೧. ಹೊರಗಿನ ಶೌಚಾಲಯಗಳಿಂದ ಸೋಂಕು ತಗಲುತ್ತದೆ, ಎಂಬುದು ದೊಡ್ಡ ತಪ್ಪುಕಲ್ಪನೆ !
‘ಹೊರಗಿನ ಶೌಚಾಲಯಗಳನ್ನು ಬಳಸುವುದರಿಂದ ಸೋಂಕಾಗುತ್ತದೆ’, ಎಂಬುದು ತಪ್ಪುಕಲ್ಪನೆಯಾಗಿದೆ. ಈ ತಪ್ಪುಕಲ್ಪನೆಯಿಂದ ಹೆಚ್ಚಿನ ಸ್ತ್ರೀಯರು ತಮಗೆ ಹಾನಿ ಮಾಡಿಕೊಳ್ಳುತ್ತಾರೆ. ಶೌಚಾಲಯಗಳು ಎಷ್ಟೇ ಗಲೀಜಾಗಿದ್ದರೂ, ಅದರಿಂದ ಸ್ತ್ರೀಯರಿಗೆ ಸೋಂಕಾಗುವುದಿಲ್ಲ; ಏಕೆಂದರೆ ಈ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಹೆಚ್ಚಿನ ಮಹಿಳೆಯರು ಶೌಚಾಲಯದಲ್ಲಿ ಎಲ್ಲಿಯೂ ಸ್ಪರ್ಶವಾಗದಂತೆ ಮೂತ್ರ ವಿಸರ್ಜನೆ ಮಾಡಬಹುದು. ಹೀಗಿರುವಾಗ ‘ಟಾಯಲೆಟ್’ಗೆ ಹೋಗಬಾರದೆಂದು ಅವರು ನೀರು ಕಡಿಮೆ ಪ್ರಮಾಣದಲ್ಲಿ ಕುಡಿಯುತ್ತಾರೆ ಮತ್ತು ಮೂತ್ರವಿಸರ್ಜನೆಗೆ ಹೋಗುವ ಅವಕಾಶವಿರುವಾಗ ಅದರ ವೇಗವನ್ನು ತಡೆಯುತ್ತಾರೆ. ಇದು ರೋಗಾಣುಗಳಿಂದ ಸೋಂಕಾಗುವುದರ ಮುಖ್ಯ ಕಾರಣ ವಾಗಿರುತ್ತದೆ. ಈ ತಡೆಹಿಡಿದ ಮೂತ್ರದಿಂದ ಬಹಳ ಬೇಗ ಸೋಂಕಾಗುತ್ತದೆ. ಈ ಕುರಿತು ಜನಜಾಗೃತಿ ಮಾಡುವುದು ಅವಶ್ಯಕವಾಗಿದೆ. ವಾಸ್ತವದಲ್ಲಿ ಸಾರ್ವಜನಿಕ ಶೌಚಾಲಯಗಳು ಭಾರತೀಯ ಪದ್ಧತಿಯಲ್ಲಿರುವುದು ಮಹಿಳೆಯರ ಆರೋಗ್ಯಕ್ಕಾಗಿ ಹೆಚ್ಚು ಹಿತವಾಗಿವೆÉ. ಅವುಗಳನ್ನು ಸ್ವಚ್ಛವಾಗಿಡಲು ಸುಲಭವಿದೆ.
೨. ನೀರಿನ ಸೇವನೆ ಅಲ್ಪವಾದಾಗ ಸೋಂಕಿನ ಅಪಾಯ ಹೆಚ್ಚು
ನೀರು ಕಡಿಮೆ ಕುಡಿಯುವ ಅಭ್ಯಾಸವಿದ್ದರೆ, ಮೂತ್ರನಾಳವು ಶುಷ್ಕವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮೂತ್ರನಾಳದ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಸೋಂಕು ಆಗುತ್ತದೆ. ಮಹಿಳೆಯರು ಪ್ರತಿದಿನ ೮ ರಿಂದ ೧೦ ಲೋಟ ನೀರು ಕುಡಿಯುವುದು ಅವಶ್ಯಕವಾಗಿದೆ. ಮಳೆಗಾಲದಲ್ಲಿ ಅಥವಾ ಹವಾನಿಯಂತ್ರಿತ ವಾತಾವರಣದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬಾಯಾರಿಕೆ ಆಗಿರುವುದರ ಅರಿವಾಗುವುದಿಲ್ಲ. ಆದ್ದರಿಂದ ಅವರಿಂದ ಕಡಿಮೆ ನೀರು ಕುಡಿಯಲಾಗುತ್ತದೆ.
೩. ಸೋಂಕಾದರೆ ಸ್ತ್ರೀರೋಗತಜ್ಞರ ಸಲಹೆ ಪಡೆಯಿರಿ !
ಮೂತ್ರನಾಳದಲ್ಲಿ (ಯುರಿನ್ ಇನ್ಫೆಕ್ಶನ್) ಮತ್ತು ಯೋನಿ ಮಾರ್ಗದಲ್ಲಿ ಆಗುವ ಸೋಂಕಿನ ಲಕ್ಷಣಗಳು ಅನೇಕ ಬಾರಿ ಒಂದೇ ತರಹವಿರುತ್ತವೆ. ಇಂತಹ ಸಮಯದಲ್ಲಿ ಸ್ತ್ರೀಯರು ಸ್ತ್ರೀರೋಗತಜ್ಞರ ಬಳಿಗೆ ಹೋಗದೇ ಪರಿಚಯದ ಆಧುನಿಕ ವೈದ್ಯರಿಂದ ಪರಿಶೀಲಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅವರು ‘ಕೆಮಿಸ್ಟ’ರಿಂದ ತಾತ್ಕಾಲಿಕ ಔಷಧಗಳನ್ನು ತೆಗೆದುಕೊಳ್ಳುವುದು ಇದು ಅವರಿಗಾಗಿ ಹಾನಿಕರವಾಗಿರುತ್ತದೆ. ಆದ್ದರಿಂದ ರೋಗಿಯು ಅನಗತ್ಯ ತೊಂದರೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ.
– ಡಾ. ಶಿಲ್ಪಾ ಚಿಟಣಿಸ ಜೋಶಿ, ಸ್ತ್ರೀರೋಗ ಮತ್ತು ಬಂಜೆತನ ನಿವಾರಣಾ ತಜ್ಞರು, ಕೊಥರೂಡ, ಪುಣೆ. (ಆಧಾರ : ಫೆಸಬುಕ್)