ಆರೋಗ್ಯ!

ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳ ಪಾಲನೆಯಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದೆ;

‘ಚೈನೀಸ್’ ಪದಾರ್ಥಗಳನ್ನು ಆಗಾಗ ಸೇವಿಸುವುದರ ದುಷ್ಪರಿಣಾಮ !

‘ಚೈನೀಸ್’ ಪದಾರ್ಥಗಳನ್ನು ಆಗಾಗ ಸೇವಿಸುವುದರಿಂದ ಅಜೀರ್ಣ, ಹೊಟ್ಟೆ ನೋವು, ಜಂತುಗಳು, ‘ಗ್ಯಾಸೆಸ್‌’, ಕೀಲುನೋವು, ಉರಿಯು ವುದು ಮತ್ತು ಪಿತ್ತಕ್ಕೆ ಸಂಬಂಧಪಟ್ಟಿರುವ ರೋಗಗಳಂತಹ ಶಾರೀರಿಕ ರೋಗಗಳು ಮತ್ತು ಸಿಡಿಮಿಡಿ ಹೀಗೆ ಅನೇಕ ಮಾನಸಿಕ ರೋಗಗಳಾಗುತ್ತವೆ.

ಶಾಕಾಹಾರದ ಮಹತ್ವ !

ಪ್ರತ್ಯಕ್ಷ ಆಹಾರಸೇವನೆಯಲ್ಲಿ ಶಾಕಾಹಾರ ಮತ್ತು ಮಾಂಸಾಹಾರ ಎಂಬ ೨ ವಿಧಗಳಿವೆ. ಉದಾಹರಣೆ  ಆಹಾರದ ಶುದ್ಧತೆ, ಸಾತ್ತ್ವಿಕತೆ ಇತ್ಯಾದಿ ವಿಷಯಗಳನ್ನು ಕೇವಲ ಶಾಕಾಹಾರಿ ಆಹಾರದ ವಿಷಯದ ವಿಚಾರದಲ್ಲಿ ತೆಗೆದುಕೊಳ್ಳಲು ಸಾಧ್ಯ.

ವಸಂತ ಋತುವಿನಲ್ಲಿ ಕಾಮಕಸ್ತೂರಿ ಬೀಜಗಳನ್ನು ಅಪರೂಪಕ್ಕೊಮ್ಮೆ ಮತ್ತು ಸ್ವಲ್ಪ ಮಟ್ಟಿಗೆ ಸೇವಿಸಿ !

ಸದ್ಯ ವಸಂತ ಋತು ಪ್ರಾರಂಭವಾಗಿದೆ. ಇದು ನಿಸರ್ಗತಃ ಕಫವನ್ನು ಹೆಚ್ಚಿಸುವ ಕಾಲವಾಗಿರುವುದರಿಂದ ನಿಯಮಿತವಾಗಿ ಸಬ್ಜಾ ತಿನ್ನುವವರಿಗೆ ಶೀತ-ಕೆಮ್ಮಿನ ತೊಂದರೆಗಳು ಹೆಚ್ಚಾಗಬಹುದು.

ಪ್ರತಿದಿನದ ದಿನಕ್ರಮದಲ್ಲಿ ಪಾಲಿಸಬಹುದಾದ ಕೆಲವು ನಿಯಮಗಳು

ಬೆಳಗಿನ ಉಪಾಹಾರ (ತಿಂಡಿ) ಎಲ್ಲರಿಗೂ ಕಡ್ಡಾಯವಾಗಿಲ್ಲ. ಕಫ ಪ್ರಕೃತಿ, ಅಜೀರ್ಣ, ಹಸಿವು ಆಗದಿದ್ದರೆ, ಬೇಸಿಗೆಕಾಲ-ಮಳೆಗಾಲ ಈ ಋತುಗಳಲ್ಲಿ ಉಪಾಹಾರವನ್ನು ಸೇವಿಸಬಾರದು; ಆದರೆ ಇಂತಹ ಸಮಯದಲ್ಲಿ ಊಟ ಮಾತ್ರ ಮಧ್ಯಾಹ್ನ ೧ ಗಂಟೆಯ ಒಳಗೆ ಮಾಡಬೇಕು.

ಮಿತಾಹಾರ ಮತ್ತು ಪ್ರಾಣಾಯಾಮ ಈ ಯಜ್ಞಗಳಿಂದ ಪಾತಕಗಳು ನಾಶವಾಗುತ್ತವೆ !

ಮಿತವಾದ ಆಹಾರವನ್ನು ಸೇವಿಸುವವರು ಪ್ರಾಣವಾಯುಗಳ ಸ್ಥಾನದಲ್ಲಿ ಹವನವನ್ನು ಮಾಡುತ್ತಾರೆ, ಅಂದರೆ ಪ್ರಾಣಾಪಾನಾದಿ ಎಲ್ಲ ವಾಯುಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳುತ್ತಾರೆ. ಈ ಎಲ್ಲ ಯಜ್ಞಕರ್ತರ ಪಾತಕಗಳು ಈ (ಬೇರೆಬೇರೆ) ಯಜ್ಞಗಳಿಂದ ನಾಶವಾಗಿವೆ ಎಂದು ಅರಿವಾಗುತ್ತದೆ.

ರೋಗಗಳು ಮತ್ತು ಪಥ್ಯಾಪಥ್ಯಗಳು

ಯಾವುದಾದರೊಂದು ಕಾಯಿಲೆಯಲ್ಲಿ, ವಿಶೇಷವಾಗಿ ಹೊಟ್ಟೆಯ ತಕರಾರು ಇದ್ದಾಗ ಆ ವಿಶಿಷ್ಟ ಕಾಯಿಲೆ ಹೆಚ್ಚಾಗಬಾರದು ಅಥವಾ ನಮಗೆ ತೊಂದರೆಯಾಗಬಾರದೆಂದು ಔಷಧಗಳ ಪದ್ಧತಿ ಯಾವುದಾಗಿದ್ದರೂ ಔಷಧಗಳೊಂದಿಗೆ ಪಥ್ಯವನ್ನು ಪಾಲಿಸಲೇಬೇಕಾಗುತ್ತದೆ.

ಆಯುರ್ವೇದ ಮತ್ತು ಅಧ್ಯಾತ್ಮ ಇದರ ಅಡಿಪಾಯ ದೃಢವಾಗುತ್ತಿರುವ ಚಿಹ್ನೆಗಳು

ಜೇಬು ತುಂಬಾ ಸಂಬಳ ಗಳಿಸಿದರೂ ಮಾನಸಿಕ ಶಾಂತಿ ಕೊಂಡುಕೊಳ್ಳಲು ಸಾಧ್ಯವಿಲ್ಲ, ಇದರ ಅರಿವು ಆಗಿರುವುದರಿಂದ, ವಿಶೇಷವಾಗಿ ಈ ಕ್ಷೇತ್ರದ ಜನರ ಒಲವು ಅಧ್ಯಾತ್ಮ, ಧಾರ್ಮಿಕತೆಯ ಕಡೆಗೆ ಹೆಚ್ಚಾಗಿದೆ.

ಸ್ತ್ರೀಯರನ್ನು ಕಾಡುವ ಕೆಲವು ತಪ್ಪುಕಲ್ಪನೆಗಳು !

ಮೂತ್ರನಾಳದಲ್ಲಿ (ಯುರಿನ್‌ ಇನ್ಫೆಕ್ಶನ್) ಮತ್ತು ಯೋನಿ ಮಾರ್ಗದಲ್ಲಿ ಆಗುವ ಸೋಂಕಿನ ಲಕ್ಷಣಗಳು ಅನೇಕ ಬಾರಿ ಒಂದೇ ತರಹವಿರುತ್ತವೆ. ಇಂತಹ ಸಮಯದಲ್ಲಿ ಸ್ತ್ರೀಯರು ಸ್ತ್ರೀರೋಗತಜ್ಞರ ಬಳಿಗೆ ಹೋಗದೇ ಪರಿಚಯದ ಆಧುನಿಕ ವೈದ್ಯರಿಂದ ಪರಿಶೀಲಿಸಿಕೊಳ್ಳುತ್ತಾರೆ.

ಸಾತ್ತ್ವಿಕ ಆಹಾರವನ್ನು ಸೇವಿಸುವುದರ ಮಹತ್ವ !

ಎಷ್ಟು ಸಾತ್ತ್ವಿಕ, ಶುದ್ಧ ಆಹಾರವಿರುತ್ತದೆಯೋ, ಅಷ್ಟು ಸ್ವಭಾವ ಸಾತ್ತ್ವಿಕವಾಗಿರುತ್ತದೆ. ಸಾತ್ತ್ವಿಕ ಆಹಾರವೆಂದರೆ ಕೊಬ್ಬಿನ ಆಹಾರವಲ್ಲ. ಸಾತ್ತ್ವಿಕತೆಯು ಸಮರ್ಪಣೆ ಮತ್ತು ಭಕ್ತಿಪ್ರೀತಿಯನ್ನು ಒಳಗೊಂಡಿರುತ್ತದೆ. ಸಾತ್ತ್ವಿಕ ಆಹಾರವು ಶುದ್ಧ ಧನದ, ಶುದ್ಧ ಮನಸ್ಸಿನ ಮತ್ತು ಶುದ್ಧತೆಯ ಸಾರವಿರುತ್ತದೆ.