೬ ಸಾವಿರ ವರ್ಷಗಳ ಹಿಂದೆ ಸಿಂಧೂ ನದಿಯಲ್ಲಿ ನೌಕಾಯಾನ ಶಾಸ್ತ್ರವು ಉಗಮವಾಯಿತು. ಗೋಧಾ ಹೆಸರಿನ ೧೫೦೦ ಟನ್‌ಗಳ ಹಡಗುಗಳನ್ನು ಹಿಂದುಸ್ಥಾನದಲ್ಲಿ ೧೭ ನೇ ಶತಮಾನದ ತನಕ ನಿರ್ಮಿಸಲಾಗುತ್ತಿತ್ತು. ಈಸ್ಟ್ ಇಂಡಿಯಾ ಕಂಪನಿಯಲ್ಲಿ ಒಂದು ಭಾರತ ನಿರ್ಮಿತ ‘ದರಿಯಾ ದೌಲತ’ ಹೆಸರಿನ ಹಡಗು ಇತ್ತು. ಅದನ್ನು ೮೭ ವರ್ಷಗಳಷ್ಟು ಕಾಲದಲ್ಲಿ ಒಮ್ಮೆ ಸಹ ದುರುಸ್ತಿ ಮಾಡುವ ಪ್ರಸಂಗ ಬಂದಿರಲಿಲ್ಲ. ಭಾರತದ ಈ ಜ್ಞಾನವನ್ನು ನೋಡಿದ ಆಂಗ್ಲರು ಹಿಂದೂಸ್ಥಾನದಲ್ಲಿ ನೌಕಾ ನಿರ್ಮಿತಿಗೆ ನಿರ್ಬಂಧ ಹಾಕಿ ಆ ವಿದ್ಯೆಯನ್ನು ಅಳಿಸಿ ಹಾಕಿದರು. ಒಂದು ಕಾಲದಲ್ಲಿ ನೌಕಾಯಾನ ಶಾಸ್ತ್ರದ ಎಲ್ಲ ನಾಮ ಮತ್ತು ಕ್ರಿಯಾಪದಗಳು ಭಾರತೀಯ ಭಾಷೆಯಲ್ಲಿದ್ದವು; ಇದೊಂದೇ ಶಾಸ್ತ್ರವಲ್ಲ, ಇತರ ಎಲ್ಲ ಶಾಸ್ತ್ರಗಳೂ ಭಾರತದಲ್ಲಿ ಅಭಿವೃದ್ಧಿ ಹೊಂದಿದ್ದವು ಹಾಗೂ ಅವುಗಳ ಶಬ್ದಗಳನ್ನೇ ಉಪಯೋಗಿಸುತ್ತಿದ್ದರು. ಇಂದು ಮಾತ್ರ ವಿಜ್ಞಾನದ ಯಾವುದೇ ಶಾಖೆಯಲ್ಲಿ ಭಾರತೀಯ ಶಬ್ದಗಳು ಕಾಣಿಸುವುದಿಲ್ಲ.
ಹಡಗು ನಿರ್ಮಿತಿಯಲ್ಲೂ ಮುಂಚೂಣಿಯಲ್ಲಿದ್ದ ಭಾರತ
ಹಡಗು ನಿರ್ಮಾಣ ಕ್ಷೇತ್ರದಲ್ಲಿ ಸಹ ಹಿಂದೂಸ್ಥಾನವು ಹೀಗೆಯೇ ಮುಂಚೂಣಿಯಲ್ಲಿತ್ತು. ಹಡಗುಗಳಿಂದ ಬಹಳ ದೂರದ ಸಮುದ್ರ ಪ್ರವಾಸ ಮಾಡುವವರು ಹಿಂದೂಗಳೇ ಆಗಿದ್ದರು. ವಾಸ್ಕೋ ಡಿ ಗಾಮಾನ ನೋಂದಣಿ ಪುಸ್ತಕದಲ್ಲಿ ಈ ಮುಂದಿನಂತೆ ನಮೂದಿಸಲಾಗಿದೆ, ವಾಸ್ಕೋ ಡಿ ಗಾಮಾ ಹಡಗಿನಲ್ಲಿ ಆಫ್ರಿಕಾದ ಝಂಝೀಬಾರ ಸಮೀಪ ಬಂದಿದ್ದನು. ಅಲ್ಲಿ ಅವನಿಗೆ ತನ್ನ ಹಡಗಿಗಿಂತ ಮೂರು ಪಟ್ಟು ದೊಡ್ಡದಾಗಿರುವ ಒಂದು ಹಡಗು ಕಾಣಿಸಿತು. ಅವನು ಆ ಹಡಗಿನ ಮಾಲೀಕನ ಬಗ್ಗೆ ಕೇಳಿದನು. ಆಗ ಅವನಿಗೆ ಆ ಹಡಗಿನ ಮಾಲೀಕನು ‘ಚಂದನ’ ಎಂಬ ಹೆಸರಿನ ಹಿಂದುಸ್ಥಾನದ ಗುಜರಾತಿ ವ್ಯಾಪಾರಿಯೆಂದು ತಿಳಿಯಿತು. ಸಾಗುವಾನಿ ಹಾಗೂ ಮಸಾಲೆಗಳನ್ನು ತೆಗೆದುಕೊಂಡು ಅವನು ಆಫ್ರಿಕಾಗೆ ಬಂದಿದ್ದನು. ಅವನು ವಜ್ರಗಳನ್ನು ಖರೀದಿಸಿ ಹಿಂತಿರುಗಿ ಹಿಂದುಸ್ಥಾನಕ್ಕೆ ಹೋಗುವವನಿದ್ದನು ! ಅನಂತರ ಆ ‘ಚಂದನ’ ವ್ಯಾಪಾರಿಯ ಹಡಗಿನ ಹಿಂದೆಯೇ ತನ್ನ ಹಡಗನ್ನು ನಡೆಸುತ್ತಾ ವಾಸ್ಕೋ ಡಿ ಗಾಮಾನು ಹಿಂದುಸ್ಥಾನಕ್ಕೆ ಬಂದನು !
ನಮ್ಮ ಪರಾಕ್ರಮಿ, ವಿಜಯೀ, ತೇಜತ್ವ, ಪ್ರಜ್ಞಾವಂತ, ಶ್ರೇಷ್ಠ ತಂತ್ರಜ್ಞಾನ, ವಿಜ್ಞಾನದ ಇತಿಹಾಸವನ್ನು ಬ್ರಿಟಿಷರು ಹಾಗೂ ಮತಾಂಧರು ನಾಶಗೊಳಿಸಿದರು. ಅದನ್ನು ಪುನಃ ಬರೆಯ ಬೇಕು. ಆ ಇತಿಹಾಸದಿಂದ ಪ್ರೇರಣೆ ದೊರೆಯುವುದು ಹಾಗೂ ಜೀವನನಿಷ್ಠೆ, ಸಂಸ್ಕ ತಿನಿಷ್ಠೆ, ಧ್ಯೇಯನಿಷ್ಠೆ, ರಾಷ್ಟ್ರನಿಷ್ಠೆ ಇತ್ಯಾದಿ ನಿರ್ಮಾಣವಾಗುವುದು ಹಾಗೂ ಪುನಃ ನಮ್ಮ ದೇಶವು ಎಲ್ಲ ಕ್ಷೇತ್ರಗಳಲ್ಲಿ ವೈಭವಶಾಲಿ ಶಿಖರವನ್ನೇರುವುದು. ಅದಕ್ಕಾಗಿ ಇತಿಹಾಸವನ್ನು ಪುನರ್ಲೇಖನ ಮಾಡುವುದೇ ಏಕೈಕ ಪರ್ಯಾಯ ವಾಗಿದೆ.’ – ಶ್ರೀ. ದುರ್ಗೇಶ ಪರೂಳಕರ, ಹಿಂದೂ ಮಹಾಸಭಾ.
ಅಲೆಕ್ಸಾಂಡರ್‌ನನ್ನು ಹಿಮ್ಮೆಟ್ಟಿಸಿದ ಭಾರತೀಯ ಗಣರಾಜ್ಯಗಳು !ಜಗತ್ತನ್ನು ಗೆಲ್ಲುವ ಇಚ್ಛೆಯಿಂದ ಅಲೆಕ್ಸಾಂಡರ್ ಪ್ರದೇಶಗಳನ್ನು ಗೆಲ್ಲುತ್ತ ಭಾರತಕ್ಕೆ ಬಂದನು; ಆದರೆ ಸಿಂಧು ನದಿಯನ್ನು ದಾಟಿ ಒಳಗೆ ಬರಲು ಆಗಲಿಲ್ಲ. ಆಗ ಭಾರತದಲ್ಲಿ ಅಖಂಡ ರಾಜ್ಯವಿರದಿದ್ದರೂ, ಅನೇಕ ಗಣರಾಜ್ಯದ ಶೂರವೀರ ರಾಜರೊಂದಿಗೆ ಯುದ್ಧ ಮಾಡಬೇಕಾಯಿತು, ಕೊನೆಗೆ ಅವನು ಸೋತು ಸುಣ್ಣವಾದನು. ರಾಜರಷ್ಟೇ ಅಲ್ಲದೆ ಆಗ ಅವನಿಗೆ ಮತ್ತು ಅವನ ಸೈನ್ಯಕ್ಕೆ ಸಂಧಿಸಿದ ಅರಣ್ಯದಲ್ಲಿರುವ ಅನೇಕ ಯೋಗಿಗಳು, ಸಂನ್ಯಾಸಿಗಳು ಮತ್ತು ಯತಿ ಬ್ರಾಹ್ಮಣರು ಸಹ ನಿರ್ಭಯ, ನಿಃಸಂಘ ಮತ್ತು ನಿಸ್ಪೃಹ ಇರುವುದರಿಂದ ಅವರ ಕ್ಷಾತ್ರಧರ್ಮಿವಾಣಿಯಿಂದ ಬರುವ ತೀಕ್ಷ್ಣ ವಾಕ್‌ಬಾಣಗಳಿಂದ ಅಲೆಕ್ಸಾಂಡರ್ ಗಾಯಗೊಳ್ಳುತ್ತಿದ್ದನು. ಅವರ ಈ ನಿಃಸಂಘ ವೃತ್ತಿಯಿಂದ ಗಣರಾಜ್ಯದಲ್ಲಿಯ ರಾಜ್ಯಪಾಲಕರ ಮೇಲೆ ಅವರ ಪ್ರಭಾವವಿರುತ್ತಿತ್ತು. ಆದ್ದರಿಂದ ಅಲೆಕ್ಸಾಂಡರ್ ವಿರುದ್ಧ ಗುಪ್ತ ಮತ್ತು ಬಹಿರಂಗವಾಗಿ ಆಕ್ರೋಶ ಹೊತ್ತಿ ಉರಿಯುತ್ತಿತ್ತು. ಈ ಸಂನ್ಯಾಸಿ ಯತಿಗಳ ಚಮತ್ಕಾರ ಮತ್ತು ಪಾಂಡಿತ್ಯವನ್ನು ನೋಡಿ ಅಲೆಕ್ಸಾಂಡರ್ ಬೆರಗಾದನು. ಅಸಂಘಟಿತರಾಗಿದ್ದ ಪ್ರತಿಯೊಂದು ಗಣರಾಜ್ಯವು ಅಲೆಕ್ಸಾಂಡರ್‌ನೊಂದಿಗೆ ಹೋರಾಡುವಾಗ ಗಾಯಗೊಂಡು ಪರಾಭವ ಹೊಂದುತ್ತಿತ್ತು. ಆದರೂ ಮುಂದಿನ ಗಣರಾಜ್ಯದ ರಾಜನು ಅಷ್ಟೇ ಧೈರ್ಯದಿಂದ ಅವನೊಂದಿಗೆ ಯುದ್ಧ ಮಾಡಲು ಮುಂದೆ ನಿಲ್ಲುತ್ತಿದ್ದನು. ಗ್ರೀಕ್ ಸೇನೆಯು ರಾಜ್ಯ ಗೆಲ್ಲುತ್ತಾ ಮುಂದೆ ಸಾಗಿತು, ಆದರೆ ಒಬ್ಬ ರಾಜನೂ ಹೆದರಿ ಒಪ್ಪಂದ ಮಾಡಿಕೊಳ್ಳಲು ಸಿದ್ಧನಿರಲಿಲ್ಲ. (ಆಧಾರ : ಸಹಾ ಸೊನೇರಿ ಪಾನೆ, ಸ್ವಾತಂತ್ರ್ಯವೀರ ಸಾವರಕರ) |