾಂತ, ಯೋಗ ಶಾಸ್ತ್ರಗಳಷ್ಟೇ ಅಲ್ಲದೇ ಭೂಗೋಲ, ಭೌತ, ಗಣಿತ, ಭೂಮಿತಿ ಇತ್ಯಾದಿ ಶಾಸ್ತ್ರಗಳನ್ನು ಹಾಗೂ ಗುರುತ್ವಾಕರ್ಷಣೆ ಇತ್ಯಾದಿ ನಿಯಮಗಳನ್ನು ಪರಿಗಣಿಸಲಾಗಿದೆ. ವೈಜ್ಞಾನಿಕ ತತ್ತ್ವಗಳನ್ನು ಕಲಾತ್ಮಕವಾಗಿ ಉಪಯೋಗಿಸುವ ಈ ದೇವಾಲಯಗಳು ಬ್ರಹ್ಮಜ್ಞಾನ ಪ್ರಾಪ್ತಿಯೊಂದಿಗೆ ಸಮಾಜ ಧಾರಣೆಯನ್ನೂ ಮಾಡುತ್ತಿದ್ದವು. ಬಹುಶಃ ‘ದೇವಾಲಯಗಳು’ ಆ ಕಾಲದ ಸಮಾಜ ಜೀವನದ ಕೇಂದ್ರಸ್ಥಾನದಲ್ಲಿದ್ದವು ಎಂದು ಕಂಡು ಬರುತ್ತದೆ.

– ಶ್ರೀ. ಸಂಜಯ ಮುಳ್ಯೆ, ರತ್ನಾಗಿರಿ.

ಪ್ರಾಚೀನ ಶಿವ ದೇವಾಲಯಗಳ ವೈಶಿಷ್ಟ್ಯಗಳು !

ಶಿವ-ದೇವಾಲಯಗಳನ್ನು ನೈಸರ್ಗಿಕವಾಗಿ ಹವಾನಿಯಂತ್ರಿತವಾಗಿ (ಏರ್ ಕಂಡಿಶನಿಂಗ್) ಮಾಡಿರುವ ರಚನೆಗಳು ಕಾಣಿಸುತ್ತವೆ. ದೇವಾಲಯದ ಗರ್ಭಗುಡಿಯನ್ನು ಭೂಮಿಯ ಆಳದಲ್ಲಿ ನಿರ್ಮಿಸಿರುವುದು ಕಂಡುಬರುತ್ತದೆ.

೧. ಸೂರ್ಯಕಿರಣಕ್ಕನುಸಾರ ರಚನೆ : ದೇವಾಲಯದ ವಾಸ್ತು ನಿರ್ಮಿತಿಯಲ್ಲಿ ವೇದಾಂತ, ಯೋಗಶಾಸ್ತ್ರದೊಂದಿಗೆ ಭೌತಶಾಸ್ತ್ರದ ಬಗ್ಗೆಯೂ ವಿಚಾರ ಮಾಡಿರುವುದು ಕಂಡುಬರುತ್ತದೆ. ಕೆಲವು ದೇವಾಲಯಗಳಲ್ಲಿ ಉತ್ಕ ಷ್ಟವಾದ ದಿಕ್-ಬಂಧ (ದೇವಾಲಯದಲ್ಲಿ ಒಂದು ನಿರ್ಧಿಷ್ಟ ದಿನದಂದೇ ಮೂರ್ತಿಯ ಮೇಲೆ ಸೂರ್ಯನ ಮೊದಲ ಕಿರಣ ಬೀಳುವಂತೆ ವಾಸ್ತುರಚನೆಯನ್ನು  ಮಾಡುವುದು) ಮಾಡಿರುವುದು ಕಾಣಿಸುತ್ತದೆ. ಕೆಲವು ದೇವಾಲಯಗಳ ಮುಂದೆ ಸಣ್ಣ ಸಣ್ಣ ಕಿಂಡಿಗಳು ಹೇಗಿವೆಯೆಂದರೆ, ಯಾವುದೇ ಋತುವಿನಲ್ಲಿ ಸೂರ್ಯನ ಮೊದಲ ಕಿರಣವು ಮೂರ್ತಿಯ ಮೇಲೆ ಬೀಳುತ್ತದೆ. ಪುಣೆಯ ಹತ್ತಿರದ ಯವತ ಸಮೀಪದ ಬೆಟ್ಟದ ಮೇಲೆ ಇಂತಹದ್ದೊಂದು ಶಿವ ಮಂದಿರವಿದೆ. ಕೊನಾರ್ಕ್‌ನ ಸೂರ್ಯ ದೇವಸ್ಥಾನದ ಸ್ಥಳದಲ್ಲಿ ಕೆತ್ತನೆ ಮಾಡಿರುವ ಚಕ್ರವು ಕೇವಲ ಸೂರ್ಯ-ರಥದ ಚಕ್ರ ಅಥವಾ ಕೇವಲ ಶಿಲ್ಪವಾಗಿರದೆ ಈ ಚಕ್ರದ ಕಡ್ಡಿಯ ನೆರಳಿನಿಂದ ತಿಂಗಳು, ತಿಥಿ ಹಾಗೂ ಸಮಯ ಇತ್ಯಾದಿಗಳು ನಿಖರವಾಗಿ ತಿಳಿಯುತ್ತದೆ.

ಎಲ್ಲೋರ : ವಾಸ್ತುಶಾಸ್ತ್ರದ ದೃಷ್ಟಿಯಲ್ಲಿ ಎಲ್ಲೋರಾದ ಕೈಲಾಸ ಗುಹೆಯನ್ನು ನೋಡಿದರೆ, ಅದನ್ನು ಹೇಗೆ ನಿರ್ಮಿಸಿದ್ದಾರೆಂಬುದು ತಿಳಿಯುತ್ತದೆ. ಶಿಖರದಿಂದ ಕೆಳಗೆ ಒಂದೇ ಕಲ್ಲಿನಲ್ಲಿ ಅದನ್ನು ಕೆತ್ತ ಲಾಗಿದೆ, ಅಂದರೆ ವಾಸ್ತುಶಿಲ್ಪಿಯು ಆ ವಾಸ್ತು ರಚನೆಯ ಬಗ್ಗೆ ಯಾವ ಸ್ತರದ ತನಕ ವಿಚಾರವನ್ನು ಮಾಡಬೇಕಾಗಿರಬಹುದು, ಅದಕ್ಕೆ ಯಾವ ಅಳತೆಯ ಪದ್ಧತಿಯನ್ನು ಉಪಯೋಗಿಸಿರಬಹುದು ಹಾಗೂ ಅವರು ಅದನ್ನು ಹೇಗೆ ಮಾಡಿರಬಹುದು, ಎಂಬುದನ್ನು ನಾವು ಊಹಿಸಲೂ ಸಾಧ್ಯವಿಲ್ಲ, ಅಷ್ಟು ಅದು ಭವ್ಯವಾಗಿದೆ.

೨. ನಾದಶಾಸ್ತ್ರದ ಮೇಲಾಧರಿಸಿದ ದೇವಾಲಯಗಳ ಸ್ತಂಭಗಳು ಕನ್ಯಾಕುಮಾರಿಯ ದೇವಾಲಯದಲ್ಲಿ ಒಂದು ಬದಿಯಲ್ಲಿ ಸಪ್ತಸ್ವರಗಳ

ಕಲ್ಲಿನ ಸ್ತಂಭಗಳಿವೆ ಹಾಗೂ ಇನ್ನೊಂದು ಬದಿಯಲ್ಲಿ ಮೃದಂಗದ ಧ್ವನಿಯನ್ನು ಸ್ತಂಭದಲ್ಲಿ ನಿರ್ಮಾಣ ಮಾಡಲಾಗಿದೆ. ಕಲ್ಲಿನ ನಾದವು ವಿಶಿಷ್ಟ ಸ್ವರದಲ್ಲಿಯೇ ಬರಬೇಕೆಂದು ಅದರ ಸುತ್ತಳತೆ ಎಷ್ಟಿರಬೇಕು, ಕಲ್ಲಿಗೆ ಒಳಗಿನಿಂದ ಎಷ್ಟು ಟೊಳ್ಳು ಮಾಡಬೇಕು, ಎಂಬ ನಿಖರವಾದ ಗಣಿತ ಹಾಗೂ ಶಾಸ್ತ್ರವು ಅದರ ಹಿಂದಿದೆ.