ಆಚಾರ್ಯ ವಿಶ್ವಂಭರರು ಮಾಡಿದ ವಿಮಾನದ ವ್ಯಾಖ್ಯೆ ಅತ್ಯಂತ ಅರ್ಥಪೂರ್ಣವಾಗಿದ್ದು ಆ ಕಾಲದಲ್ಲಿ ಸ್ವರ್ಗಲೋಕ ಹಾಗೂ ವಿವಿಧ ಗ್ರಹಗಳ ಮೇಲೆ ಹೋಗಲು ಅಂತರಿಕ್ಷ ವಿಮಾನಗಳಿದ್ದವು ಎಂಬುದು ಸ್ಪಷ್ಟವಾಗುತ್ತದೆ. ಅಂತಹ ಪ್ರಸಂಗಗಳನ್ನೂ ಪ್ರಾಚೀನ ಸಾಹಿತ್ಯಗಳಲ್ಲಿ ವರ್ಣಿಸಲಾಗಿದೆ.
ಪ್ರಾಚೀನ ವಿಮಾನಗಳ ವಿಧಗಳು
೧. ಮಂತ್ರವಿಮಾನ: ತ್ರೇತಾಯುಗದಲ್ಲಿ ಮಂತ್ರವಿಮಾನಗಳು ಉಪಯೋಗದಲ್ಲಿದ್ದವು. ಮಂತ್ರ ಹಾಗೂ ಸಿದ್ಧಿಗಳ ಸಹಾಯದಿಂದ ಆ ಕಾಲದ ವ್ಯಕ್ತಿಗಳು ಒಂದು ಸ್ಥಳದಿಂದ ತಾವು ಇಚ್ಛಿಸಿದ ಇನ್ನೊಂದು ಸ್ಥಳಕ್ಕೆ ಆಕಾಶಮಾರ್ಗದ ಮೂಲಕ ಪ್ರಯಾಣ ಬೆಳೆಸುತ್ತಿದ್ದರು. ಶೌನಕಋಷಿಗಳ ಸೂತ್ರಕ್ಕನುಸಾರ ತ್ರೇತಾಯುಗದಲ್ಲಿ ೨೫ ವಿಧದ ಮಂತ್ರವಿಮಾನಗಳಿದ್ದವು.
೨. ತಾಂತ್ರಿಕ ವಿಮಾನ : ದ್ವಾಪರಯುಗದಲ್ಲಿ ೫೬ ಪ್ರಕಾರದ ತಾಂತ್ರಿಕ ವಿಮಾನಗಳಿದ್ದವು. ತಾಂತ್ರಿಕವಿಮಾನದಲ್ಲಿ ಪಂಚ ಮಹಾಭೂತಗಳಲ್ಲಿನ ಶಕ್ತಿ ಹಾಗೂ ಗುಣಗಳನ್ನು ಮಂತ್ರ ಶಕ್ತಿಯೊಂದಿಗೆ ಉಪಯೋಗಿಸಲಾಗಿತ್ತು. ಅಂದರೆ ತಂತ್ರ ವಿಮಾನದಲ್ಲಿ ಮಂತ್ರಶಕ್ತಿಗೆ ವನಸ್ಪತಿ, ಖನಿಜ ಇತ್ಯಾದಿ ಶಕ್ತಿಯನ್ನು ಹಾಗೂ ಇಂಧನವನ್ನು ಜೋಡಿಸಲಾಗುತ್ತಿತ್ತು.
೩. ಕೃತಕ ವಿಮಾನ (ಯಾಂತ್ರಿಕ ವಿಮಾನ) : ದ್ವಾಪರಯುಗದ ಕೊನೆಗೆ ಮಂತ್ರಸಿದ್ಧಿ ಹಾಗೂ ಯೋಗಸಿದ್ಧಿ ಪಡೆದಿರುವ ವ್ಯಕ್ತಿಗಳು ಬಹಳ ಕಡಿಮೆಯಾದರು. ಈ ಕಾಲದಲ್ಲಿ ಆಕಾಶಮಾರ್ಗದ ಪ್ರಯಾಣವು ಅಸಾಧ್ಯವಾಯಿತು. ಆಗ ಮಹರ್ಷಿಗಳು ಕೃತಕ ವಿಮಾನ ಅಂದರೆ ಯಂತ್ರವಿಮಾನವನ್ನು ತಯಾರಿಸಿದರು. ಯಂತ್ರ ವಿಮಾನಗಳಲ್ಲಿ ೨೫ ವಿಧಗಳಿದ್ದವು.
೩೨ ವಿಮಾನಗಳ ರಹಸ್ಯಗಳು
ವಿಮಾನ ಚಾಲಕನಿಗೆ ‘ವಿಮಾನಕರ್ಮಿ’ ಎಂಬ ಶಬ್ದಪ್ರಯೋಗವಿದೆ ಹಾಗೂ ವಿಮಾನ ಚಲನೆಯ ಪದ್ಧತಿಗಾಗಿ ‘ವಿಮಾನ ರಹಸ್ಯ’ ಎಂಬ ಶಬ್ದವನ್ನು ಉಪಯೋಗಿಸಲಾಗುತ್ತಿತ್ತು. ಪ್ರಾಚೀನ ವಿಮಾನ ರಚನಕಾರರಿಗೆ ೩೨ ವಿಮಾನರಹಸ್ಯಗಳು ತಿಳಿದಿದ್ದವು. ಆ ರಹಸ್ಯಗಳ ವರ್ಣನೆಯು ಮನೋವೇಧಕ ಹಾಗೂ ವಿಚಾರ ಪ್ರವರ್ತಕವಾಗಿವೆ.
ವಿವಿಧ ಯಂತ್ರಗಳು
೧. ವೈಶ್ವಾನರನಾಲ ಯಂತ್ರ : ವಿಮಾನದಲ್ಲಿನ ಪಾಕಶಾಲೆಯಲ್ಲಿನ ಅಗ್ನಿ ನಿರ್ಮಿತಿಗಾಗಿ ಈ ಯಂತ್ರವನ್ನು ಉಪಯೋಗಿಸುತ್ತಿದ್ದರು. ಎಲ್.ಪಿ.ಜಿ. ವಾಯುವಿಗಿಂತ ಅನೇಕ ಪಟ್ಟು ಸುರಕ್ಷಿತವಾಗಿರುವ ಈ ಯಂತ್ರವನ್ನು ಕಾರ್ಖಾನೆ ಹಾಗೂ ಚಳಿ ಪ್ರದೇಶಗಳಲ್ಲಿ ಮನೆಗಳನ್ನು ಬೆಚ್ಚಗಿಡಲು ಹಾಗೂ ಪಾಕಶಾಲೆಯಲ್ಲಿಯೂ ಉಪಯೋಗಿಸುತ್ತಿದ್ದರು.
೨. ಗುಹಾಗರ್ಭದರ್ಶ ಯಂತ್ರ : ಭೂಮಿಯಲ್ಲಿ ಗುಪ್ತವಾಗಿ ಅಡಗಿಸಿಟ್ಟಿರುವ ವಿಮಾನ ಭೇದಿಸುವ ತೋಪುಗಳನ್ನು ಹುಡುಕಲು ಈ ಯಂತ್ರವನ್ನು ಉಪಯೋಗಿಸಲಾಗುತ್ತಿತ್ತು. ರೇಡಿಯೋ ದೂರದರ್ಶಕದಂತೆ ಕಾಣಿಸುವ ಈ ಯಂತ್ರವನ್ನು ಪುನರ್ ನಿರ್ಮಿತಿ ಮಾಡಿ ವಿಕಸಿತಗೊಳಿಸಿದರೆ, ಅದು ಒಂದು ಅಲ್ಪ ಬೆಲೆಯಲ್ಲಿ ಹಾಗೂ ಅತ್ಯಂತ ಪ್ರಭಾವಿ ಉಪಕರಣವಾಗುವುದು.
೩. ಪೃಥ್ವಿಯಲ್ಲಿ ಹಾಗೂ ಅಂತರಿಕ್ಷದಲ್ಲಿ ಪ್ರವಾಸಕ್ಕಾಗಿ ಇಂಧನ ನಿರ್ಮಿತಿ : ಪ್ರಾಚೀನ ವಿಮಾನದಲ್ಲಿನ ೭ ಶಕ್ತಿಯಂತ್ರಗಳ ಪೈಕಿ ೩ ಯಂತ್ರಗಳ ಮೂಲಕ ಚಂದ್ರ, ಸೂರ್ಯ ಹಾಗೂ ಆಕಾಶದಿಂದ ಇಂಧನವನ್ನು ತಯಾರಿಸುತ್ತಿದ್ದರು.
೪. ಆಕಾಶದಲ್ಲಿ ವಿದ್ಯುತ್ತಿನಿಂದ ರಕ್ಷಣಾ ವ್ಯವಸ್ಥೆ : ಮಹರ್ಷಿ ಭಾರದ್ವಾಜರು ‘ವಿದ್ಯುತ್‌ದರ್ಪಣ ವ್ಯವಸ್ಥೆ’ ವಿಷಯದಲ್ಲಿ ಮಾಹಿತಿ ನೀಡುವಾಗ ಆಕಾಶದ ಸಿಡಿಲಿನಿಂದ ವಿಮಾನಕ್ಕಾಗುವ ಹಾನಿ ಹಾಗೂ ಅದನ್ನು ತಪ್ಪಿಸುವ ಉಪಾಯ ಇತ್ಯಾದಿಗಳ ವಿಶ್ಲೇಷಣೆ ಮಾಡಿದ್ದಾರೆ. ಇಂದಿನ ವಿಜ್ಞಾನವು ಅಭಿವೃದ್ಧಿ ಹೊಂದಿದ್ದರೂ ಸಿಡಿಲು ತಾಗಿದರೆ ಅಪಘಾತವಾಗುತ್ತದೆ.
೫. ಪ್ರಾಚೀನ ಭಾರತೀಯ ವಿಮಾನಗಳ ವರ್ಣನೆ ಹಾಗೂ ಹಾರುವ ತಟ್ಟೆಗಳ ವರ್ಣನೆಯಲ್ಲಿ ಸಾಮ್ಯತೆ ಇರುವುದು : ‘ಭಾರದ್ವಾಜ ಸಂಹಿತಾ’ ಗ್ರಂಥದಲ್ಲಿ ವಿಮಾನವನ್ನು ಹೇಗೆ ನಿರ್ಮಿಸಬೇಕು, ಎಂಬುದರ ವರ್ಣನೆ ಹಾಗೂ ‘ವಿವಿಧ ರೀತಿಯ ವಿಮಾನಗಳ ನಕ್ಷೆಯೂ ಇವೆ.’ – ಸ್ವಾಮಿ ದತ್ತಾವಧೂತ