ಕ್ರಿ.ಶ. ೮೦೦ ರಲ್ಲೇ ಗುರುತ್ವಾಕರ್ಷಣೆ ಮತ್ತು ಸೂಕ್ಷ್ಮದರ್ಶಕ ಯಂತ್ರದ ಬಗ್ಗೆ ಉಲ್ಲೇಖಿಸಿರುವ ಆದಿ ಶಂಕರಾಚಾರ್ಯರು !

ಗುರುತ್ವಾಕರ್ಷಣೆ

ಆದಿ ಶಂಕರಾಚಾರ್ಯರು ‘ಪೃಥ್ವಿಯ ಪ್ರಸಿದ್ಧ ದೇವತೆಯು ನಮಗೆ ಸಹಾಯ ಮಾಡಿ ನಮ್ಮನ್ನು ಕೆಳಗೆ ಎಳೆದು ಹಿಡಿಯದಿದ್ದರೆ ಈ ದೇಹವು ಜಡವಾಗಿರುವುದರಿಂದ ಅಂತರಿಕ್ಷದಲ್ಲಿ ಎಲ್ಲೋ ಹೋಗುತ್ತಿತ್ತು ಅಥವಾ ಬೀಳುತ್ತಿತ್ತು. ‘ವೈದಿಕ ವಿಜ್ಞಾನ’ದ ಆಧಾರದಿಂದಲೇ ಶಂಕರಾಚಾರ್ಯರು ಈ ಭಾಷ್ಯೆಯನ್ನು ಮಾಡಿದ್ದಾರೆ. ಶಂಕರಾಚಾರ್ಯರ ಕಾಲವನ್ನು ಸಾಧಾರಣವಾಗಿ ಕ್ರಿ.ಶ. ೮೦೦ ಎಂದು ಪರಿಗಣಿಸಲಾಗಿದೆ. ಆದುದರಿಂದ ನ್ಯೂಟನ್ ಗಿಂತ  ಸುಮಾರು ೧ ಸಾವಿರ ವರ್ಷಗಳಷ್ಟು ಹಿಂದೆ ಶಂಕರಾಚಾರ್ಯರು ಆಗಿ ಹೋಗಿದ್ದಾರೆ. ಆದರೆ ಆಧುನಿಕ ವಿಜ್ಞಾನವು ‘ಗುರುತ್ವಾಕರ್ಷಣೆಯನ್ನು ನ್ಯೂಟನ್ ಸಂಶೋಧನೆ ಮಾಡಿದ್ದಾನೆ’ ಎಂದು ಹೇಳುತ್ತದೆ.

(ಆಧಾರ : ವೈದಿಕ ವಿಜ್ಞಾನ ಮತ್ತು ವೇದಕಾಲ ನಿರ್ಣಯ, ಪುಟ ಕ್ರ. ೧೮೬, ಡಾ. ಪದ್ಮಾಕರ ವಿಷ್ಣುವರ್ತಕ)

ಸೂಕ್ಷ್ಮದರ್ಶಕ ಯಂತ್ರ

ಆದಿ ಶಂಕರಾಚಾರ್ಯರ ‘ಅಪರೋಕ್ಷಾ ನುಭೂತಿ’ಯ ಶ್ಲೋಕ ೮೧ ರಲ್ಲಿ ‘ಸೂಕ್ಷ ತ್ವೇ ಸರ್ವ ವಸ್ತುನಾಂ ಸ್ಥೂಲತ್ವಂ ಚ ಉಪನೇತ್ರತಃ | ತದ್ವತ್ ಆತ್ಮನಿ ದೇಹತ್ವಂ ಪಶ್ಯತಿ ಅಜ್ಞಾನ ಯೋಗತಃ !’ ಎಂದಿದ್ದಾರೆ. ಅಂದರೆ ಉಪನೇತ್ರದಿಂದ ಸೂಕ್ಷ್ಮ ವಸ್ತುಗಳೂ ಸ್ಥೂಲ ಮತ್ತು ದೊಡ್ಡದಾಗಿ ಕಾಣುವಂತೆ ತಮ್ಮಲ್ಲಿ ದೇಹತ್ವವನ್ನು ನೋಡುವುದು ಅಜ್ಞಾನವಾಗಿದೆ. ಆ ಕಾಲದಲ್ಲಿ ‘ಉಪನೇತ್ರ’ ಅಂದರೆ ‘ಕನ್ನಡಕ’ವು ಜನರ ನಿತ್ಯ ಬಳಕೆಯ ವಸ್ತುವಾಗಿರಬೇಕು. ಚಿಕ್ಕ ವಸ್ತುವನ್ನು ದೊಡ್ಡದಾಗಿ ಮಾಡಲು ಕನ್ನಡಕವನ್ನು ಬಹಿರ್ವಕ್ರ ಮಸೂರದಿಂದ ಮಾಡಲಾಗುತ್ತದೆ. ಸಹಜವಾಗಿಯೇ ಆ ಕಾಲದಲ್ಲಿ ಮಸೂರ ಇತ್ತು. ಹಾಗಾಗಿ ‘ದೂರದರ್ಶಕ’ ಇರುವ ಸಾಧ್ಯತೆಯಿದೆ. ಶಂಕರಾಚಾರ್ಯರ ಕಾಲ ಸುಮಾರು ಕ್ರಿ.ಶ. ೮ ನೇ ಶತಮಾನ ಎಂದು ತಿಳಿಯಲಾಗುತ್ತದೆ. ಆ ಸಮಯದಲ್ಲಿ ‘ಮಸೂರವನ್ನು ಭಾರತದಲ್ಲಿ ಬಳಸಲಾಗುತ್ತಿತ್ತು’ ಎಂಬುದು ಇದರಿಂದ ಕಂಡು ಬರುತ್ತದೆ. ಇತರ ಪಂಥದವರು ೧೦೦೦ ವರ್ಷಗಳ ಹಿಂದೆ ಮಸೂರವನ್ನು ಬಳಸಿರುವುದು ಎಲ್ಲಿಯೂ ನೋಂದಣಿಯಿಲ್ಲ. ಯುರೋಪಿನಲ್ಲಿ ೧೬ ನೇ ಶತಮಾನದ ಆರಂಭದ ನಂತರ ಮಸೂರದ ಸಂಶೋಧನೆಯಾಯಿತು.

(ವೈದಿಕವಿಜ್ಞಾನಮತ್ತು ವೇದ ಕಾಲನಿರ್ಣಯ, ಪುಟ ಕ್ರ.೧೫೧ ಮತ್ತು ೧೫೨, ಡಾ. ಪದ್ಮಾಕರ ವಿಷ್ಣು ವರ್ತಕ)