ಹಿಂದೂಗಳೇ, ಉನ್ನತ ಋಷಿಸಂಸ್ಕೃತಿಯನ್ನು ಅರಿತುಕೊಳ್ಳಿರಿ !

ಶ್ರೀರಾಮನು ದುರ್ಗಮವಾದಂತಹ ಲಂಕೆಗೆ ಸೈನ್ಯದೊಂದಿಗೆ ನುಗ್ಗಿ ‘ಸೀತೆಯನ್ನು ಅಪಹರಿಸಿದ ರಾವಣನನ್ನು ಪರಾಭವಗೊಳಿಸಿ, ಸಂಹಾರ ಮಾಡಿ, ಸೀತೆಯನ್ನು ಮುಕ್ತ ಮಾಡಿದನು. ಶ್ರೀರಾಮನ ಇಂತಹ ಪರಾಕ್ರಮದ ಇತಿಹಾಸವನ್ನು ವಾಲ್ಮೀಕಿಯವರಿಗೆ ಬರೆದಿಡ ಬೇಕೆಂದೆನಿಸಿತು ಮತ್ತು ಇಂದು ಲಕ್ಷಗಟ್ಟಲೆ ವರ್ಷಗಳ ನಂತರವೂ ಅದು ಮನುಜಕುಲಕ್ಕೆ ಹಿತಕಾರಿ ಉಪದೇಶ ಮಾಡುವಂತಿದೆ. ಇದೇ ರಾಮಾಯಣದಂತಹ ಗ್ರಂಥಗಳ ಅಧ್ಯಯನ ಮಾಡಿ ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯದ ಭವ್ಯ ಕಾರ್ಯವನ್ನು ಮಾಡಿದರು. ಚಿಕ್ಕ-ಪುಟ್ಟ ಘಟನೆಗಳು ಕೂಡಾ ಪ್ರೇರಣಾದಾಯಿ ಅಥವಾ ಮಾರ್ಗದರ್ಶಕವೆನಿಸಿದಾಗ ಅವುಗಳಿಗೆ ಐತಿಹಾಸಿಕ ಮಹತ್ವವು ಪ್ರಾಪ್ತವಾಗುತ್ತದೆ. ಹಿಂದೂಸ್ಥಾನವು ಎಂತಹ ಭಾಗ್ಯವಂತ ದೇಶವೆಂದರೆ ಇಲ್ಲಿ ವಾಲ್ಮೀಕಿ ಮತ್ತು ವೇದವ್ಯಾಸರಂತಹ ಇಬ್ಬರು ಮಹಾನ ಇತಿಹಾಸ ಲೇಖಕರು ಜನಿಸಿದರು. ವಾಲ್ಮೀಕಿಯವರು ರಾಮಾಯಣ ಮತ್ತು ವೇದವ್ಯಾಸರು ಮಹಾಭಾರತ ಹಾಗೂ ಹದಿನೆಂಟು ಪುರಾಣಗಳನ್ನು ಬರೆದರು.’ – ರಾಷ್ಟ್ರೀಯ ಪ್ರವಚನಕಾರರು ಭಾರತಾಚಾರ್ಯ ಸು.ಗ. ಶೇವಡೆ

ಇಂದು ವಿಜ್ಞಾನಯುಗ ನಡೆಯುತ್ತಿದೆ ಮತ್ತು ವಿಜ್ಞಾನವನ್ನು ಯುರೋಪ ನಿರ್ಮಿಸಿತು ಎಂಬ ಒಂದು ಅಪನಂಬಿಕೆ ಇದೆ. ಈ ಅಪನಂಬಿಕೆಯನ್ನು ಆಂಗ್ಲರೇ ಉದ್ದೇಶಪೂರ್ವಕವಾಗಿ ತುಂಬಿದ್ದಾರೆ. ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿನ ಶಿಕ್ಷಣದಲ್ಲಿ ‘ವಿಜ್ಞಾನವು ಯುರೋಪನಲ್ಲಿಯೇ ಉಗಮಗೊಂಡಿತು’ ಎಂಬುದನ್ನು ಕಲಿಸಲಾಗುತ್ತದೆ. ಇದರಿಂದಾಗಿ ಜನಮನದಲ್ಲಿ ಆಂಗ್ಲರಿಂದ ಹೆಚ್ಚು ಪ್ರಭಾವ ಬಿದ್ದಿತು. ವಾಸ್ತವದಲ್ಲಿ ವಿಜ್ಞಾನವು ಪ್ರಾಚೀನ ಭಾರತದಲ್ಲಿಯೇ ಜನಿಸಿತು; ಅದರ ಅನೇಕ ದಾಖಲೆಗಳಿವೆ. ಆದರೆ ನಮ್ಮ ವಿಜ್ಞಾನಿಗಳು ಅವುಗಳನ್ನು ಜನರ ಮುಂದೆ ಮಂಡಿಸುವುದಂತೂ ದೂರದ ಮಾತಾಯಿತು, ಕಡಿಮೆ ಪಕ್ಷ ಅವನ್ನು ಕಣ್ಣೆತ್ತಿಯೂ ನೋಡುವುದಿಲ್ಲ !

ಭಾರತೀಯ ವಿಜ್ಞಾನಿಗಳ ಗೌರವಶಾಲಿ ಇತಿಹಾಸ !

‘ಭಾರತದ ಪ್ರಾಚೀನ ಋಷಿಮುನಿ ಗಳು ಭಾರತೀಯರೆಲ್ಲರೂ ಅಭಿಮಾನ ಪಡುವಂತಹ ಸಾಂಸ್ಕತಿಕ ಸಂಗ್ರಹದಲ್ಲಿನ  ಅಮೂಲ್ಯ ರತ್ನಗಳಾಗಿದ್ದಾರೆ ! ಅದರಂತೆ ಮಹರ್ಷಿ ವ್ಯಾಸರು, ಆರ್ಯ ಚಾಣಕ್ಯರು, ಆದಿ ಶಂಕರಾಚಾರ್ಯರಂತಹ ಶ್ರೇಷ್ಠ ಮಹಾಪುರುಷರಿಂದಲೇ ಭಾರತದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಇತಿಹಾಸವು ಗೌರವಯುತವಾಗಿದೆ. ಕೇವಲ ಪಾಶ್ಚಾತ್ಯ ವಿಜ್ಞಾನಿಗಳನ್ನು ವೈಭವೀಕರಿಸುವ ಭಾರತೀಯರೇ, ಭಾರತೀಯ ಋಷಿಮುನಿಗಳ ಮತ್ತು ಪ್ರಾಚೀನ ಶಾಸ್ತ್ರಜ್ಞರ ಬುದ್ಧಿಯ ಪ್ರಗಲ್ಭತೆಯಿಂದ ಸ್ಫೂರ್ತಿ ಪಡೆದು ನಾವು ಮಾರ್ಗಕ್ರಮಣ ಮಾಡಿದರೆ ಭಾರತೀಯರ, ಹಿಂದೂಗಳ ಕಳೆದುಹೋದ ಸ್ವತ್ವವನ್ನು ಮತ್ತು ಗತವೈಭವವನ್ನು ನಾವು ಮರಳಿ ಪಡೆಯಬಹುದು !

ಮಹಾನ ಹಿಂದೂ ಸಂಸ್ಕ ತಿ !

ನಮ್ಮ ಹಿಂದೂ ಸಂಸ್ಕತಿಯಲ್ಲಿರುವುದೆಲ್ಲ ಅದ್ವಿತೀಯವಾಗಿದೆ; ಏಕೆಂದರೆ ಅದರಲ್ಲಿ ಸನಾತನ ಸತ್ಯವಿದೆ. ಅದೆಂತಹ ಸತ್ಯವೆಂದರೆ ಕಾಲದ ಸತ್ಯವಾಗಿದೆ, ಅದೆಂತಹ ಸತ್ಯವೆಂದರೆ ಅದು ಇಂದಿಗೂ ಸತ್ಯವಾಗಿದೆ; ಆದರೆ ಇಂದು ನಾವು ಅದನ್ನು ಕಳೆದುಕೊಂಡಿದ್ದೇವೆ. ಇದು ಎಂತಹ ಸತ್ಯವೆಂದರೆ ಯಾವುದು ನಾಳೆಯೂ ಸತ್ಯವಾಗಿರುವುದು. – ಯಶೋಧರ್ಮನ್

ಇತರ ದೇಶದಲ್ಲಿನ ಪೌರಾಣಿಕ ವಾಙ್ಮಯ ಮತ್ತು ಭಾರತೀಯ ಪೌರಾಣಿಕ ವಾಙ್ಮಯ ಇವುಗಳಲ್ಲಿ ಮೂಲತಃ ವ್ಯತ್ಯಾಸವಿದ್ದು ಭಾರತೀಯ ಪುರಾಣಗಳಲ್ಲಿ ಸಾಮಾನ್ಯವೆನಿಸುವ ಸಂಗತಿಗಳಿಗೂ ಶಾಸ್ತ್ರಾಧಾರವಿದೆ. ಪುರಾಣಗಳಲ್ಲಿ ಸಾಮಾನ್ಯ, ಮೂಢನಂಬಿಕೆ ಅನಿಸುವಂತಹ ಸಂಗತಿಗಳಿಗೂ ಜೋಡಣೆ ಇರುವುದು ಕಾಣಿಸುತ್ತದೆ.ಈಗ ಗ್ರಹಣಗಳದ್ದೇ ನೋಡಿರಿ ! ರಾಹು-ಕೇತು ಈ ರಾಕ್ಷಸರು ಅಥವಾ ಅಸುರರು ಚಂದ್ರ ಮತ್ತು ಸೂರ್ಯ ಈ ದೇವತೆಗಳನ್ನು ನುಂಗುತ್ತಾರೆ, ಇದು ಕಥೆಯ ಭಾಗವಾಗಿದೆ; ಆದರೆ ಇದರೊಂದಿಗೆಯೇ ಪುರಾಣವು ನೆರಳಿನಿಂದ ಗ್ರಹಣವಾಗುತ್ತದೆಯೆಂಬ ಶಾಸ್ತ್ರೀಯ ಭಾಗವನ್ನೂ ಹೇಳಿದೆ. ಚಿಕ್ಕ ಮಕ್ಕಳಿಗಾಗಿ ಮೊದಲಿನದ್ದು ಮತ್ತು ಹಿರಿಯರಿಗಾಗಿ ಎರಡನೇಯದ್ದು. ಪೃಥ್ವಿಯ ನೆರಳಿನಿಂದ ಚಂದ್ರಗ್ರಹಣ ಮತ್ತು ಚಂದ್ರನ ನೆರಳಿನಿಂದ ಸೂರ್ಯ ಗ್ರಹಣವು ಆಗುತ್ತದೆ, ಈ ಜ್ಯೋತಿಷ್ಯ ಶಾಸ್ತ್ರದ ಸತ್ಯವು ಪುರಾಣದಲ್ಲಿ ಸ್ಪಷ್ಟವಾಗಿ ಬಂದಿದೆ. ಭಾರತೀಯ ಜ್ಯೋತಿಷ್ಯಶಾಸ್ತ್ರವಂತು ಇದನ್ನು ಮೊದಲೇ ಹೇಳಿದೆ.

ಭಾರತದ ಗೌರವಯುತ ವೈಜ್ಞಾನಿಕ ಇತಿಹಾಸ !

ಇಂದು ಮನುಕುಲಕ್ಕೆ ವಿಜ್ಞಾನವನ್ನು ಬಿಟ್ಟರೆ ಬೇರೆ ಪರ್ಯಾಯವೇ ಇಲ್ಲ. ಅಷ್ಟೇ ಅಲ್ಲದೇ ಅದು ಉಳಿಯುವುದೂ ಇಲ್ಲವೆಂಬ ಬೊಬ್ಬೆಯು ಎಲ್ಲೆಡೆ ಕೇಳಲಾರಂಭವಾಗಿದೆ. ಧರ್ಮಕ್ಕೆ ಎರಡನೇಯ ಸ್ಥಾನವನ್ನು ನೀಡಿ ‘ಧರ್ಮವೆಂದರೆ ಬುರುಸು ಹಿಡಿದ ವಿಚಾರಪದ್ಧತಿ’ ಎಂಬ ದೃಷ್ಟಿಯಿಂದ ಅದರತ್ತ ನೋಡಲಾಗುತ್ತದೆ. ಅದರಿಂದಾಗಿ ಧರ್ಮವನ್ನು ದೂರ ಸರಿಸಿ ಪಾಶ್ಚಾತ್ಯರ ಅಂಧಾನುಕರಣೆ ಮಾಡುವ ಸ್ಪರ್ಧೆಯು ಎಲ್ಲೆಡೆಯಲ್ಲಿ ಆರಂಭವಾಗಿದೆ. ಇವೆಲ್ಲವನ್ನು ಮಾಡುವಾಗ ಇಂದಿನ ಹಿಂದೂಗಳು (ಭಾರತೀಯ) ತಮ್ಮ ತನ್ನತನವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಕೆಲವೇ ಸಮಯದಲ್ಲಿ ಅವರು ತಮ್ಮನ್ನೂ ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಹಿಂದೂಗಳಿಗೆ ಅವರ ಗತವೈಭವವನ್ನು ಪುನಃ ಪಡೆಯಲು ಅವರು ತಮ್ಮ ಗೌರವಶಾಲಿ ಇತಿಹಾಸವನ್ನು ಸ್ಮರಿಸಬೇಕು. ಭಾರತದ ಗೌರವಶಾಲಿ ವೈಜ್ಞಾನಿಕ ಇತಿಹಾಸವು ಪಾಶ್ಚಾತ್ಯ ಸಂಶೋಧಕರಿಗೆ ತಲೆ ತಗ್ಗಿಸುವಂತಿದೆ. ನಮ್ಮ ಪ್ರಾಚೀನ ಭಾರತೀಯ ಋಷಿಮುನಿಗಳ ಬುದ್ಧಿಯ ಪ್ರಗಲ್ಭತೆಯನ್ನು ನೋಡಿ ಇಂದಿನ ವಿಜ್ಞಾನಿಗಳೂ ಬೆರಗಾಗುತ್ತಾರೆ.

ಎಲ್ಲ ಭಾರತೀಯರಿಗೆ ಅಭಿಮಾನವೆನಿಸುವ ಈ ಕೊಡುಗೆಯ ಕೆಲವು ಅಮೂಲ್ಯ ರತ್ನಗಳನ್ನು ತಮ್ಮ ಮುಂದೆ ಸಮರ್ಪಿಸುತ್ತಿದ್ದೇವೆ. ಇದರಿಂದ ಸ್ಫೂರ್ತಿ ಪಡೆದುಕೊಂಡು ಭಾರತೀಯರು ಮಾರ್ಗಕ್ರಮಣ ಮಾಡಿದರೆ ಈ ಸಂಚಿಕೆಯು ನಿಜವಾದ ಅರ್ಥದಲ್ಲಿ ಸಾರ್ಥಕವಾಯಿತೆಂದು ಹೇಳಬಹುದು.