ಧಾತುವಿಜ್ಞಾನ

ಅ. ಭಾರತದಲ್ಲಿ ‘ಸತುವು’ (ಝಿಂಕ್) ಈ ಧಾತುವಿನ ಸಂಶೋಧನೆಯಾಗುವುದು : ಕೆಲವು ವರ್ಷಗಳ ಹಿಂದೆ ಗ್ರೀಕ್‌ನ ರಾಜಧಾನಿ ಅಥೆನ್ಸ್‌ನ ಸಮೀಪದ ಅಖೋರಾ ಎಂಬ ಹಳ್ಳಿಯಲ್ಲಿ ಉತ್ಖನನ ನಡೆಯುತ್ತಿರುವಾಗ ೨ x ೨ ಮೀಟರಿನ ಸತುವಿನ ಬಿಲ್ಲೆ ಸಿಕ್ಕಿತು, ಅದರ ಮೇಲೆ ‘ತಕ್ಷಶಿಲಾ’ ಎಂದು ಬರೆಯಲಾಗಿತ್ತು. ಈ ಬಿಲ್ಲೆಯ ಕಾಲಾವಧಿಯನ್ನು ‘ಕಾರ್ಬನ್ ಡೇಟಿಂಗ್’ ಪದ್ಧತಿಯಲ್ಲಿ ತೆಗೆಯಲಾಯಿತು. ಆಗ ಅದು ನೂರಾರು ವರ್ಷ ಹಳೆಯದಾಗಿದೆ ಎಂದು ತಿಳಿದು ಬಂದಿತು. ಬಿಲ್ಲೆಯ ನಿರ್ಮಿತಿಯಲ್ಲಿ ಉಪಯೋಗಿಸಿದ ‘ಸತುವು’ ಜಗತ್ತಿನ ಎಲ್ಲಕ್ಕಿಂತ ಶುದ್ಧವಾದ ‘ಸತುವು’ ಎಂದು ತಿಳಿಯಲಾಗುತ್ತದೆ. ಭಾರತೀಯರ ದುರ್ದೈವವೆಂದರೆ, ಇಂದು ಅದರ ಹಕ್ಕು (Patent) ಒಬ್ಬ ಬ್ರಿಟೀಷನ ಹೆಸರಿನಲ್ಲಿದೆ. ೧೭ ನೇ ಶತಮಾನದಲ್ಲಿ ಬ್ರಿಟಿಷನೊಬ್ಬನು ಆ ಸತುವನ್ನು (Zinc) ಕಂಡು ಹಿಡಿದು ಅದರ ಹಕ್ಕನ್ನು (Patent) ತೆಗೆದುಕೊಂಡನು. ಈ ಸತುವಿಗೆ ಅವನು ‘ಮಲಬಾರ ಲೆಡ್’ (Malabar Lead) ಎಂದು ಹೇಳಿದ್ದಾನೆ.

ಆ. ಇಂದ್ರಪ್ರಸ್ಥದಲ್ಲಿ ಸಾವಿರಾರು ವರ್ಷಗಳು ತುಕ್ಕು ಹಿಡಿಯದ ಲೋಹ ಸ್ತಂಭ : ಐ.ಐ.ಟಿ. ಕಾನ್ಪುರದ ಪ್ರಾ. ಬಾಲಸುಬ್ರಹ್ಮಣ್ಯಂ ಇವರು ‘NDT’ (Non-Destructive Technology) ಮೂಲಕ ಇಂದ್ರಪ್ರಸ್ಥದ ಲೋಹ ಸ್ತಂಭವನ್ನು ಅಧ್ಯಯನ ಮಾಡಿದರು. ಅವರಿಗೆ ಆ ಸ್ತಂಭದಲ್ಲಿ ೫೦ Micron ನಷ್ಟು ತೆಳ್ಳಗಿನ ಐರನ್ ಫಾಸ್ಪೇಟ್‌ನ ಬಣ್ಣ ಹಚ್ಚಿರುವುದು ತಿಳಿಯಿತು. ಇಂತಹ ಸ್ತಂಭವು ಸಾವಿರಾರು ವರ್ಷಗಳ ಭಾರತೀಯ ವಿಜ್ಞಾನ ಪರಂಪರೆಯನ್ನು ಸಾರುತ್ತಿದೆ.

‘ಇಂದು ಹಿಂದೂ ಯುವಕರಿಗೆ ನಿಜವಾದ ಇತಿಹಾಸ ಹೇಳಲಾಗುತ್ತಿಲ್ಲ. ಇದರಿಂದಾಗಿ ಹೊಸ ಇತಿಹಾಸವನ್ನು ಹೇಗೆ ರೂಪಿಸುವರು ?’ – ಪ್ರಾ. ರಾಜೇಂದ್ರ ಠಾಕೂರ, ಉತ್ತೂರ, ಕೊಲ್ಹಾಪುರ ಜಿಲ್ಲೆ.

‘ನಮ್ಮ ನಿಜವಾದ ಇತಿಹಾಸವು ಇಂದು ಇತಿಹಾಸದಲ್ಲಿ ಜಮೆಯಾಗಿದೆ. – ಹ.ಭ.ಪ. ರಾಮಕೃಷ್ಣ ಗರ್ದೆ, ಕೀರ್ತನಕಾರರು, ಗೋವಾ.