ಜಗತ್ಪ್ರಸಿದ್ಧ ವಿಜ್ಞಾನಿಗಳಿಗೆ ವೇದಾಂತಗಳಿಂದ ಕ್ವಾಂಟಮ್ ಸಿದ್ಧಾಂತದ ಸ್ಫೂರ್ತಿ ದೊರಕುವುದು
‘ಇಪ್ಪತ್ತನೇ ಶತಮಾನದ ಓರ್ವ ಪ್ರಸಿದ್ಧ ವಿಜ್ಞಾನಿ ಎರವಿನ್ ಸ್ಕ್ರಾಡಿಂಗರ್ ಎಂಬಾತನಿಗೆ ‘ಕ್ವಾಂಟಮ್ ಸಿದ್ಧಾಂತ’ದ ಸ್ಫೂರ್ತಿಯು ವೇದಾಂತಗಳಿಂದ ದೊರಕಿತ್ತು. ಈಗಿನ ಆಧುನಿಕ ರಸಾಯನಶಾಸ್ತ್ರ, ಜೀವ-ರಸಾಯನಶಾಸ್ತ್ರ, ಇಲೆಕ್ಟ್ರಾನಿಕ್ ಮತ್ತು ಗಣಕಯಂತ್ರಗಳು ಕ್ವಾಂಟಮ್ ಸಿದ್ಧಾಂತದ ಆಧಾರದಿಂದಲೇ ಇವೆ.’ (ಮಾಸಿಕ ಹಿಂದೂ ವಾಯಿಸ್, ಮಾರ್ಚ್ ೨೦೦೬, ಪುಟ ಕ್ರ. ೧೧)
ಅಣುವಿಜ್ಞಾನ
ಜಗತ್ತಿಗೆ ೨೦ ನೇ ಶತಮಾನದಲ್ಲಿ ಪರಮಾಣು ತಿಳಿಯಿತು; ಆದರೆ ನಮ್ಮಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಅದರ ನೋಂದಣಿ ಇದೆ.
ಇಂಧನ
೧. ಆಧುನಿಕ ವಿಜ್ಞಾನವು ಕಂಡುಹಿಡಿದ ‘ವಿದ್ಯುತ್ತಿನ’ ಬಗೆಗಿನ ಆಳವಾದ ಮಾಹಿತಿಯನ್ನು ಸಾವಿರಾರು ವರ್ಷಗಳ ಮೊದಲೇ ‘ಅಗಸ್ತಿ ಸಂಹಿತಾ’ ಈ ಗ್ರಂಥದಲ್ಲಿ ಬರೆಯಲಾಗಿದೆ. ಇದರಲ್ಲಿ ನೀರಿನಿಂದ ವಿದ್ಯುತ್ತನ್ನು ನಿರ್ಮಿಸುವ ಬಗ್ಗೆ ವರ್ಣಿಸಲಾಗಿದೆ.
೨. ‘ಶಕ್ತಿ’ಯನ್ನು ಪ್ಯಾಕೆಟ್‌ಗಳಲ್ಲಿಡಲಾಗುತ್ತದೆ ಎಂಬ ವಿಜ್ಞಾನಕ್ಕೆ ತಿಳಿದ ಸತ್ಯವನ್ನು ಉಪನಿಷತ್ತುಗಳಲ್ಲಿ ಸಾವಿರಾರು ವರ್ಷಗಳ ಹಿಂದೆ ನೀಡಲಾಗಿದೆ !
ಗಣಿತ, ಬೀಜಗಣಿತ, ವರ್ಗ ಸಮೀಕರಣ ಇತ್ಯಾದಿಗಳಿಗೆ ಭಾರತವೇ ಮೂಲ !
ಪೃಥ್ವಿಗೆ ಸೂರ್ಯನ ಸುತ್ತಲೂ ಪ್ರದಕ್ಷಿಣೆಯನ್ನು ಹಾಕಲು ೩೬೫.೨೫೮೧ ದಿನಗಳು ಬೇಕಾಗುತ್ತವೆ ಎಂಬ ಗಣಿತವನ್ನು ಭಾಸ್ಕರಾಚಾರ್ಯರು ಎಷ್ಟೋ ಶತಕಗಳ ಹಿಂದೆಯೇ ಮಾಡಿ ತೋರಿಸಿದ್ದರು. ‘ಪೈ’ ಇದರ ಮೌಲ್ಯವನ್ನು ಎಲ್ಲಕ್ಕಿಂತ ಮೊದಲು ಬುಧಾಯನರವರು ಮಾಡಿ ತೋರಿಸಿದ್ದಾರೆ. ಆಧುನಿಕ ಪೈಥಾಗೋರಸ್ ಪ್ರಮೇಯದ ಸ್ಪಷ್ಟೀಕರಣವನ್ನು ಅವರು ಎಷ್ಟೋ ಮೊದಲು ಅಂದರೆ ೬ ನೇ ಶತಮಾನದಲ್ಲಿ ಯುರೋಪಿಯನ್ ಗಣಿತ ತಜ್ಞರಿಗಿಂತ ಮೊದಲೇ ಮಾಡಿದ್ದರು. ಬೀಜಗಣಿತ, ಕಲನಶಾಸ್ತ್ರ, ತ್ರಿಕೋನಮಿತಿಯ ಇವೆಲ್ಲವೂಗಳು ಭಾರತದಲ್ಲೇ ಉಗಮವಾಗಿದೆ. ಶ್ರೀಧರಾಚಾರ್ಯರು ೧೧ ನೇ ಶತಮಾನದಲ್ಲಿ ವರ್ಗ ಸಮೀಕರಣವನ್ನು ತಿಳಿಸಿ ಹೇಳಿದ್ದಾರೆ. ಗ್ರೀಕ್ ಮತ್ತು ರೋಮನ್ನರು ಹೆಚ್ಚೆಂದರೆ ‘೧೦ ರ ೬ ನೇ ವರ್ಗ’ ಇಲ್ಲಿಯವರೆಗೆ ಸಂಖ್ಯೆಯ ಬಳಕೆಯನ್ನು ಮಾಡುತ್ತಿದ್ದರು. ಆಗ ಭಾರತದಲ್ಲಿ ಕ್ರಿಸ್ತಪೂರ್ವ ೫೦೦೦ ರಲ್ಲಿ ‘೧೦ ರ ೫೩ ನೇ ವರ್ಗದ ವರೆಗಿನ ಸಂಖ್ಯೆಯು ಬಳಕೆಯಲ್ಲಿತ್ತು ಮತ್ತು ಅದಕ್ಕೆ ವಿಶಿಷ್ಟ ಸಂಜ್ಞೆಯನ್ನು ನೀಡಿದ್ದರು. ಇಂದು ಕೂಡಾ ಕೇವಲ ೧೦ ರ ೧೨ ನೇ ವರ್ಗದ ವರೆಗಿನ ಹೆಸರುಗಳನ್ನು ಉಪಯೋಗಿಸುತ್ತಾರೆ.